Ration Card: ಕೆಲವೇ ದಿನಗಳಲ್ಲಿ ರದ್ದಾಗಲಿದೆ ಇಂತವರ ರೇಷನ್ ಕಾರ್ಡ್, ಸರ್ಕಾರದ ಜಾರಿಗೆ ಬಂತು ಹೊಸ ರೂಲ್ಸ್.
ಇಂತಹ ರೇಷನ್ ಕಾರ್ಡುಗಳನ್ನ ರದ್ದು ಮಾಡಲು ಈಗ ರಾಜ್ಯ ಸರ್ಕಾರ ತೀರ್ಮಾನವನ್ನ ಮಾಡಿದೆ.
Ration Card Closure: ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಗೆ ರೇಷನ್ ಕಾರ್ಡ್ ಮುಖ್ಯವಾಗಿದೆ. ರೇಷನ್ ಕಾರ್ಡ್ ಕುರಿತಾಗಿ ಇತ್ತೀಚಿಗೆ ಹೊಸ ಹೊಸ ಅಪ್ಡೇಟ್ ಹೊರಬೀಳುತ್ತಿದೆ. ಇನ್ನ್ನು ರಾಜ್ಯ ಸರ್ಕಾರ ಬಿಪಿಎಲ್ ಪಡಿತರ ಚೀಟಿದಾರರಿಗೆ ವಿಶೇಷ ಯೋಜನೆಗಳನ್ನು ನೀಡುವುದಾಗಿ ಘೋಷಣೆ ಹೊರಡಿಸುತ್ತಿದೆ. ಈ ನಿಟ್ಟಿನಲ್ಲಿ ಬಿಪಿಎಲ್ ಕಾರ್ಡ್ ಪಡೆಯುವ ಹಂಬಲ ಜನರಲ್ಲಿ ಹೆಚ್ಚುತ್ತಿದೆ. ಯೋಜನೆಗಳ ಲಾಭ ಪಡೆಯುವ ಸಲುವಾಗಿ ಲಕ್ಷಾಂತರ ಜನರು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುತ್ತಿದ್ದಾರೆ.
ಬಿಪಿಎಲ್ ರೇಷನ್ ಕಾರ್ಡ್ (BPL Ration Card)
ಇನ್ನು ಸರ್ಕಾರ ಬಡಜನರಿಗಾಗಿ ಉಚಿತ ಪಡಿತರನ್ನು ನೀಡುತ್ತದೆ. ಇದನ್ನು ಕೆಲ ವರ್ಗದವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಪಡೆಯರು ಕೆಲವರು ಹೊಂಚು ಹಾಕುತ್ತಿದ್ದಾರೆ. ಸರ್ಕಾರ ಉಚಿತ ಭಾಗ್ಯಗಳ ಲಾಭಕ್ಕಾಗಿ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆ ಹೆಚ್ಚುತ್ತಿದೆ.
ಇನ್ನು ರಾಜ್ಯದಲ್ಲಿ ಗೃಹ ಲಕ್ಷ್ಮಿ ಅನ್ನಭಾಗ್ಯ ಯೋಜನೆಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ಮುಖ್ಯವಾಗಿದೆ. ಇದೀಗ ಸರ್ಕಾರ ಅನರ್ಹರು ಬಿಪಿಎಲ್ ಪಡಿತರ ಪ್ರಯೋಜನವನ್ನು ಪಡೆಯಬಾರದು ಎನ್ನುವ ಕಾರಣಕ್ಕೆ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ಇನ್ನುಮುಂದೆ ಇಂತವರ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಲಿದೆ.
ಕೆಲವೇ ದಿನಗಳಲ್ಲಿ ರದ್ದಾಗಲಿದೆ ಇಂತವರ ರೇಷನ್ ಕಾರ್ಡ್
ಇದೀಗ ಬಿಪಿಎಲ್ ಕಾರ್ಡ್ ಹೊಂದಿರುವ ಅನೇಕ ಕುಟುಂಬಗಳಿಗೆ ಸರ್ಕಾರ ಶಾಕ್ ನೀಡಿದೆ. ಸ್ವಂತ ಕಾರ್ ಹೊಂದಿರುವ ಕುಟುಂಬದ ಬಿಪಿಎಲ್ ಕಾರ್ಡ್ ರದ್ದಾಗುವ ಬಗ್ಗೆ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ K .H ಮುನಿಯಪ್ಪ ಘೋಷಣೆ ಹೊರಡಿಸಿದ್ದಾರೆ. ಸ್ವಂತ ಕಾರ್ಡ್ ಹೊಂದಿದವರಿಗೆ ಹೊಸ ಬಿಪಿಎಲ್ ಕಾರ್ಡ್ ನೀಡದಿರುವುದು ಹಾಗೂ ಪ್ರಸ್ತುತ ಹೊಂದಿರುವ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡುವ ಬಗ್ಗೆ ಘೋಷಣೆ ಹೊರಡಿಸಲಾಗಿದೆ.
ಸ್ವಂತ ಕಾರ್ ಹೊಂದಿರುವ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು
ವೈಟ್ ಬೋರ್ಡ್ ಕಾರು ಇರುವ ಕುಟುಂಬದ ಬಿಪಿಎಲ್ ಕಾರ್ಡ್ ರದ್ದಾಗಲಿದೆ ಮತ್ತು ಎಲ್ಲೊ ಬೋರ್ಡ್ ಕಾರ್ ಇರುವವರ ಬಿಪಿಎಲ್ ಕಾರ್ಡ್ ರದ್ದನ್ನು ಹಿಂಪಡೆಯಲು ಸರ್ಕಾರ ಚಿಂತನೆ ನಡೆಸುತ್ತಿದೆ. ದುಡಿಯುವ ಉದ್ದೇಶದಿಂದ ಎಲ್ಲೊ ಬೋರ್ಡ್ ಕಾರನ್ನು ಹೊಂದಿರುವವರ ಕಾರ್ಡನ್ನು ರದ್ದು ಮಾಡುವುದಿಲ್ಲ. ಸ್ವಂತ ಕಾರನ್ನು ಹೊಂದಿರುವ ಕುಟುಂಬದ ಬಿಪಿಎಲ್ ಕಾರ್ಡ್ ರದ್ದಾಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.