New Ration Card: ಹೊಸ ರೇಷನ್ ಕಾರ್ಡಿಗಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್, ಸಿದ್ದರಾಮಯ್ಯ ಅಧಿಕೃತ ಘೋಷಣೆ

ಹೊಸ ರೇಷನ್ ಕಾರ್ಡ್ ಬಿಡುಗಡೆ, ಸಿದ್ದರಾಮಯ್ಯ ಅಧಿಕೃತ ಆದೇಶ.

New Ration Card Update: ಸದ್ಯ ರಾಜ್ಯದಲ್ಲಿ BPL Ration Card ಗೆ ಹೆಚ್ಚಿನ ಮಹತ್ವವಿದೆ. ರಾಜ್ಯ ಮತ್ತು ಕೇಂದ್ರ ಸರ್ಕ್ರ ಬಡವರಿಗಾಗಿ BPL ration Card ಅನ್ನು ನೀಡುತ್ತಿದ್ದು, ವಿವಿಧ ಯೋಜನೆಯನ್ನು ಕೂಡ ಪರಿಚಯಿಸುತ್ತಿದೆ. ದೇಶದಲ್ಲಿ BPL ರೇಷನ್ ಕಾರ್ಡ್ ಹೊಂದಿರುವವರು ಹೆಚ್ಚು ಲಾಭವನ್ನು ಪಡೆಯುತ್ತಿದ್ದಾರೆ ಎನ್ನಬಹುದು.

ಇನ್ನು ಕೆಲ ಅರ್ಹರು ಕೆಲವು ಕಾರಣಗಳಿಂದ BPL ration Card ಅನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಸದ್ಯ ರಾಜ್ಯ ಅರ್ಹರು BPL Ration ಕಾರ್ಡ್ ಅನ್ನು ಪಡೆದು ಸರ್ಕಾರದ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲಿ ಎನ್ನುವ ಉದ್ದೇಶದಿಂದ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆ ಅವಕಾಶವನ್ನು ನೀಡಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.

New Ration Card Update
Image Credit: News9live

ಹೊಸ ರೇಷನ್ ಕಾರ್ಡ್ ಬಿಡುಗಡೆ, ಸಿದ್ದರಾಮಯ್ಯ ಅಧಿಕೃತ ಆದೇಶ
ಶೀಘ್ರದಲ್ಲೇ ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ 4,37,23,911 ಮಂದಿ ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆಯುತ್ತಿದ್ದು ಶೇ.80ರಷ್ಟು ಕುಟುಂಬಗಳು ಬಿಪಿಎಲ್ ಅಡಿಯಲ್ಲಿವೆ.

ಇನ್ನು 1.27 ಕೋಟಿ ಬಿಪಿಎಲ್ ಕುಟುಂಬಗಳಿವೆ. ಹೊಸ ಕಾರ್ಡ್‌ ಗಾಗಿ 2.95 ಲಕ್ಷ ಅರ್ಜಿಗಳು ಬಾಕಿ ಉಳಿದಿವೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಬಡವರ ಸಂಖ್ಯೆ ಕಡಿಮೆಯಾದರೂ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ ಕಡಿಮೆಯಾಗದಿರಲು ಕಾರಣವೇನು…? ತಮಿಳುನಾಡಿನಲ್ಲಿ ಶೇ.40 ರಷ್ಟು ಬಿಪಿಎಲ್ ಇದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಅನರ್ಹರನ್ನು ಕೈಬಿಡಲು ಕ್ರಮ ಕೈಗೊಳ್ಳಬೇಕು. ಅದೇ ರೀತಿ ಮೃತ ಸದಸ್ಯರ ಹೆಸರು ತೆಗೆಯುವ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದಿದ್ದಾರೆ. ಅನರ್ಹರ BPL ration ಕಾರ್ಡ್ ಅನ್ನು ರದ್ದುಗೊಳಿಸುವುದರ ಜೊತೆಗೆ ಅರ್ಹರಿಗೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಸಿಎಂ ಸೂಚಿಸಿದ್ದಾರೆ.

Ration Card Latest News
Image Credit: Siasat

ಹೊಸ ರೇಷನ್ ಕಾರ್ಡ್ ಪಡೆಯಲು ಈ ದಾಖಲೆಗಳು ಕಡ್ಡಾಯ
*ಮತದಾರರ ಗುರುತಿನ ಚೀಟಿ

Join Nadunudi News WhatsApp Group

*ಆಧಾರ್ ಕಾರ್ಡ್

*ವಯಸ್ಸಿನ ಪ್ರಮಾಣಪತ್ರ

*ಚಾಲನಾ ಪರವಾನಿಗೆ

*ಸ್ವಯಂ ಘೋಷಿತ ಪ್ರಮಾಣಪತ್ರ

*ಇತ್ತೀಚಿನ ಪಾಸ್‌ ಪೋರ್ಟ್ ಅಳತೆಯ ಭಾವಚಿತ್ರ

*ಮೊಬೈಲ್ ನಂ.

*ಮನೆಯ ಸದಸ್ಯರ ಬಗ್ಗೆ ಮಾಹಿತಿ

Documents Required For New Ration Card
Image Credit: Karnataka Times

Join Nadunudi News WhatsApp Group