Ration Card Cancel: ಮಾರ್ಚ್ ತಿಂಗಳಲ್ಲಿ ಇಂತಹ ಕುಟುಂಬಗಳ BPL ಕಾರ್ಡ್ ರದ್ದು, ಈ ತಿಂಗಳು ಸಿಗಲ್ಲ ರೇಷನ್.

ಮಾರ್ಚ್ ತಿಂಗಳಲ್ಲಿ ಇಂತಹ ಕುಟುಂಬಗಳ BPL ಕಾರ್ಡ್ ರದ್ದು

Ration Card Cancelled: ರಾಜ್ಯ ಸರ್ಕಾರ ಪಡಿತರ ಚೀಟಿಗೆ ಸಂಬಂಧಿಸಿದಂತೆ ಆಗಾಗ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸುತ್ತ ಇರುತ್ತದೆ. ರಾಜ್ಯದಲ್ಲಿ BPL Ration Card ಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಸರ್ಕಾರ ರೇಷನ್ ಕಾರ್ಡ್ ಸಂಬಂಧಿತ ನಿಯಮಗಳನ್ನು ಬಿಗಿಗೊಳಿಸುತ್ತಿದೆ. ಇನ್ನು ಇತ್ತೀಚೆಗಷ್ಟೇ ಆಹಾರ ಇಲಾಖಾ ಸಚಿವರಾದ ಮುನಿಯಪ್ಪ ಅವರು ಆದಷ್ಟು ಬೇಗ ಹೊಸ ಪಡಿತರ ಚೀಟಿಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಘೋಷಿಸಿದ್ದರು.

ಮಾರ್ಚ್ 31 ರೊಳಗೆ ವಿಲೇವಾರಿ ಮಾಡಲಿದ್ದು, ಏಪ್ರಿಲ್ 1 ರಿಂದ ಹೊಸ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಆಹಾರ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಇನ್ನು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮಾರ್ಚ್ ತಿಂಗಳಲ್ಲಿ ಇಂತಹ ಕುಟುಂಬಗಳ BPL ಕಾರ್ಡ್ ರದ್ದು ಮಾಡಿದೆ. 

Ration Card New Update
Image Credit: The Hindu Business Line

ಮಾರ್ಚ್ ತಿಂಗಳಲ್ಲಿ ಇಂತಹ ಕುಟುಂಬಗಳ BPL ಕಾರ್ಡ್ ರದ್ದು
BPL ಕಾರ್ಡ್ ಹೊಂದಿರುವ ಅರ್ಹರು ಅನ್ನ ಭಾಗ್ಯ ಯೋಜನೆಯಡಿ ಉಚಿತ ಪಡಿತರನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಆರ್ಥಿಕವಾಗಿ ಬಲಿಷ್ಠವಾಗಿರುವವರು BPL ಕಾರ್ಡ್ ಪಡೆದುಕೊಂಡು ಸರ್ಕಾರೀ ಸೌಲಭ್ಯವನ್ನು ಪಡೆಡುಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದನ್ನು ಗಮನಿಸಿದ ಸರ್ಕಾರ ಇದೀಗ ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.

ಕಳೆದ ಆರು ತಿಂಗಳುಗಳಿಂದ ಉಚಿತ ಪಡಿತರನ್ನು ಪಡೆಯದೇ ಸರ್ಕಾರದ ಇನ್ನಿತರ ಯೋಜನೆಗಳ ಲಾಭವನ್ನು ಯಾರು ಪಡೆಯುತ್ತಿದ್ದರೋ, ಅಂತವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಇಂತಹ ಕುಟುಂಭದ ಲಕ್ಷಾಂತರ ಪಡಿತರ ಚೀಟಿ ರದ್ದಾಗಿದ್ದು, ಇನ್ನು ಸಾಕಷ್ಟು ಜನರು ಆರು ತಿಂಗಳಿನಿಂದ ರೇಷನ್ ಪಡೆಯದೇ ಇದ್ದಾರೆ. ಅರ್ಹರು ಮಾತ್ರ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಯಾರ ರೇಷನ್ ಕಾರ್ಡ್ ರದ್ದಾಗಿದೆಯೋ ಅಂತವರು ಮಾರ್ಚ್ ತಿಂಗಳಿನಿಂದ ರೇಷನ್ ಹಾಗೂ ಯೋಜನೆಗಳ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

Ration Card Cancelled
Image Credit Odishatv

ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯಾ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ
•ಮೊದಲನೆಯದಾಗಿ https://ahara.kar.nic.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.

Join Nadunudi News WhatsApp Group

•ಎಡಭಾಗದಲ್ಲಿ ಮೂರು ಲೈನ್ ಕಾಣಿಸಲಿದ್ದು, ಅದರಮೇಲೆ ಕ್ಲಿಕ್ ಮಾಡಿ.

•ಅಲ್ಲಿ ಇ- ಪಡಿತರ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

•ರದ್ದುಪಡಿಸಲಾದ ಅಥವಾ ತಡೆಹಿಡಿಯಲಾದ ರೇಷನ್ ಕಾರ್ಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

•ಇಲ್ಲಿ ಹೊಸ ಪುಟ ತೆರೆಯುತ್ತದೆ. ಇದರಲ್ಲಿ ನಿಮ್ಮ ಜಿಲ್ಲೆ, ತಾಲೂಕು ಆಯ್ಕೆ ಮಾಡಿದರೆ ರದ್ದಾಗಿರುವ ರೇಷನ್ ಕಾರ್ಡ್ ನ ವಿವರ ನಿಮಗೆ ತಿಳಿಯುತ್ತದೆ.

Join Nadunudi News WhatsApp Group