Ration Card: ಇಂತವರ BPL ರೇಷನ್ ಕಾರ್ಡ್ ರದ್ದು ಮಾಡಲು ರಾಜ್ಯ ಸರ್ಕಾರದ ಆದೇಶ, ಆತಂಕದಲ್ಲಿ BPL ಕಾರ್ಡುದಾರರು.
ರಾಜ್ಯದಲ್ಲಿ BPL ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ ಜಾರಿಗೆ ತರಲಾಗಿದೆ.
Ration Card Holders: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government)ಅಧಿಕಾರಕ್ಕೆ ಬರುವ ಮುನ್ನ 5 ಗ್ಯಾರಂಟಿ ಯೋಜನೆಗಳನ್ನ ಘೋಷಣೆ ಮಾಡಿತ್ತು. ಆ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನ ಭಾಗ್ಯ (Anna Bhagya) ಯೋಜನೆ ಬಿಡುಗಡೆಯಲ್ಲಿ ಹಲವು ತೊಂದರೆಗಳು ಉಂಟಾಗಿದ್ದವು.
ಕಾಂಗ್ರೆಸ್ ಸರ್ಕಾರಕ್ಕೆ ಅಕ್ಕಿ ಖರೀದಿಸಲು ಕಷ್ಟವಾಗಿ 5 ಕೆಜಿ ಅಕ್ಕಿ ಬದಲಾಗಿ ಹಣವನ್ನು ನೀಡುತ್ತಿತ್ತು. ಆದರೆ ಇದೀಗ ಕಾಂಗ್ರೆಸ್ ಸರ್ಕಾರ ಆಂದ್ರಪ್ರದೇಶದ (Andhra Pradesh) ಮೂಲಕ ಅಕ್ಕಿ ಖರೀದಿಸಲಿದೆ ಎಂದು ಮಾಹಿತಿ ತಿಳಿದುಬಂದಿದೆ.
ಪಡಿತರ ಚೀಟಿದಾರರಿಗೆ ಆಹಾರ ಇಲಾಖೆಯ ಮಹತ್ವದ ಆದೇಶ
ಇದೀಗ ಸರ್ಕಾರ ಹೇಳಿದಂತೆ ರಾಜ್ಯದ ಜನರಿಗೆ 10 ಕೆಜಿ ಅಕ್ಕಿಯನ್ನು ನೀಡಲಿದೆ. ಅಕ್ಕಿ ಖರೀದಿಸುವ ಬಗ್ಗೆ ಆಹಾರ ಸಚಿವ ಮುನಿಯಪ್ಪ (Muniyappa) ಅವರು ಆಂದ್ರಪ್ರದೇಶದ ಅಧಿಕಾರಿ ಜೊತೆಗೆ ಮಾತನಾಡಿದ್ದಾರೆ. ಶೀಘ್ರದಲ್ಲೇ ಅಕ್ಕಿ ಖರೀದಿಸುವ ಬಗ್ಗೆ ಮಾಹಿತಿ ಲಭಿಸಿದೆ.
ಹಾಗೆ ಅನ್ನ ಭಾಗ್ಯ ಯೋಜನೆಯಲ್ಲಿ ಸಿಗುವ ಆಹಾರ ಧಾನ್ಯಗಳನ್ನು ಮಾರುಕಟ್ಟೆಯಲ್ಲಿ ಹಣಕ್ಕಾಗಿ ಮಾರಾಟ ಮಾಡಿದರೆ ಅಂತವರ ರೇಷನ್ ಕಾರ್ಡ್ (Ration Card)ಅನ್ನು 6 ತಿಂಗಳುಗಳ ಕಾಲ ರದ್ದು ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿದೆ.
ಪಡಿತರ ಚೀಟಿ ಫಲಾನುಭವಿಗಳಿಗೆ ಸಿಗುವ ಆಹಾರವನ್ನು ಮುಕ್ತ ಮಾರುಕಟ್ಟೆಯಲ್ಲಿ ಹಣಕ್ಕಾಗಿ ಮಾರಾಟ ಮಾಡುವವರ ರೇಷನ್ ಕಾರ್ಡ್ ಅನ್ನು ಆರು ತಿಂಗಳು ಅಮಾನತು ಮಾಡಲಿದೆ. ಪಡಿತರ ಚೀಟಿಯಲ್ಲಿ ಸಿಗುವ ಆಹಾರವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುದನ್ನು ನಿಯಂತ್ರಿಸಲು ಈ ಕ್ರಮವನ್ನು ಕೈಗೊಂಡಿದೆ. ಹಾಗೆ ಮಾರುಕಟ್ಟೆ ದರದಲ್ಲಿ ಅಕ್ಕಿಯನ್ನ ದಂಡ ರೂಪದಲ್ಲಿ ವಸೂಲಿ ಮಾಡಲಾಗುತ್ತದೆ ಎಂದು ಆಹಾರ ಇಲಾಖೆ ಎಚ್ಚರಿಕೆ ನೀಡಿದೆ.
ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದ ನಂತರ ಜನರು ಪಡಿತರ ಚೀಟಿ ಗೆ ಅರ್ಜಿ ಸಲ್ಲಿಸಲು ಮುಗಿ ಬಿದ್ದಿದ್ದಾರೆ. ಪಡಿತರ ಚೀಟಿಗೆ ಅರ್ಜಿ ಅಹ್ವಾನ ಮಾಡಿದ ಆಹಾರ ಇಲಾಖೆ ಇದೀಗ ಅರ್ಜಿ ಸಲ್ಲಿಕೆಗೆ ತಡೆ ಹಾಕಿದೆ. ಆದರೆ ಇದೀಗ ಸರ್ಕಾರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭಿಸುದಾಗಿ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಮಾಹಿತಿ ನೀಡಿದ್ದಾರೆ.