Ration Card: ರೇಷನ್ ಕಾರ್ಡ್ ಇದ್ದವರಿಗೆ ಇಂದಿನಿಂದ ಹೊಸ ಸೇವೆ ಆರಂಭ, ಇಂದೇ ಈ ಕೆಲಸ ಮಾಡಿಕೊಳ್ಳಿ.
ಇಂದಿನಿಂದ ನಿಮ್ಮ ರೇಷನ್ ಕಾರ್ಡ್ ಅನ್ನು ಸರಳವಾಗಿ ಆನ್ಲೈನ್ ಅಲ್ಲಿ ತಿದ್ದುಪಡಿ ಮಾಡಿಕೊಳ್ಳಿ.
Ration Cards Update: ಪಡಿತರ ಚೀಟಿ (Ration Card) ದಾರರಿಗೆ ಇದೀಗ ಸಿಹಿ ಸುದ್ದಿ ಹೊರ ಬಿದ್ದಿದೆ. ಪ್ರಸ್ತುತ ರಾಜ್ಯದಲ್ಲಿ ಇದೀಗ ಕಾಂಗ್ರೆಸ್ ಗ್ಯಾರೆಂಟಿಗಳ ಜಾರಿ ಬಗ್ಗೆ ಅಪ್ಡೇಟ್ ಗಳು ಹೊರ ಬೀಳುತ್ತಿದೆ. ಕಾಂಗ್ರೆಸ್ ಸರ್ಕಾರ ಹೊರಡಿಸಿದ ಗ್ಯಾರೆಂಟಿಗಳು ಒಂದೊಂದೇ ಜಾರಿ ಬಂದು ಜನರಿಗೆ ಅನುಕೂಲವನ್ನು ಒದಗಿಸಿ ಕೊಡುತ್ತಿದೆ.
ರೇಷನ್ ಕಾರ್ಡ್ ಹೊಂದಿರುವವರು ಹಲವು ಸಮಯಗಳಿಂದ ತಿದ್ದುಪಡಿ ಸಮಸ್ಯೆಯನ್ನ ಅನುಭವಿಸುತ್ತಿದ್ದು ಸದ್ಯ ಈ ಸಮಸ್ಯೆಗೆ ಈಗ ರಾಜ್ಯ ಸರ್ಕಾರ ಮುಕ್ತಿ ನೀಡಲು ಮುಂದಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಹೊಸ ಸೇವೆಯನ್ನ ಈಗ ಸರ್ಕಾರ ಆರಂಭ ಮಾಡಿದ್ದು ಇದು ಜನರ ಸಂತಸಕ್ಕೆ ಕಾರಣವಾಗಿದೆ ಎಂದು ಹೇಳಬಹುದು.
ರೇಷನ್ ಕಾರ್ಡ್ ತಿದ್ದುಪಡಿ
ನಿಮ್ಮ ರೇಷನ್ ಕಾರ್ಡ್ ಮಾಹಿತಿಯನ್ನು ಆನ್ ಲೈನ್ ನಲ್ಲಿ ಸರಳವಾಗಿ ತಿದ್ದುಪಡಿ ಮಾಡಬಹುದಾಗಿದೆ. ಮಾನ್ಯವಾದ ಪಡಿತರ ಚೀಟಿಗಳು ಮಾತ್ರ ಬದಲಾವಣೆಗೆ ಒಳಪಟ್ಟಿರುತ್ತದೆ. ನೀವು ಸೈಬರ್ ಗೆ ಹೋಗಿ ನಿಮ್ಮ ಪಡಿತರ ಚೀಟಿ ಮಾನ್ಯವಾಗಿದೆಯೋ ಇಲ್ಲವೋ ಎಂದು ಪರಿಶೀಲಿಸಿಕೊಳ್ಳಬೇಕು. ಒಂದು ವೇಳೆ ನಿಮ್ಮ ಪಡಿತರ ಚೀಟಿ ಅಮಾನ್ಯವಾಗಿದ್ದರೆ ಆನ್ ಲೈನ್ ಮೂಲಕ ಅದನ್ನು ಸರಿಪಡಿಸಿಕೊಳ್ಳಬಹುದು.
ಆನ್ ಲೈನ್ ನಲ್ಲಿ ಕರ್ನಾಟಕ ಪಡಿತರ ಚೀಟಿ ತಿದ್ದುಪಡಿಗೆ ಅಗತ್ಯವಿರುವ ದಾಖಲೆಗಳು
* ನಿಮ್ಮ ಸಂಪೂರ್ಣ ವಿಳಾಸ
* ಸ್ಥಳೀಯ ಮತ್ತು ರಾಷ್ಟ್ರೀಯ ಪತ್ರಿಕೆಗಳು
* ಆಧಾರ್ ಕಾರ್ಡ್
* ವಿದ್ಯುತ್ ಬಿಲ್
ಆನ್ ಲೈನ್ ನಲ್ಲಿ ಪಡಿತರ ಚೀಟಿಯ ತಿದ್ದುಪಡಿ ಹೇಗೆ
* ನೀವು ಮೊದಲು ಸ್ಥಳೀಯ ಜನ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು.
* ನಿಮ್ಮ ಎಲ್ಲ ಅಗತ್ಯ ದಾಖಲೆಗಳು ಬೇಕಾಗುತ್ತವೆ.
* ಪಡಿತರ ಚೀಟಿ ತಿದ್ದುಪಡಿಗಾಗಿ ಸಾರ್ವಜನಿಕ ಸೇವಾ ಅಧಿಕಾರಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
* ಅವರು ನಿಮಗೆ ನೀಡುವ ಅರ್ಜಿಯನ್ನು ನೀವು ಭರ್ತಿ ಮಾಡಬೇಕಾಗುತ್ತದೆ.
* ಅರ್ಜಿ ಪೂರ್ಣಗೊಳಿಸುವುದರ ಜೊತೆಗೆ ಅಗತ್ಯ ದಾಖಲೆಗಳನ್ನು ಸೇರಿಸಬೇಕಾಗುತ್ತದೆ.
* ನಂತರ ಅವರು ಅರ್ಜಿ ನಮೂನೆಯನ್ನು ಸಲ್ಲಿಸಿದ ನಂತರ ತಿದ್ದುಪಡಿ ಅರ್ಜಿಯ ಪ್ರತಿಯನ್ನು ನಿಮಗೆ ನೀಡುತ್ತಾರೆ.