Ration Challan: BPL ಮತ್ತು APL ಕಾರ್ಡ್ ಇದ್ದವರಿಗೆ ಇನ್ನೊಂದು ಗುಡ್ ನ್ಯೂಸ್, ಇನ್ನುಮುಂದೆ ಈ ರಶೀದಿ ಕಡ್ಡಾಯ.
ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆಗೆ ಹೊಸ ನಿಯಮ.
Ration Card Latest Update: ರಾಜ್ಯದಲ್ಲಿ ಬಡ ಜನರಿಗಾಗಿ ಸರ್ಕಾರ ಉಚಿತ ಪಡಿತರನ್ನು ನೀಡುತ್ತಿದೆ. ಇತ್ತೀಚಿಗೆ ರಾಜ್ಯದಲ್ಲಿ Anna Bhagya ಯೋಜನೆ ಕೂಡ ಜನರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ ಎನ್ನಬಹುದು. ರಾಜ್ಯದ ಜನತೆಗೆ Anna Bhagya ಯೋಜನೆಯಡಿ 5KG ಅಕ್ಕಿ ಹಾಗೂ ಹಾಗೂ 5KG ಅಕ್ಕಿಯ ಬದಲಾಗಿ ಹೆಚ್ಚುವರಿ ಹಣವನ್ನು ಪಡೆಯುತ್ತಿದ್ದಾರೆ.
ಸಧ್ಯ ಉಚಿತ ಅಕ್ಕಿಯ ಲಾಭ ಪಡೆಯುತ್ತಿರುವ ಜನರಿಗೆ ಪಡಿತರ ಅಕ್ಕಿ ವಿತರಣೆಯಲ್ಲಿ ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆಗೆ ಹೊಸ ನಿಯಮ ಅಳವಡಿಸಿದೆ.
ಪಡಿತರ ವಿತರಣೆಗೆ ಸರ್ಕಾರದ ಹೊಸ ನಿಯಮ
ಸದ್ಯ ರಾಜ್ಯದಲ್ಲಿ ಪಡಿತರ ವಿತರಣೆಗೆ ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಿದೆ. ಪಡಿತರ ವಿತರಣೆಯನ್ನು ಮತ್ತಷ್ಟು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಸರಕಾರ ಇದೀಗ ಹೊಸ ಕ್ರಮ ಕೈಗೊಂಡಿದೆ. ಸರ್ಕಾರದ ಈ ಹೊಸ ನಿರ್ಧಾರ ಪಡಿತರ ಚೀಟಿ ಫಲಾನುಭವಿಗಳು ಸಾಕಷ್ಟು ಅನುಕೂಲ ಮಾಡಿಕೊಡಲಿದೆ. ಕೇಂದ್ರ ಸರ್ಕಾರದ ಸೂಚನೆ ಅನ್ವಯ ಆಹಾರ ಇಲಾಖೆ ಆಯುಕ್ತರು ಆದೇಶ ನೀಡಿದ್ದು ರಾಜ್ಯದ ಇನ್ನುಮುಂದೆ ಪಡಿತರ ವಿತರಣೆಯಲ್ಲಿ ಈ ನಿಯಮ ಕಡ್ಡಾಯವಾಗಲಿದೆ.
ಇನ್ನುಮುಂದೆ ನ್ಯಾಯಾಬೆಲೆ ಅಂಗಡಿಗಳಲ್ಲಿ ರಸೀದಿ ನೀಡುವುದು ಕಡ್ಡಾಯ
ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ವಿತರಿಸುವಾಗ ರಸೀದಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ಪಡಿತರ ವಿತರಣೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಲು ಸರ್ಕಾರ ನಿರ್ಧರಿಸಿದೆ. ಸದ್ಯ ಆಹಾರ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದು, ರಾಜ್ಯದ ಎಲ್ಲ ಪಡಿತರ ಅಂಗಡಿಗಳಲ್ಲಿ ಪಡಿತರ ಪಡೆದುಕೊಳ್ಳುವ ಗ್ರಾಹಕರಿಗೆ ಕಡ್ಡಾಯವಾಗಿ ರಸೀದಿ ನೀಡಬೇಕೆಂದು ಸೂಚನೆ ನೀಡಲಾಗಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ರಸೀದಿ ನೀಡಲು ಅಗತ್ಯವಿರುವ ಸೌಲಭ್ಯ ಅಳವಡಿಸಿಕೊಳ್ಳಲು ತಿಳಿಸಲಾಗಿದೆ.