Ration Card Renewal: ಈಗ ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ರೇಷನ್ ಕಾರ್ಡ್ ಪಡೆದುಕೊಳ್ಳಿ, ಇಲ್ಲಿದೆ ಸುಲಭ ವಿಧಾನ.

ಈಗ ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.

Ration Card Renewal Latest Update: ಸದ್ಯ ದೇಶದಲ್ಲಿ ಪಡಿತರ ಚೀಟಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎನ್ನಬಹುದು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು ಪಡಿತರ ಚೀಟಿ ಮುಖ್ಯವಾಗಿದೆ. ಈ ಹಿನ್ನಲೆ ಜನರು ಹೆಚ್ಚಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ.

ಇನ್ನು ಅನರ್ಹರು ಪಡಿತರ ಚೀಟಿಯನ್ನು ಪಡೆಯಬಾರದು ಎನ್ನುವ ಕಾರಣದಿಂದ ಸರಕಾರ ಸಾಕಷ್ಟು ನಿಯಮವನ್ನು ರೂಪಿಸಿದೆ. ಸರ್ಕಾರದ ನಿಯಮಗಳನುಸಾರ ಬಡತನ ರೇಖೆಗಿಂತ ಕೆಳಗಿರುವವರು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು. ಇನ್ನು ನೀವು ಅರ್ಜಿ ಸಲ್ಲಿಸಲು ಇನ್ನುಮುಂದೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಸರ್ಕಾರ ನೀವು ಮನೆಯಲ್ಲಿಯೇ ಕುಳಿತು ಅರ್ಜಿ ಸಲ್ಲಿಸಲು ಅವಕಾಶವನ್ನು ಮಾಡಿಕೊಟ್ಟಿದೆ.

Ration Card New Update 2024
Image Credit: Zeebiz

ಈಗ ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ರೇಷನ್ ಕಾರ್ಡ್ ಪಡೆದುಕೊಳ್ಳಿ
ಛತ್ತೀಸ್‌ ಗಢದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲಾ 77 ಲಕ್ಷ ಪಡಿತರ ಚೀಟಿಗಳ ನವೀಕರಣಕ್ಕಾಗಿ ರಾಜ್ಯ ಮಟ್ಟದ ಅಭಿಯಾನವು ಆರಂಭವಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲಾ ಪಡಿತರ ಚೀಟಿಗಳ ನವೀಕರಣ ಕಾರ್ಯವನ್ನು ರಾಜ್ಯ ಸರ್ಕಾರವು ನಿರ್ಧರಿಸಿದೆ. ಪಡಿತರ ಚೀಟಿಗಳನ್ನು 25 ಜನವರಿ 2024 ರಿಂದ 29 ಫೆಬ್ರವರಿ 2024 ರ ವರೆಗೆ ನವೀಕರಣ ಮಾಡಲಾಗುತ್ತದೆ.

ಈ ನಿಟ್ಟಿನಲ್ಲಿ ಜ.19 ರಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ವಿವರವಾದ ಸೂಚನೆ ನೀಡಲಾಗಿದ್ದು,  ಆಹಾರ ಇಲಾಖೆಯಿಂದ ನೂತನ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗಿದ್ದು, ಪಡಿತರ ಚೀಟಿದಾರರು ತಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಇನ್ನು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಸಾಧ್ಯವಾಗದಿದ್ದರೆ, ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ಆನ್‌ ಲೈನ್ ಮತ್ತು ಆಫ್‌ ಲೈನ್ ಪ್ರಕ್ರಿಯೆಯ ಮೂಲಕ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

Ration Card Renewal Latest Update
Image Credit: Businessleague

ಇಂತವರಿಗೆ ಉಚಿತ ನವೀಕರಣ
ಪಡಿತರ ಚೀಟಿಯಲ್ಲಿ ಸೇರಿಸಲಾದ ಯಾವುದೇ ಸದಸ್ಯರಿಗೆ ಇ-ಕೆವೈಸಿ ಪೂರ್ಣಗೊಂಡರೆ, ಫಲಾನುಭವಿಯು ಮೊಬೈಲ್ ಅಪ್ಲಿಕೇಶನ್ ಮೂಲಕ ಎಲೆಕ್ಟ್ರಾನಿಕ್ ಅರ್ಜಿಯನ್ನು ಸಲ್ಲಿಸಬಹುದು. ಅಂತ್ಯೋದಯ, ಆದ್ಯತಾ, ನಿರ್ಗತಿಕರು ಮತ್ತು ಅಂಗವಿಕಲ ವರ್ಗಗಳ ಅಡಿಯಲ್ಲಿ ನೀಡಲಾದ ಪಡಿತರ ಚೀಟಿಗಳ ಸಂಪೂರ್ಣ ನವೀಕರಣ ಪ್ರಕ್ರಿಯೆಯು ಉಚಿತವಾಗಿರುತ್ತದೆ ಮತ್ತು ಅವರು ಹೊಸ ಪಡಿತರ ಚೀಟಿ ಪಡೆಯಲು ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ. ಸಾಮಾನ್ಯ ವರ್ಗದ ಪಡಿತರ ಚೀಟಿದಾರರಿಗೆ ಆ್ಯಪ್ ಮೂಲಕ ನವೀಕರಣಕ್ಕೆ 10 ರೂ.ಗಳನ್ನು ನಿಗದಿಪಡಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group