Ration Card: ಇನ್ನುಮುಂದೆ ಇಂತವರಿಗೆ ಸಿಗಲ್ಲ ಉಚಿತ ಅಕ್ಕಿ, 10 ಲಕ್ಷ BPL ಕಾರ್ಡ್ ರದ್ದು, ಈಗಲೇ ಚೆಕ್ ಮಾಡಿಕೊಳ್ಳಿ.

ಇಂತವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಮುಂದಾದ ಸರ್ಕಾರ.

Ration Card Cancellation: ಇದೀಗ ಆಹಾರ ಇಲಾಖೆ (Food Department)ಪಡಿತರ ಚೀಟಿದಾರರಿಗೆ ಮಹತ್ವದ ಆದೇಶ ಒಂದನ್ನು ಹೊರಡಿಸಿದೆ. ಸರ್ಕಾರ ಬಡತನ ಎದುರಿಸುತ್ತಿರುವ ಕುಟುಂಬಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ BPL ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡುತ್ತಿದ್ದೆ.

ಸದ್ಯ ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ BPL ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉಚಿತವಾಗಿ ಅಕ್ಕಿ ನೀಡಲಾಗುತ್ತಿದ್ದು ರಾಜ್ಯದಲ್ಲಿ ಲಕ್ಷಾಂತರ ಜನರು ಉಚಿತ ಅಕ್ಕಿ ಪಡೆದುಕೊಳ್ಳುತ್ತಿದ್ದರೆ ಂದು ಹೇಳಬಹುದು. ಇದರ ನಡುವೆ ರಾಜ್ಯ ಸರ್ಕಾರ ಹೊಸ ನಿಯಮವನ್ನ ಜಾರಿಗೆ ತಂದಿದ್ದು ಸುಮಾರು ಹತ್ತು ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ರದ್ದು ಮಾಡಲು ತೀರ್ಮಾನವನ್ನ ಮಾಡಿದೆ.

Govt gives shock to BPL card users
Image Credit: TV9hindi

ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ಶಾಕ್ ನೀಡಿದ ಸರ್ಕಾರ
ರಾಜ್ಯ ಸರ್ಕಾರ ಇದೀಗ BPL ಕಾರ್ಡ್ ಪಡೆದುಕೊಳ್ಳಲು ಅರ್ಹತೆ ಇಲ್ಲದವವರನ್ನು ಗುರುತಿಸಿ ಕೈಬಿಡಲು ಮುಂದಾಗಿದೆ. ಬಡತನ ರೇಖೆಗಿಂತ ಮೇಲೆ ಇರುವವರು ಬಿಪಿಎಲ್ ಕಾರ್ಡ್ ಅನ್ನು ಬಳಕೆ ಮಾಡುತ್ತಿದ್ದಾರೆ ಅನ್ನುವ ಆರೋಪ ಕೇಳಿ ಬರುತ್ತಿದೆ. ಹಾಗಾಗಿ ಅಂತವರ ರೇಷನ್ ಕಾರ್ಡ್ (Ration Card) ಅನ್ನು ಸರ್ಕಾರ ರದ್ದು ಮಾಡಲು ಮುಂದಾಗಿದೆ.

6 ಮಾನದಂಡಗಳ ಮೂಲಕ ಸಮೀಕ್ಷೆ ಕಾರ್ಯ
ಇದೀಗ ಆಹಾರ ಇಲಾಖೆ BPL ಕಾರ್ಡ್ ದಾರರ ಆರ್ಥಿಕ ಸ್ಥಿತಿಯನ್ನು ಪರೀಕ್ಷೆ ಮಾಡಲು ಮುಂದಾಗಿದೆ. 6 ಮಾನದಂಡಗಳ ಆಧಾರದ ಮೇಲೆ ಸಮೀಕ್ಷೆ ಕಾರ್ಯ ನೆಡೆಯಲಿದ್ದು, ಇದರ ವ್ಯಾಪ್ತಿಗೆ ಬಂದವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಸರ್ಕಾರ ಮುಂದಾಗಿದೆ. ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಪಡಿತರ ಚೀಟಿಗಳು ರದ್ದಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

The Food Department has decided to test the financial status of BPL card holders.

