Ration Card Delete: ರಾತ್ರೋರಾತ್ರಿ ಇಂತವರ ಹೆಸರು ರೇಷನ್ ಕಾರ್ಡಿನಿಂದ ಡಿಲೀಟ್, ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ.
ಇದೀಗ ರಾಜ್ಯ ಸರ್ಕಾರ ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ಸುದ್ದಿಯನ್ನು ನೀಡಿದೆ.
Ration Card Delete: ರಾಜ್ಯದಲ್ಲಿ Ration Card ಸಂಬಂಧಿತ ಸಾಕಷ್ಟು ಅಪ್ಡೇಟ್ ಗಳು ರಿವೀಲ್ ಆಗುತ್ತಿವೆ. ದಿನ ನಿತ್ಯ ರೇಷನ್ ಕಾರ್ಡ್ ಸಂಬಂದಿತ ಹೊಸ ಹೊಸ ಮಾಹಿತಿ ಹೊರಬೀಳುತ್ತಿದೆ.
ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಪಡೆದುಕೊಂಡಾಗಿನಿಂದ ಸರ್ಕಾರ ಐದು ಯೋಜನೆಗಳ ಅನುಷ್ಠಾನದ ಸುದ್ದಿಗಳು ಹೆಚ್ಚಾಗಿ ವೈರಲ್ ಆಗುತ್ತಿವೆ. ಕಾಂಗ್ರೆಸ್ ಸರ್ಕಾರದ ಐದು ಯೋಜನೆಗಳು ಜಾರಿಯದಾಗಿನಿಂದ Ration Card ಗೆ ಬೇಡಿಕೆ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು.
ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ಸುದ್ದಿ
ಕಾಂಗ್ರೆಸ್ ಯೋಜನೆಗಳ ಲಾಭ ಪಡೆಯಲು ರೇಷನ್ ಕಾರ್ಡ್ ಮುಖ್ಯ ಧಾಖಲೆಯಾಗಿದೆ. ಈಗಾಗಲೇ ರಾಜ್ಯದಲ್ಲಿ ಲಕ್ಷಾಂತರ ಜನ ಹೊಸ BPL Ration Card ಗೆ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರ ಅರ್ಜಿ ಸಲ್ಲಿಕೆದಾರರ ಅರ್ಜಿ ಪರಿಶೀಲಿಸುವ ಪ್ರಕ್ರಿಯೆಯಲ್ಲಿದೆ. ಹೊಸ ರೇಷನ್ ಕಾರ್ಡ್ ಬರುವಿಕೆಗಾಗಿ ಜನರು ಕಾಯುತ್ತಿದ್ದಾರೆ. ಇದೀಗ ರಾಜ್ಯ ಸರ್ಕಾರ ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ಸುದ್ದಿಯನ್ನು ನೀಡಿದೆ.
ರಾಜ್ಯದಲ್ಲಿ 5.19 ಲಕ್ಷ ಫಲಾನುಭವಿಗಳ Ration Card ರದ್ದು
Anna Bhagya ಯೋಜನೆಯ ಫಲಾನುಭವಿಗಳಿಗೆ ಸರ್ಕಾರ ಇದೀಗ ಶಾಕ್ ನೀಡಿದೆ. ಆಹಾರ ಇಲಾಖೆ ಪರಿಶೀಲನೆ ನಡೆಸಿ Ration Card ನಿಂದ ಒಂದೇ ತಿಂಗಳಲ್ಲಿ 5 .19 ಲಕ್ಷ ಫಲಾನುಭವಿಗಳ ಹೆಸರನ್ನು Delete ಮಾಡಿದೆ. ಸತ್ತವರ ಹೆಸರಿನಲ್ಲಿ Ration ಮತ್ತು DBT ಮೂಲಕ ಹಣ ಜಮೆಯಾಗಿದೆ. ಈ ರೀತಿ ಹಣ ಪಡುಯುತ್ತಿದ್ದ ಜನರ ಹೆಸರನ್ನು ರೇಷನ್ ಕಾರ್ಡ್ ನಿಂದ ರದ್ದು ಮಾಡಲಾಗಿದೆ.
ರೇಷನ್ ಕಾರ್ಡ್ ಹಾಗು ಆಧಾರ್ ಕಾರ್ಡ್ ಲಿಂಕ್
ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಯಲು ಸರ್ಕಾರ ರೇಷನ್ ಕಾರ್ಡ್ ಹಾಗು ಆಧಾರ್ ಕಾರ್ಡ್ ಲಿಂಕ್ ಅನ್ನು ಕಡ್ಡಾಯಗೊಳಿಸಿದೆ. ಪಡಿತರ ಚೀಟಿ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವು ಅಗತ್ಯವಾಗಿದೆ. ಅಂತ್ಯೋದಯ ಯೋಜನೆ, ಆದ್ಯತೆಯ ವಸತಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಪಡಿತರ ಚೀಟಿದಾರರು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕು. ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿದರೆ ಸರ್ಕಾರದಿಂದ ಸಿಗುವ ಉಚಿತ ಪಡಿತರವನ್ನು ಪಡೆಯಬಹುದು.