Ration Card: ಹೊಸ BPL ಕಾರ್ಡಿಗಾಗಿ ಕಾಯುತ್ತಿರುವವರಿಗೆ ಬೇಸರದ ಸುದ್ದಿ, ಇಂತಹ ಕುಟುಂಬಗಳ ಅರ್ಜಿ ರಿಜೆಕ್ಟ್.

ಇಂತಹ ರೇಷನ್ ಕಾರ್ಡ್ ಅರ್ಜಿಗಳನ್ನ ರಿಜೆಕ್ಟ್ ಮಾಡಿದ ಸರ್ಕಾರ

Ration Card Application Rejection: ಸದ್ಯ ರಾಜ್ಯದಲ್ಲಿ BPL ರೇಷನ್ ಕಾರ್ಡ್ ನ ಡಿಮ್ಯಾಂಡ್ ಹೆಚ್ಚಿದೆ ಎನ್ನಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಯೋಜನೆಗಳ ಪ್ರಯೋಜನವನ್ನು BPL ಮತ್ತು AAY Ration Card ಹೊಂದಿರುವವರಿಗೆ ನೀಡುತ್ತಿದೆ. ಈ ಕಾರಣಕ್ಕೆ ಜನರು ಹೆಚ್ಚಾಗಿ ಈ ಎರಡು ರೇಷನ್ ಕಾರ್ಡ್ ಅನ್ನು ಪಡೆಯಲು ಬಯಸುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಲಕ್ಷಾಂತರ ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ.

Ration Card Application Latest
Image Credit: The Hans India

ಹೊಸ BPL ಕಾರ್ಡಿಗಾಗಿ ಕಾಯುತ್ತಿರುವವರಿಗೆ ಬೇಸರದ ಸುದ್ದಿ
ಸದ್ಯ ಆಹಾರ ಇಲಾಖೆ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುತ್ತಿರುವವರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ. ಕಾರಣ ಅನರ್ಹರು ಕೂಡ ಬಡವರು ಪಡೆಯಬೇಕಿದ್ದ ಪಡಿತರ ಚೀಟಿಯನ್ನು ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಸರ್ಕಾರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವವರಿಗೆ ಕಠಿಣ ನಿಯಮ ಜಾರಿಗೊಳಿಸಿದೆ. ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಲಾಗಿರುವ ಸಾಕಷ್ಟು ಅರ್ಜಿಯನ್ನು ಆಹಾರ ಇಲಾಖೆ ರಿಜೆಕ್ಟ್ ಮಾಡಿದೆ.

ಇಂತಹ ಕುಟುಂಬಗಳ ಅರ್ಜಿ ರಿಜೆಕ್ಟ್
ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ BPL ಮತ್ತು AAY ರೇಷನ್ ಕಾರ್ಡ್ ಹೊಂದಿರುವವರಿಗೆ ಉಚಿತ ಪಡಿತರನ್ನು ನೀಡಲಾಗುತ್ತಿದೆ. ಆದರೆ ಸದ್ಯ ಅನರ್ಹರು ಕೂಡ ಈ ರೇಷನ್ ಕಾರ್ಡ್ ಅನ್ನು ಹೊಂದುವ ಮೂಲಕ ಸರ್ಕಾರ ಯೋಜನೆಗಳ ಲಾಭವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಅರ್ಹರಿಗೆ ಮಾತ್ರ ಪಡಿತರ ಚೀಟಿಯನ್ನು ನೀಡಲು ನಿರ್ಧರಿಸಿದೆ.

Ration Card Application Rejection
Image Credit: Rightsofemployees

ಅನರ್ಹರು ಅರ್ಜಿ ಸಲ್ಲಿಸಿದ್ದರೆ ಅಂತವರ ಅರ್ಜಿಯನ್ನು ರಿಜೆಕ್ಟ್ ಮಾಡಲು ಆಹಾರ ಇಲಾಖೆ ನಿರ್ಧರಿಸಿದೆ. ಇನ್ನು ರದ್ದುಪಡಿಸಲಾದ ಅರ್ಜಿಯ ವಿವರವನ್ನು ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ನೀಡಲಾಗಿರುತ್ತದೆ. ನೀವು https://ahara.kar.nic.in/ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನಿಮ್ಮ ಅರ್ಜಿ ರಿಜೆಕ್ಟ್ ಆಗಿದೆಯೋ ಅಪ್ರು ಆಗಿದೆಯೂ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಲಬಹುದು.

Join Nadunudi News WhatsApp Group

Join Nadunudi News WhatsApp Group