BPL Card Update: BPL ರೇಷನ್ ಕಾರ್ಡ್ ಹೊಂದಿರುವವರೇ ಎಚ್ಚರ, ಈ ತಪ್ಪು ಮಾಡಿದರೆ ನಿಮ್ಮ ಕಾರ್ಡ್ ರದ್ದು.

BPL ರೇಷನ್ ಕಾರ್ಡ್ ಹೊಂದಿರುವವರು ಈ ತಪ್ಪು ಮಾಡಿದರೆ ರೇಷನ್ ಕಾರ್ಡ್ ರದ್ದಾಗಲಿದೆ.

Anna Bhagya Scheme Rules And Regulations: ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ Anna Bhagya ಯೋಜನೆಯ ಬಗ್ಗೆ ಸಾಕಷ್ಟು ಅಪ್ಡೇಟ್ ಹೊರಬೀಳುತ್ತಿದೆ. ಈಗಾಗಲೇ ಯೋಜನೆ ಅನುಷ್ಠಾನಗೊಂಡಿದ್ದರು ಕೂಡ ಯೋಜನೆಯ ಸಂಪೂರ್ಣ ಲಾಭ ಎಲ್ಲ ಅರ್ಹ ಫಲಾನುಭವಿಗಳಿಗೆ ಲಭ್ಯವಾಗುತ್ತಿಲ್ಲ.

ಯೋಜನೆ ಅನುಷ್ಠಾನಗೊಂಡು ಮೂರ್ನಾಲ್ಕು ತಿಂಗಳಿಂದ ಅರ್ಹ ಫಲಾನುಭವಿಗಳು ಯೋಜನೆಯ ಲಾಭ ಪಡೆಯಲು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳುತ್ತಿದ್ದಾರೆ. ಇನ್ನು ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿಯ ಹಣ ಖಾತೆಗೆ ಜಮಾ ಆಗಬೇಕಿದ್ದರೆ ಮುಖ್ಯವಾಗಿ ಫಲಾನುಭವಿಗಳು ಈ ಕೆಲಸ ಮಾಡಬೇಕಿದೆ. ಯೋಜನೆಯ ಫಲಾನುಭವಿಗಳು ಈ ತಪ್ಪನ್ನು ಮಾಡಿದರೆ ಯಾವುದೇ ಕಾರಣಕ್ಕೂ ಯೋಜನೆಯ ಲಾಭ ದೊರೆಯುವುದಿಲ್ಲ ಎಂದು ಸರ್ಕಾರ ಫಲಾನುಭವಿಗಳಿಗೆ ಸೂಚಿಸಿದೆ.

ration cards kyc update in karnataka
Image Credit: Original Source

ರೇಷನ್ ಕಾರ್ಡ್ ಗೆ E -KYC ಆಗದಿದ್ದರೆ ಅನ್ನಭಾಗ್ಯ ಹಣ ದಕ್ಕುವುದಿಲ್ಲ
ಮುಖ್ಯವಾಗಿ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಹೆಚ್ಚುವರಿ ಅಕ್ಕಿಯ ಹಣ ಅರ್ಹರ ಖಾತೆಗೆ ಜಮಾ ಆಗಲು ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ರಾಜ್ಯ ಸರ್ಕಾರ Ration Card E -KYC ಮಾಡುವಂತೆ ಅರ್ಹ ಫಲಾನುಭವಿಗಳಿಗೆ ಆದೇಶ ನೀಡಿದೆ.

ನಿಮ್ಮ Ration Card ಅನ್ನು Aadhaar Card ನ ಜೊತೆ Link ಮಾಡಲು ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಹೀಗಾಗಿ ಅರ್ಹ ಫಲಾನುಭವಿಗಳು December 31 ರೊಳಗೆ ತಮ್ಮ ರೇಷನ್ ಕಾರ್ಡ್ E -KYC ಮಾಡುವುದು ಅಗತ್ಯವಾಗಿದೆ. ರೇಷನ್ ಕಾರ್ಡ್ E -KYC ಆಗದಿದ್ದ ಸಂದರ್ಭದಲ್ಲಿ ಅಂತವರು ಯೋಜನೆಯಿಂದ ವಂಚಿತರಾಗಬೇಕೆಗುತ್ತದೆ ಎನ್ನುವುದರ ಬಗ್ಗೆ ತಿಳಿದಿರಲಿ.

ರೇಷನ್ ಕಾರ್ಡ್ ರದ್ದು ಪಡಿಸಲು ಸರ್ಕಾರ ಕ್ರಮ
ಇನ್ನು ರಾಜ್ಯದ ಉಚಿತ ಯೋಜನೆಗಳ ಲಾಭ ಪಡೆಯಲು ಅರ್ಹರು ತಮ್ಮ ರೇಷನ್ ಕಾರ್ಡ್ ಹಾಗೂ ಇತರ ಮುಖ್ಯ ದಾಖಲೆಗಳನ್ನು ತಿದ್ದುಪಡಿ ಮಾಡಿಕೊಳ್ಳುವ ಮೂಲಕ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಯೋಜನೆಗಳ ಲಾಭ ಪಡೆಯುವವ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸರ್ಕಾರಕ್ಕೆ ಹೊರೆ ಕೂಡ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ಒಂದಿಷ್ಟು ಮಾನದಂಡವನ್ನು ವಿಧಿಸುವ ಮೂಲಕ ಇಂತವರ ರೇಷನ್ ಕಾರ್ಡ್ ರದ್ದುಪಡಿಸಲು ಮುಂದಾಗಿದೆ.

Join Nadunudi News WhatsApp Group

ration card kyc update 2023
Image Credit: Original Source

ರೇಷನ್ ಕಾರ್ಡ್ ಹೊಂದಿರುವವರು ಈ ತಪ್ಪುಗಳನ್ನು ಎಂದು ಮಾಡಬೇಡಿ
*ಯಾರು ಉಚಿತ ಪಡಿತರ ಯೋಜನಯಡಿ 6 ತಿಂಗಳಿಂದ ಪಡಿತರನ್ನು ಪಡೆಯುತ್ತಿಲ್ಲವೋ ಅಂತಹ ಕುಟುಂಬದ ಪಡಿತರ ಕಾರ್ಡ್ ಅನ್ನು ರದ್ದು ಮಾಡಲು ಸರ್ಕಾರ ಮುಂದಾಗಿದ್ದು, ಈಗಾಗಲೇ ರಾಜ್ಯದಲ್ಲಿ 3.26 ಲಕ್ಷ BPL Card ಗಳನ್ನೂ ಸರ್ಕಾರ ರದ್ದು ಮಾಡಿದೆ.

*ಹಾಗೆಯೆ ಉಚಿತ ಪಡಿತರನ್ನು ಹಣಕ್ಕಾಗಿ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಿರುವ ಕುಟುಂಬದ ರೇಷನ್ ಕಾರ್ಡ್ ಅನ್ನು ಕೂಡ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಪಡಿತರ ಚೀಟಿದಾರರು ಎಚ್ಚರಿಕೆವಹಿಸಬೇಕಿದೆ. ಪಡಿತರ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.

Join Nadunudi News WhatsApp Group