Ration Card: ಹೊಸ ರೇಷನ್ ಕಾರ್ಡ್ ಅರ್ಜಿದಾರರ ಗಮನಕ್ಕೆ, ಅರ್ಜಿ ಸಲ್ಲಿಕೆಗೆ ಈ ದಾಖಲೆಗಳು ಅಗತ್ಯ.

ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಸರ್ಕಾರ ಹಲವು ನಿಯಮಗಳನ್ನು ಜಾರಿಗೊಳಿಸಿದೆ.

Ration Card Apply Documents: ರೇಷನ್ ಕಾರ್ಡ್ (Ration Card) ಇತ್ತೀಚಿಗೆ ಮುಖ್ಯವಾದ ದಾಖಲೆ ಆಗಿದೆ. ರಾಜ್ಯದ ಕಾಂಗ್ರೆಸ್(Congress) ಸರ್ಕಾರ 10 ಕೆಜಿ ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿದೆ.ಆದರೆ ಭತ್ತದ ಉತ್ಪಾದನೆ ಕಡಿಮೆ ಆಗಿದ್ದರಿಂದ 10 ಕೆಜಿ ಅಕ್ಕಿ ನೀಡಲು ಸಾಧ್ಯವಾಗದೆ 5 ಕೆಜಿ ಅಕ್ಕಿ ನೀಡುವುದಾಗಿ ಮತ್ತು ಇನ್ನುಳಿದ 5 ಕೆಜಿ ಅಕ್ಕಿಯ ಹಣವನ್ನು ನೀಡುವುದಾಗಿದೆ. ಸರ್ಕಾರ ಅನ್ನಭಾಗ್ಯದ ಒಂದನೇ ಸುತ್ತು ಸಭೆ ನೆಡದಿದೆ.

ರೇಷನ್ ಕಾರ್ಡ್ ಪ್ರತಿಯೊಬ್ಬರ ಮನೆಯಲ್ಲೂ ಇದೆ . ಮನೆಯಲ್ಲಿ ಯಾರಾದರೂ ಇನ್ಕಮ್ ಟ್ಯಾಕ್ಸ್(Income Tax) ಕಟ್ಟುತಿದ್ದರೆ ಅವರಿಗೆ ಎಪಿಎಲ್ ಕಾರ್ಡ್ ಸಿಗುತ್ತದೆ, ಹಾಗೆ ಬಡವರಿಗೆ ಬಿಪಿಎಲ್ ಕಾರ್ಡ್ ಸಿಗುತ್ತದೆ. ಇತ್ತೀಚಿಗೆ ಬಿಡುಗಡೆಯಾಗಿರುವ ಕಾಂಗ್ರೆಸ್ ಯೋಜನೆಗಳಿಗೆ ರೇಷನ್ ಕಾರ್ಡ್ ಅಗತ್ಯವಾಗಿದೆ. ಈ ಕಾರಣಗಳಿಗೆ ಹೆಚ್ಚಿನ ಜನರು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಸರ್ಕಾರ ಹಲವು ನಿಯಮಗಳನ್ನು ಜಾರಿಗೊಳಿಸಿದೆ.

Apply for BPL Ration Card in this way
Image Credit: Informalnewz

ಈ ರೀತಿಯಾಗಿ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ
ಹಿಂದಿನ ದಿನಗಳಲ್ಲಿ ರೇಷನ್ ಕಾರ್ಡ್ ಮಾಡಿಸಬೇಕು ಅಂದರೆ ತಾಲ್ಲೂಕ್ ಆಫೀಸ್ ಗೆ ಹೋಬೇಕು. ಇತೀಚಿನ ದಿನಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ರೇಷನ್ ಕಾರ್ಡ್ ಗೆ ಮನೆಯವರ ಹೆಸರನ್ನು ಸೇರಿಸಬೇಕು ಅನ್ನೋದಾದಾರರೇ 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಆಗಿದ್ದರೆ ಅವರಿಗೆ ಆಧಾರ್ ಕಾರ್ಡ್ ಅಥವಾ ಬಯೊಮೀಟ್ರಿಕ್ ನೀಡಬೇಕಗುತ್ತದೆ.

ಆಧಾರ್ ಕಾರ್ಡ್ ನಲ್ಲಿ ಹೆಸರು ,ಮೊಬೈಲ್ ಸಂಖ್ಯೆ ,ಹೆಸರು , ವಿಳಾಸ, ಫೋಟೋ ಎಲ್ಲವೂ ಸರಿಯಾಗಿ ಕಾಣಿಸಬೇಕು. ಆಧಾರ್ ಕಾರ್ಡ್ ಲಿ ಮೊಬೈಲ್ ಸಂಖ್ಯೆ ಕಡ್ಡಾಯವಾಗಿದೆ. ಅವರ ಮನೆಯ ವಾರ್ಡ್ ನಂಬರ್ ಬೇಕಾಗುತ್ತೆ. ಮನೆಯ ಹಿರಿಯವರನ್ನು ಮುಖ್ಯಸ್ಥೆಯಾಗಿ ಆಯ್ಕೆ ಮಾಡಬಹುದು. ಅರ್ಜಿಯನ್ನು ಸ್ವಯಂ, ಚಾಲಿತ ಸಂಬಂಧಪಟ್ಟ ವಾರ್ಡ್ ಅಥವಾ ಗ್ರಾಮ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ.

Ration Card Apply Documents
Image Credit: India

ನಿಮ್ಮ ಅರ್ಜಿಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ ಅನುಮೋದಿಸುತ್ತಾರೆ. ನೀವು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ ನಿಮ್ಮ ಅರ್ಜಿ ಸಲ್ಲಿಕೆಯನ್ನು ಪರಿಗಣಿಸಲಾಗುತ್ತದೆ. ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಬಿಪಿಎಲ್ ಪಡಿತರ ಚೀಟಿ ನಿಮಗೆ ತಲುಪಲಿದೆ. ಇನ್ನು ಅರ್ಜಿದಾರರು ಯಾವುದೇ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚಿಟಿಗೆ ಅರ್ಜಿ ಸಲ್ಲಿಸುವಂತಿಲ್ಲ. ಅಂತವರ ವಿರುದ್ಧ ಆಹಾರ ಇಲಾಖೆ ಕ್ರಮ ಕೈಗೊಳ್ಳುತ್ತದೆ.

Join Nadunudi News WhatsApp Group

Join Nadunudi News WhatsApp Group