Ads By Google

ಹೊಸದಾಗಿ ರೇಷನ್ ಕಾರ್ಡ್ ಮಾಡಿಸುವವರಿಗೆ ದೊಡ್ಡ ಶಾಕಿಂಗ್ ಸುದ್ದಿ, ಒಂದು ವರ್ಷ ಸಿಗಲ್ಲ ರೇಷನ್ ಕಾರ್ಡ್.

ration card printing
Ads By Google

ಇತ್ತೀಚಿನ ದಿನಗಳಲ್ಲಿ ಜನರು ನಾನಾರೀತಿಯ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಹೇಳಬಹುದು. ಹೌದು ದೇಶದಲ್ಲಿ ಕರೋನ ಮಹಾಮಾರಿ ಕಾಣಿಸಿಕೊಂಡಾಗಿನಿಂದ ಜನರು ನಾನಾರೀತಿಯ ಸಮಸ್ಯೆ ಅನುಭವಿಸುತ್ತಿದ್ದು ಕರೋನ ಜನರ ಜೀವನವನ್ನೇ ಹಾಳು ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ವಿಷಯಕ್ಕೆ ಬರುವುದಾದರೆ ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಲ್ಲಿ ರೇಷನ್ ಕಾರ್ಡ್ ಬಳಕೆ ಮಾಡುತ್ತಿರುವವರು ಹಲವು ರೀತಿಯ ಸಮಸ್ಯೆ ಅನುಭಾವಯಿಸುತ್ತಿರುವುದನ್ನ ನಾವುನೀವೆಲ್ಲ ದಿನನಿತ್ಯ ನೋಡುತ್ತಿರುತ್ತೇವೆ ಎಂದು ಹೇಳಬಹುದು.

ಹೌದು ಕರೋನ ಮಹಾಮಾರಿಯ ಕಾರಣ ದೇಶದಲ್ಲಿ ಹಲವು ಸರ್ಕಾರೀ ಕೆಲಸಗಳು ನಡೆಯದೆ ಇರುವುದರ ಕಾರಣ ಜನರು ನಾನಾರೀತಿಯ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ರಾಜ್ಯದಲ್ಲಿ ಹೊಸ ಬಿಪಿಎಲ್ ರೇಷನ್ ಕಾರ್ಡುಗಳಿಗೆ ಅರ್ಜಿಯನ್ನ ಸಲ್ಲಿಸಿದವರಿಗೆ ರಾಜ್ಯ ಸರ್ಕಾರ ಈಗ ದೊಡ್ಡ ಶಾಕಿಂಗ್ ಸುದ್ದಿ ನೀಡಿದ್ದು ಇದು ಜನರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಏನದು ಶಾಕಿಂಗ್ ಸುದ್ದಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಸರ್ಕಾರದ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ಹೌದು ಸ್ನೇಹಿತರೆ ರಾಜ್ಯ ಸರ್ಕಾರ ಈಗ ಬಡಜನರಿಗೆ ದೊಡ್ಡ ಶಾಕಿಂಗ್ ಸುದ್ದಿಯನ್ನ ನೀಡಿದ್ದು ಮುಂದಿನ ಒಂದು ವರ್ಷಗಳ ಕಾಲ ಹೊಸ ರೇಷನ್ ಕಾರ್ಡುಗಳನ್ನ ನೀಡುವ ಪ್ರಕ್ರಿಯೆಯನ್ನ ಸ್ಥಗಿತಗೊಳಿಸಿದೆ. ಹೌದು ರಾಜ್ಯದಲ್ಲಿ ಕರೋನ ಮಹಾಮಾರಿಯ ಎರಡನೆಯ ಅಲೆ ಶುರುವಾಗುವ ಭೀತಿ ಕಾಡುತ್ತಿರುವ ಕಾರಣ ಅರ್ಜಿ ಸಲ್ಲಿಸುವವರು ಹಾಗೂ ಅರ್ಜಿ ಸಲ್ಲಿಸಲು ಕಾಯುತ್ತಿರುವವರು ಮತ್ತಷ್ಟು ದಿನ ಕಾಯುವುದು ಅನಿವಾರ್ಯವಾಗಿದೆ. ಇನ್ನು ರಾಜ್ಯ ಸರ್ಕಾರ ಹೊಸ ಬಿಪಿಎಲ್ ಕಾರ್ಡುಗಳನ್ನ ಪಡೆಯಲು ಆನ್ಲೈನ್ ಅವಕಾಶ ನೀಡಿದ್ದರು ನೀಡಿದ್ದರೂ ಕೂಡ ಸರ್ಕಾರ ಆದೇಶ ಹೊರಡಿಸಿದ ಬಳಿಕವಷ್ಟೇ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಶುರುವಾಗಲಿದೆ, ಆದರೆ ಸರ್ಕಾರ ಈವರೆಗೂ ಆದೇಶ ಹೊರಡಿಸಿಲ್ಲ.

ಇನ್ನು ಇದರಿಂದಾಗಿ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಬಿಪಿಎಲ್ ಕಾರ್ಡ್ ಇಲ್ಲದಿರುವುದು ಸಂಕಷ್ಟ ಎದುರಾಗಿದೆ. ಹೌದು ಕೆಲವು ರೋಗಗಳಿಂದ ಬಳಲುತ್ತಿರುವವರಿಗೆ ಆಸ್ಪತ್ರೆಗಳಲ್ಲಿ ಎಲವೂ ಉಚಿತ ಚಿಕೆತ್ಸೆಯನ್ನ ಬಿಪಿಎಲ್ ರೇಷನ್ ಕಾರ್ಡುಗಳು ಅತ್ಯವಶ್ಯಕವಾಗಿ ಬೇಕೇಬೇಕು ಎಂದು ಹೇಳಬಹುದು, ಆದರೆ ಈಗ ಒಮ್ಮೆಲೇ ಇದರ ಪ್ರಕ್ರಿಯೆಯನ್ನ ಸ್ಥಗಿತ ಮಾಡಿರುವುದು ಜನರ ಆಘಾತಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ದೇಶದಲ್ಲಿ ಮತ್ತು ರಾಜ್ಯದಲ್ಲಿ ಕರೋನ ಅಲೆ ಹೆಚ್ಚಾಗುತ್ತಿರುವ ಕಾರಣ ಇನ್ನು ಹಲವು ಸರ್ಕಾರೀ ಕೆಲಸಗಳು ಸ್ಥಗಳಿತಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸ್ನೇಹಿತರೆ ಸ್ನೇಹಿತರೆ ರಾಜ್ಯ ಸರ್ಕಾರದ ಈ ಆದೇಶದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಹೊಸ ರೇಷನ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ತಲುಪಿಸಿ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field