New Ration Card Rules: ಇನ್ನುಮುಂದೆ ಇಂತಹ ಜನರಿಗೆ ಸಿಗಲ್ಲ ಉಚಿತ ಪಡಿತರ ಆಹಾರ, ಕೇಂದ್ರ ಸರ್ಕಾರದ ದೊಡ್ಡ ಘೋಷಣೆ.
BPL ಕಾರ್ಡ್ ಇರುವವರಿಗೆ ನೀಡಲಾಗುವ ಪಡಿತರ ಧಾನ್ಯಗಳ ಕುರಿತಂತೆ ಇನ್ನೊಂದು ಆದೇಶ ಹೊರಡಿಸಲಾಗಿದೆ.
BPL Ration Rules In India: ದೇಶದಲ್ಲಿ ಬಡವರು ಮತ್ತು ನಿರ್ಗತಿಕರಿಗಾಗಿ ಸರ್ಕಾರ ಉಚಿತ ಪಡಿತರನ್ನು ನೀಡುತ್ತಿದೆ. ಇದಕ್ಕಾಗಿ ಸರ್ಕಾರ BPL Ration Card ಅನ್ನು ಜನರಿಗೆ ನೀಡುತ್ತಿದೆ. BPL Ration Card ಹೊಂದಿರುವ ಪ್ರತಿ ಕುಟುಂಬದವರು ಕೂಡ ಉಚಿತ ಪಡಿತರ ಲಾಭವನ್ನು ಪಡೆಯುತ್ತಿದ್ದಾರೆ.
ದೇಶದಲ್ಲಿ ಕರೋನ ಪ್ರಾರಂಭವಾದಾಗಿನಿಂದ ಈ ಉಚಿತ ಪಡಿತರ ಸೇವೆಯನ್ನು ಜಾರಿಗೆ ತರಲಾಗಿತ್ತು. ಈಗಲೂ ಕೂಡ ಈ ಸೌಲಭ್ಯವನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಅದರಲ್ಲೂ ರಾಜ್ಯ ಸರ್ಕಾರ BPL Ration Card ಹೊಂದಿರುವವರಿಗೆ ವಿಶೇಷ ಸದೌಲಭ್ಯವನ್ನು ನೀಡುತ್ತಿದೆ. ಹೀಗಾಗಿ ದೇಶದಲ್ಲಿ BPL Ration Card ಗೆ ಡಿಮ್ಯಾಂಡ್ ಹೆಚ್ಚಿದೆ ಎನ್ನಬಹುದು.
ರೇಷನ್ ಕಾರ್ಡ್ ರದ್ದು ಮಾಡಲು ಮುಂದಾದ ಸರ್ಕಾರ
ಸದ್ಯ BPL Ration Card ಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆ ಅನೇಕ ಜನರು ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ಅರ್ಜಿ ಸಲ್ಲಿಸಿ ಹೊಸ BPL Ration Card ಅನ್ನು ಪಡೆಯುವ ಮೂಲಕ ಸರ್ಕಾರದ ಯೋಜನೆಯ ಲಬಹವನ್ನು ಪಡೆಯಬೇಕು ಎನ್ನುವುದು ಜನರ ಉದ್ದೇಶವಾಗಿದೆ. ಆದರೆ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಉಚಿತ ಪಡಿತರನ್ನು ನೀಡುವುದಾಗಿ ಘೋಷಣೆ ಹೊರಡಿಸಿದೆ.
ಆದರೆ ದೇಶದಲ್ಲಿ ಅನರ್ಹರು ಕೂಡ ಉಚಿತ ಪಡಿತರ ಲಾಭವನ್ನು ಪಡೆಯುತ್ತಿದ್ದಾರೆ ಎನ್ನುವುದು ಸರ್ಕಾರ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಅನರ್ಹರು BPL Ration ಕಾರ್ಡ್ ಅನ್ನು ಹೊಂದುವುದನ್ನು ತಡೆಯಲು ಸರ್ಕಾರ ಇದೀಗ ಹೊಸ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ. ಇಂತವರ ರೇಷನ್ ಕಾರ್ಡ್ ಅನ್ನು ರದ್ದು ಮಾಡುವ ಮೂಲಕ ಸರ್ಕಾರಕ್ಕೆ ಆಗುತ್ತಿರುವ ನಷ್ಟವನ್ನು ಕಡಿಮೆ ಮಾಡಲು ಮುಂದಾಗಿದೆ.
ಇನ್ನುಮುಂದೆ ಇಂತಹ ಜನರಿಗೆ ಸಿಗಲ್ಲ ಉಚಿತ ಪಡಿತರ ಆಹಾರ
*ಆದಾಯ ತೆರಿಗೆ ಪಾವತಿಸುವ ಅಥವಾ BPL Card ಹೊರತುಪಡಿಸಿ ಇತರ ಕಾರ್ಡ್ ದಾರರು ಉಚಿತ ಪಡಿತರ ಪಡೆಯಲು ಅರ್ಹರಾಗಿರುವುದಿಲ್ಲ.
*ಇನ್ನು 10 ಬಿಘಾಗಳಿಗಿಂತ ಹೆಚ್ಚು ಭೂಮಿ ಹೊಂದಿರುವ ಜನರು ಉಚಿತ ಪಡಿತರ ಪ್ರಯೋಜನವನ್ನು ಪಡೆಯುವುದಿಲ್ಲ.
*ಇನ್ನು ಪ್ರತಿ ವರ್ಷ 3 ಲಕ್ಷಕ್ಕಿಂತಲೂ ಹೆಚ್ಚು ಆದಾಯವನ್ನು ಗಳಿಸುತ್ತಿರುವವರಿಗೆ ಉಚಿತ ಪಡಿತರ ಲಾಭ ದೊರೆಯುವುದಿಲ್ಲ.
*ಸರ್ಕಾರೀ ನೌಕರರಿಗೆ ಸಿಗಲ್ಲ ಸೂಚಿತ ಪಡಿತರ ಆಹಾರ
*ಆದಾಯ ತೆರಿಗೆ ಪಾವತಿ ಮಾಡುವವರಿಗೆ ಸಿಗಲ್ಲ ಉಚಿತ ಪಡಿತರ ಆಹಾರ