Join Nadunudi News WhatsApp Group

ಹಾಗೆ ಅನ್ನ ಭಾಗ್ಯ ಯೋಜನೆ ಜೊತೆಗೆ BPL ಕಾರ್ಡ್ ದಾರರಿಗೆ ಸಿಗುವ ಇತರ ಸೌಲಭ್ಯ ಗಳನ್ನೂ ಅರ್ಹತೆ ಇಲ್ಲದವರು ಸಹ ಪಡೆದುಕೊಳ್ಳುತ್ತಿದ್ದಾರೆ, ಇದನ್ನ ತಡೆಯುವ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮವನ್ನು ಕೈಗೊಂಡಿದೆ.

ಈ ಹಿಂದೆ ಆಹಾರ ಸಚಿವರಾಗಿದ್ದ ದಿವಂಗತ ಮಾಜಿ ಸಚಿವ ಉಮೇಶ್ ಕತ್ತಿ ಅವರು ರೇಷನ್ ಕಾರ್ಡ್ ಬಗ್ಗೆ ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದ್ದರು ಆದರೆ ಆ ವೇಳೆಗೆ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್ ಸರಕಾರ ಅದಕ್ಕೆ ವಿರೋಧ ವ್ಯಕ್ತ ಪಡಿಸಿತ್ತು. ಆದರೂ ಸಹ ಬಿಪಿಎಲ್ ಕಾರ್ಡ್ ಗೆ ಅನರ್ಹರಾಗಿದ್ದವರನ್ನು ತೆಗೆದು ಹಾಕುವ ಕೆಲಸ ಮಾಡಿತ್ತು. ಅಂದು 4 ಲಕ್ಷದ 16 ಸಾವಿರ ಕಾರ್ಡ್ ಗಳನ್ನೂ ಸರ್ಕಾರ ರದ್ದು ಮಾಡಿತ್ತು.

ಬಿಪಿಎಲ್ ಕಾರ್ಡ್ ಗೆ ಅನರ್ಹರಾದವರನ್ನು ಕೈಬಿಟ್ಟರೆ ಬಡತನ ಎದುರಿಸುತ್ತಿರುವ ಕುಟುಂಬಗಳಿಗೆ ಅನುಕೂಲವಾಗುತ್ತದೆ ಎಂಬುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸರ್ವೇ ಮಾಡಲು ನಿರ್ಧರಿಸಿವೆ.

The Food Department has decided to test the financial status of BPL card holders.
Image Credit: Oktelugu

BPL ಕಾರ್ಡ್ ಹೊಂದಲು ಯಾರು ಅರ್ಹರು
*ಸರ್ಕಾರೀ ನೌಕರರಾಗಿರಬಾರದು

*ವ್ಯಕ್ತಿಯ ವಾರ್ಷಿಕ ಆದಾಯ ಒಂದು ಲಕ್ಷ 25 ಸಾವಿರ ಮೀರಿರಬಾರದು

*ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿಗಿಂತ ಹೆಚ್ಚಿರಬಾರದು

*ನಗರ ಭಾಗದಲ್ಲಿ ಸಾವಿರ ಸ್ವೇರ್ ಪೀಟ್ ಒಳಗೆ ಮನೆ ನಿರ್ಮಾಣ ಆಗಿರಬೇಕು

*ಮನೆಯಲ್ಲಿ ವೈಟ್ ಬೋರ್ಡ್ ಕಾರ್ ಇರಬಾರದು

*ಸರ್ಕಾರಕ್ಕೆ ಆದಾಯ ತೆರಿಗೆ ಮಾಡದವರು
ಈ ಮೇಲಿನ ನಿಯಮಗಳನ್ನು ಮೀರಿ ಬಿಪಿಎಲ್ ಕಾರ್ಡ್ ಪಡೆದುಕೊಂಡವರ ಕಾರ್ಡ್ ರದ್ದಾಗಲಿದೆ ಎಂದು ಆಹಾರ ಇಲಾಖೆ ತಿಳಿಸಿದೆ.

Join Nadunudi News WhatsApp Group