Cancellation Of Ration Card: BPL ಕಾರ್ಡ್ ಇದ್ದವರಿಗೆ ಶಾಕಿಂಗ್ ಸುದ್ದಿ, ಇಂತಹ ಕುಟುಂಬಗಳ ರೇಷನ್ ಕಾರ್ಡ್ ರದ್ದು ಮಾಡಲು ಆದೇಶ

ಇಂತಹ ಕುಟುಂಬಗಳ ರೇಷನ್ ಕಾರ್ಡ್ ರದ್ದು ಮಾಡಲು ಆದೇಶ

Ration Card Cancellation Latest Update: ರಾಜ್ಯದಲ್ಲಿ BPL ಪಡಿತರ ಚೀಟಿಯು ಜನಸಾಮಾನ್ಯರಿಗೆ ಎಷ್ಟು ಪ್ರಯೋಜನಕಾರಿ ಆಗಿದೆ ಎನ್ನುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು BPL Ration Card ಹೊಂದುವುದು ಅತಿ ಅವಶ್ಯಕ.

ಹೋಗಿರುವ ಅರ್ಹರು ಪಡಿತರ ಚೀಟಿಯನ್ನು ಪಡೆಯಲು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ರಾಜ್ಯದಲ್ಲಿ BPL ರೇಷನ್ ಕಾರ್ಡ್ ಪಡೆಯುವಲ್ಲಿ ಕೂಡ ಸ್ಯಾಮ್ ನಡೆಯುತ್ತಿದೆ. ಹೌದು, ರಾಜ್ಯದಲ್ಲಿ ಸಾಕಷ್ಟು ಅನರ್ಹರು ಕೂಡ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

Ration Card Cancellation Latest News
Image Credit: Odishatv

BPL ಕಾರ್ಡ್ ಇದ್ದವರಿಗೆ ಶಾಕಿಂಗ್ ಸುದ್ದಿ
ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆ ಮುಗಿದಿದೆ . ಚುನಾವಣೆಯ ನಂತರ ದೇಶದಲ್ಲಿ ಅನೇಕ ಯೋಜನೆಗಳ ಜೊತೆಗೆ ಬದಲಾವಣೆ ಕೂಡ ತರಲಾಗಿದೆ. ಸದ್ಯ ರಾಜ್ಯ ಸರ್ಕಾರ ಮುಖ್ಯವಾಗಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ನೀಡುವುದರ ಜೊತೆಗೆ ಇಂತಹ ಕುಟುಂಬದ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಕೂಡ ಮುಂದಾಗಿದೆ.

ಈಗಾಗಲೇ ಕೇಂದ್ರ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 1.03 ಕೋಟಿ ಆದ್ಯತಾ ಪಡಿತರ ಕುಟುಂಬಗಳು (ಬಿಪಿಎಲ್) ಮತ್ತು 10.83 ಲಕ್ಷ ಅಂತ್ಯೋದಯ ಕುಟುಂಬಗಳು ಒಟ್ಟಾಗಿ 1.14 ಕೋಟಿ ನಿಗದಿಪಡಿಸಿದೆ. ಆದರೆ ರಾಜ್ಯದಲ್ಲಿ ಈಗಾಗಲೇ ಕೇಂದ್ರದ ಮಿತಿ ಮೀರಿ 10.33 ಲಕ್ಷ ಹೆಚ್ಚುವರಿ ಬಿಪಿಎಲ್ ಕುಟುಂಬಗಳಿದ್ದು, ಅವರಿಗೆ ರಾಜ್ಯ ಸರಕಾರ ಪ್ರತಿ ತಿಂಗಳು ತನ್ನ ಸ್ವಂತ ಖರ್ಚಿನಲ್ಲಿ ಪಡಿತರ ನೀಡುತ್ತಿದೆ. ಇದೇ ವೇಳೆ ಲಕ್ಷಾಂತರ ಹೊಸ ಅರ್ಜಿಗಳು ಬಾಕಿ ಉಳಿದಿವೆ. ಹಾಗಾಗಿ ಅನರ್ಹರನ್ನು ಪತ್ತೆ ಹಚ್ಚಲು ಸಿದ್ಧತೆ ನಡೆಸಲಾಗುತ್ತಿದೆ.

Ration Card Cancellation 2024
Image Credit: News 9 Live

ಇಂತಹ ಕುಟುಂಬಗಳ ರೇಷನ್ ಕಾರ್ಡ್ ರದ್ದು ಮಾಡಲು ಆದೇಶ
ಆರ್ಥಿಕವಾಗಿ ಸಬಲರಾಗಿರುವ ಆದರೆ ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿರುವವರು ಅಥವಾ ಹಿಂದೆ ಬಿಪಿಎಲ್ ಆಗಿದ್ದವರು ಮತ್ತು ಈಗ ಬಡತನ ರೇಖೆಗಿಂತ ಮೇಲಿರುವವರನ್ನು ಗುರುತಿಸುವುದು ಸರ್ಕಾರದ ಗುರಿಯಾಗಿದೆ. ಅಲ್ಲದೇ ಬಿಪಿಎಲ್ ಕುಟುಂಬಗಳಲ್ಲಿ ಮೃತಪಟ್ಟವರ ಹೆಸರನ್ನು ಅಳಿಸಿಲ್ಲ. ಸತ್ತವರ ಹೆಸರನ್ನು ತೆಗೆದುಹಾಕಿದರೆ ಹೊರೆ ಕಡಿಮೆಯಾಗುತ್ತವೆ.

Join Nadunudi News WhatsApp Group

ಈ ಬಗ್ಗೆ ಕೂಡ ಸರ್ಕಾರ ನಿಯಮ ರೂಪಿಸಿದೆ. ಪ್ರತಿ ತಿಂಗಳು ಒಟ್ಟು ಬಿಪಿಎಲ್ ಕಾರ್ಡ್ ಹೊಂದಿರುವವರ ಶೇ. 80-83ರಷ್ಟು ಕುಟುಂಬಗಳು ಮಾತ್ರ ಪಡಿತರ ಪಡೆಯುತ್ತಿವೆ. ಉಳಿದವರು ಹಲವು ತಿಂಗಳಿಂದ ಪಡಿತರನ್ನು ಪಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸತತ ಮೂರು ತಿಂಗಳು ಪಡಿತರ ಪಡೆಯಲು ಬಾರದ ಕಾರ್ಡ್‌ ಗಳನ್ನು ಅಮಾನತುಗೊಳಿಸಿ, ಸತತ 6 ತಿಂಗಳು ಬರದಿದ್ದರೆ ಸಂಪೂರ್ಣ ರದ್ದುಪಡಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ.

Ration Card Cancellation
Image Credit: India Todayne

Join Nadunudi News WhatsApp Group