Ration Card Delete: ತಿಂಗಳ ಅಂತ್ಯದೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಹೆಸರು ರೇಷನ್ ಕಾರ್ಡ್ ನಿಂದ ಡಿಲೀಟ್, ರಾತ್ರೋರಾತ್ರಿ ಹೊಸ ನಿಯಮ.
ಆಹಾರ ಇಲಾಖೆ ಇದೀಗ ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ.
Ration Card E- KYC Update: ಪ್ರಸ್ತುತ ರಾಜ್ಯದಲ್ಲಿ ರೇಷನ್ ಕಾರ್ಡ್ (Ration Card) ಸಂಬಂಧಿಸಿದಂತೆ ಅನೇಕ ಅಪ್ಡೇಟ್ ಗಳು ಹೊರಬೀಳುತ್ತಿದೆ. ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಗೆ ರೇಷನ್ ಕಾರ್ಡ್ ಅತ್ಯಗತ್ಯವಾಗಿದೆ. ರೇಷನ್ ಕಾರ್ಡ್ ನ ಜೊತೆಗೆ ಆಧಾರ್ ಕಾರ್ಡ್ ಕೂಡ ಮುಖ್ಯ ದಾಖಲೆಯಾಗಿದೆ. ಆಧಾರ್ ಕಾರ್ಡ್ ಮೂಲಕ ನೀವು ಸರ್ಕಾರದ ಎಲ್ಲ ಸೌಲಭ್ಯವನ್ನು ಪಡೆಯಬಹುದಾಗಿದೆ.
ಆಧಾರ್ ಕಾರ್ಡ್ ಇಲ್ಲದೆ ಯಾವುದೇ ರೀತಿಯ ಕೆಲಸ ಪೂರ್ಣಗೊಳ್ಳುವುದಿಲ್ಲ. ಆಧಾರ್ ಜೊತೆ ಇನ್ನಿತರ ವೈಯಕ್ತಿಕ ದಾಖಲೆಯನ್ನು ಲಿಂಕ್ ಮಾಡಲು ಸರ್ಕಾರ ಈಗಾಗಲೇ ಆದೇಶ ನೀಡಿದೆ. ಇನ್ನು ಇತ್ತೀಚಿಗೆ ರೇಷನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಕೇಂದ್ರ ಸರ್ಕಾರದಿಂದ ಮಾಹಿತಿ ಹೊರ ಬಿದ್ದಿದೆ. ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಸುದ್ದಿ ವೈರಲ್ ಆಗುತ್ತಿದೆ.
ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ
ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ವ್ಯಕ್ತಿಗೆ ಹತ್ತು ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಅಕ್ಕಿ ಸರಬರಾಜಿನ ಕೊರತೆಯಿಂದಾಗಿ ಅಕ್ಕಿ ಬದಲು ಹಣ ನೀಡುವುದಾಗಿ ಸರ್ಕಾರ ಮಾಹಿತಿ ನೀಡಿದೆ. ಈ ಹಿನ್ನಲೆ ಹೊಸ ರೇಷನ್ ಕಾರ್ಡ್ ಅನ್ನು ಪಡೆಯಲು ಹಲವು ಜನ ಕಾಯುತ್ತಿದ್ದಾರೆ. ಇನ್ನು ಅನರ್ಹ ವ್ಯಕ್ತಿಗಳು ಕೂಡ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಯಲು ಸರ್ಕಾರ ರೇಷನ್ ಕಾರ್ಡ್ ಹಾಗು ಆಧಾರ್ ಕಾರ್ಡ್ ಲಿಂಕ್ ಅನ್ನು ಕಡ್ಡಾಯಗೊಳಿಸಿದೆ.
ಈ ಕೆಲಸ ಮಾಡದಿದ್ದರೆ ರದ್ದಾಗಲಿದೆ ನಿಮ್ಮ ರೇಷನ್ ಕಾರ್ಡ್
ಆಹಾರ ಇಲಾಖೆ ಇದೀಗ ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಪಡಿತರ ಚೀಟಿದಾರರು ಈ ಹೊಸ ನಿಯಮವನ್ನು ಪಾಲಿಸಬೇಕಿದೆ. ಪಡಿತರ ಚೀಟಿದಾರರು ಕಡ್ಡಾಯವಾಗಿ ಇ – ಕೆವೈಸಿ ಮಾಡಿಸಬೇಕಿದೆ. ಇ – ಕೆವೈಸಿ ಆಗದೆ ಇರುವ ರೇಷನ್ ಕಾರ್ಡ್ ಗಳ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ. ನಿಮ್ಮ ರೇಷನ್ ಕಾರ್ಡ್ ಗೆ ಇ- ಕೆವೈಸಿ ಮಾಡದಿದ್ದರೆ ರೇಷನ್ ಕಾರ್ಡ್ ನಲ್ಲಿನ ಇರುವ ನಿಮ್ಮ ಹೆಸರು ರದ್ದಾಗಲಿದೆ.
ಸರ್ಕಾರ ಉಚಿತ ಭಾಗ್ಯಗಳು ನಿಮಗೆ ದೊರೆಯುವುದಿಲ್ಲ
ಆಹಾರ ಇಲಾಖೆ ನೀಡುರುವ ಮಾಹಿತಿಯ ಪ್ರಕಾರ, ನಿಮ್ಮ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಹಾಗು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು. ಈ ರೀತಿಯಾಗಿ ಮಾಡುದರಿಂದ ನೀವು ಸರ್ಕಾರ ನೀಡುತ್ತಿರುವ ಉಚಿತ ಅಕ್ಕಿಯ ಲಾಭವನ್ನು ಪಡೆಯಬಹದು.
ಪಡಿತರ ಲಾಭದ ಜೊತೆಗೆ ಕಾಂಗ್ರೆಸ್ ಸರ್ಕಾರ ಐದು ಯೋಜನೆಗಳ ಲಾಭಗಳು ಈ ಇ – ಕೆವೈಸಿ ಅಗತ್ಯವಾಗಿದೆ. ಯೋಜನೆಯ ಲಾಭ ಪಡೆಯಲು ನೀವು ಇ – ಕೆವೈಸಿ ಮಾಡಿಸಬೇಕಿದೆ. ಇನ್ನು ಕೂಡ ನೀವು ಇ – ಕೆವೈಸಿ ಮಾಡದಿದ್ದರೆ ಸರ್ಕಾರದ ಎಲ್ಲ ಉಚಿತ ಯೋಜನೆಗಳಿಂದ ವಂಚಿತರಾಗಬೇಕಾಗುತ್ತದೆ.