Ration Card: ಈ 8 ಅನುಕೂಲ ಇದ್ದವರಿಗೆ ರೇಷನ್ ಕಾರ್ಡ್ ಸಿಗುವ ಸಾಧ್ಯತೆ ಕಡಿಮೆ, ಇದ್ದರೂ ರದ್ದಾಗಬಹುದು, ಹೊಸ ನಿಯಮ
ರೇಷನ್ ಕಾರ್ಡ್ ಇದ್ದವರಿಗೆ ಹಾಗೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ.
BPL Card Updates: ಸದ್ಯ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಾದ ಬಳಿಕ ರೇಷನ್ ಕಾರ್ಡ್ ಗೆ ಹಚ್ಚಿನ ಬೇಡಿಕೆ ಉಂಟಾಗಿದೆ. ಈಗಾಗಲೇ ಸರ್ಕಾರ ತಾನು ನೀಡಿದ ಭರವಸೆಗಳನ್ನು ಈಡೇರಿಸಲು ಬಹಳ ವೇಗವಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಸರ್ಕಾರಕ್ಕೆ ಸದ್ಯ ಹೊಸ ತಲೆನೋವು ಉಂಟಾಗಿದೆ.
ದಿನದಿಂದ ದಿನಕ್ಕೆ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಅಂತಹುದರಲ್ಲಿ ಬಹಳ ಅನುಕೂಲ ಇದ್ದವರು ಕೂಡ BPL ಕಾರ್ಡ್ ಗೆ ಸುಳ್ಳು ಮಾಹಿತಿ ನೀಡಿ ಅರ್ಜಿ ಹಾಕುತ್ತಿದ್ದಾರೆ. ಈ ವಿಷಯ ಗಮನದಲ್ಲಿಟ್ಟುಕೊಂಡು ಸರ್ಕಾರ ಕೆಲವೇ ದಿನಗಳಲ್ಲಿ ಹೊಸ ಮಾರ್ಗಸೂಚಿ ಹೊರಡಿಸುತ್ತೆ ಎನ್ನಲಾಗಿದೆ.
ಯಾರ ರೇಷನ್ ರದ್ದಾಗಬಹುದು ಹಾಗು ಯಾರ ಅರ್ಜಿ ತಿರಸ್ಕೃತವಾಗುತ್ತೆ?
ಬಲ್ಲ ಮೂಲಗಳ ಈಗಾಗಲೇ ಸುಳ್ಳು ಮಾಹಿತಿ ನೀಡಿ ರೇಷನ್ ಕಾರ್ಡ್ ಪಡೆದಿರುವ ಅನೇಕರ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ ಹಾಗೆಯೆ ಇಂದು ನಾವು ತಿಳಿಸುವ ಈ ಕೆಳಕಂಡ ಕೆಲವು ಅನುಕೂಲಗಳು ಇದ್ದವರಿಗೆ ರೇಷನ್ ಕಾರ್ಡ್ ಸಿಗುವುದು ಬಹುತೇಕ ಅನುಮಾನವಾಗಿದೆ.
ಸರ್ಕಾರ ಶೀಘ್ರದಲ್ಲೇ ಹೊರಡಿಸಬಹುದಾದ ಮಾರ್ಗಸೂಚಿಯ ಅಂಶಗಳು
- ಆದಾಯ ತೆರಿಗೆ ತುಂಬುವ ಕುಟುಂಬಗಳು
- ಕಾರು ಅಥವಾ ಟ್ರಾಕ್ಟರ್ ಹೊಂದಿರುವ ಕುಟುಂಬ
- AC ಅಳವಡಿಸರುವ ಮನೆ
- 5 ಅಧಿಕ ಜನರೇಟರ್ ಹೊಂದಿರುವ ಮನೆ
- ೫ ಎಕರೆ ಗಿಂತ ಹೆಚ್ಚಿನ ಭೂಮಿ ಇರುವವರಿಗೆ
- ಶಸ್ತ್ರ ಲೈಸನ್ಸ್ ಇದ್ದವರಿಗೆ
- ಸರ್ಕಾರದ ಪೆನ್ಶನ್ ಪಡೆಯುವ ಕುಟುಂಬಗಳಿಗೆ
- ನಗರ ಪ್ರದೇಶದಲ್ಲಿ ವಾಸಿಸಿಕೊಂಡು ವರ್ಷಕ್ಕೆ 3 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವ ಕುಟುಂಬಕ್ಕೆ.
ಹೌದು ಸದ್ಯ ಸರ್ಕಾರ ಇದೆ ರೀತಿಯ ನಿಯಮ ಮುಂದಿನ ದಿನಗಳಲ್ಲಿ ತಂದು ರೇಷನ್ ಕಾರ್ಡ್ ನಲ್ಲಿ ದೊಡ್ಡ ಬದಲಾವಣೆ ತರಲಿದೆ ಎನ್ನಲಾಗುತ್ತಿದೆ. ಆದರೆ ಅನೇಕ ಮಂದಿ ಈಗಾಗಲೇ ಇದನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಜನಾಕ್ರೋಶ ಈ ಯೋಜನೆ ಬಂದರೆ ಹೇಗಿರಬಹುದು ಎಂದರೆ ಊಹಿಸಲು ಅಸಾಧ್ಯ.
ಸದ್ಯಕ್ಕೆ ಕರ್ನಾಟಕದಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಕಾರ್ಯ ನಡೆಯುತ್ತಿದೆ ಹಾಗೆಯೆ ಹೊಸ ರೇಷನ್ ಕಾರ್ಡ್ ಕೂಡ ಶೀಘ್ರದಲ್ಲೇ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಮೇಲಿನ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಸರ್ಕಾರ ಈ ಹೊಸ ರೇಷನ್ ನೀಡುವ ಸಾಧ್ಯತೆ ಇದೆ. ಹಾಗೆಯೆ ಒಂದು ವೇಳೆ ಸುಳ್ಳು ಮಾಹಿತಿ ಕೊಟ್ಟು ರೇಷನ್ ಪಡೆದುಕೊಂಡರೂ ಸಹಿತ ಅಂತವರ ರೇಷನ್ ಸದ್ಯದಲ್ಲೇ ದಂಡ ಸಹಿತ ರದ್ದಾಗಲಿದೆ.