ರಾಜ್ಯ ಮತ್ತು ಕೇಂದ್ರ ಸರ್ಕಾರ ಈಗಾಗಲೇ ಹಲವು ನಿಯಮಗಳನ್ನ ಜಾರಿಗೆ ತಂದಿದ್ದು ಕೆಲವು ನಿಯಮಗಳು ಜನರ ತಲೆಬಿಸಿಗೆ ಕಾರಣವಾಗಿದೆ ಎಂದು ಹೇಳುಇದರೆ ತಪ್ಪಾಗಲ್ಲ. ಹೌದು ರಾಜ್ಯ ಸರ್ಕಾರ ಈಗ ಮತ್ತೆ ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ ಶಾಕಿಂಗ್ ಸುದ್ದಿ ನೀಡಿದ್ದೆ ಎಂದು ಹೇಳಿದರೆ ತಪ್ಪಾಗಲ್ಲ. ಕೆಲವು ನಿಯಮಗಳ ಕಾರಣ ರಾಜ್ಯ ಸರ್ಕಾರ ಈ ನಿರ್ಧಾರವನ್ನ ಮಾಡಿದ್ದು ಇದು ಕೆಲವರ ಭಯಕ್ಕೆ ಕೂಡ ಕಾರಣವಾಗಿದೆ. ಹೌದು ರಾಜ್ಯಾದ್ಯಂತ ಬಿಪಿಎಲ್ ರೇಷನ್ ಕಾರ್ಡುಗಳು ರದ್ದಾಗಲಿದ್ದು ಈ ಸುದ್ದಿ ಜನರಲ್ಲಿ ಶಾಕ್ ಮೂಡುವಂತೆ ಮಾಡಿದೆ. ಹಾಗಾದರೆ ಯಾರ ರೇಷನ್ ಕಾರ್ಡುಗಳು ರದ್ದಾಗಲಿದೆ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಆ ಹೊಸ ನಿಯಮ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ರಾಜ್ಯ ಸರ್ಕಾರ ಈ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ರಾಜ್ಯದ ಬಿಪಿಎಲ್ ಪಡಿತರ ಚೀಟಿದಾರರಿಗೆ ಇದೊಂದು ತುರ್ತು ಮಾಹಿತಿ ಇದೆ. ಸರ್ಕಾರ ತಿಳಿಸಿರೋ ಈ ಮಾಹಿತಿ ನೀಡದೆ ಇದ್ದರೆ ನೀವು ಕೂಡಲೇ ನಿಮ್ ರೇಷನ್ ಕಾರ್ಡ್ ಕಳೆದುಕೊಳ್ಳೋದು ಗ್ಯಾರೆಂಟಿ. ಹೌದು ಸ್ನೇಹಿತರೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರೋರು ಈ ಕೂಡಲೇ ನ್ಯಾಯಬೆಲೆ ಅಂಗಡಿಗೆ ತೆರಳಿ ಆಧಾರ್ ಕಾರ್ಡ್ ಜೋಡಣೆ ಹಾಗೂ ಕುಟುಂಬದ ಸದಸ್ಯರ ಬೆರಳಚ್ಚು ನೀಡಲೇಬೇಕು ಅಂತ ಸರ್ಕಾರ ತಿಳಿಸಿದೆ. ಹೌದು ಬಿಪಿಎಲ್ ಕಾರ್ಡುದಾರರು ಕೆವೈಸಿ ಮಾಡಿಸದಿದ್ದರೆ ಅಂತಹವರಿಗೆ ರೇಷನ್ ನೀಡೋದನ್ನೇ ರದ್ದುಗೊಳಿಸಲಾಗುತ್ತೆ ಅಂತ ಆಹಾರ ಮತ್ತು ನಾಗರಿಕ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವ ಜನರಿಗೆ ಆಹಾರ ಧಾನ್ಯಗಳನ್ನ ನೀಡಲಾಗುತ್ತಿದೆ, ಆದರೆ ಬಿಪಿಎಲ್ ಕಾರ್ಡುಗಳನ್ನು ಮಧ್ಯಮರ್ಗದವರು ಅಲ್ಲದೆ ಕೆಲ ಶ್ರೀಮಂತರೂ ಕೂಡ ಹೊಂದಿರೋದು ಪತ್ತೆಯಾಗಿದೆ. ಈ ಶ್ರೀಮಂತರ ಬಿಪಿಎಲ್ ಕಾರ್ಡುಗಳನ್ನ ಪತ್ತೆಹಚ್ಚೋ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಮಾಡಿದ್ದು ಬಿಪಿಎಲ್ ಕಾರ್ಡಿಗೆ ಆಧಾರ್ ಕಾರ್ಡ್ ಜೋಡಣೆ ಮಾಡೋದನ್ನು ಕಡ್ಡಾಯಗೊಳಿಸಿದೆ. ಇನ್ನು ಬಿಪಿಎಲ್ ಕಾರ್ಡುದಾರರು ಮತ್ತು ಕಾರ್ಡಿನಲ್ಲಿ ಹೆಸರು ಹೊಂದಿರೋ ಸದಸ್ಯರೂ ಕೂಡ ಸಮೀಪದ ನ್ಯಾಯಬೆಲೆ ಅಂಗಡಿಗೆ ತೆರಳಿ ಇದಕ್ಕಾಗಿ ಬೆರಳಚ್ಚು ನೀಡಬೇಕು, ಇಲ್ಲವಾದಲ್ಲಿ ಅಂತವರ ಹೆಸರನ್ನು ಬಿಪಿಎಲ್ ಪಟ್ಟಿಯಿಂದಲೇ ಕೈಬಿಡೋದಾಗಿ ಆಹಾರ ಇಲಾಖೆ ತಿಳಿಸಿದೆ.
ಇನ್ನು ಬಿಪಿಎಲ್ ಕರ್ದುಗೆ ಆಧಾರ್ ಕಾರ್ಡು ಜೋಡಣೆ ಮಾಡಲು ಇದೆ ತಿಂಗಳ 31 ನೇ ತಾರೀಕು ಕೊನೆಯ ದಿನಾಂಕವಾಗಿದೆ. ಇನ್ನು ಈಗಾಗಲೇ ರಾಜ್ಯದಲ್ಲಿ 1.73 ಲಕ್ಷ ಅನಧಿಕೃತ ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸಲಾಗಿದೆ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ರೇಷನ್ ಕಾರ್ಡುಗಳು ಅವಶ್ಯಕವಾಗಿ ರದ್ದಾಗಲಿದೆ ಎಂದು ಆಹಾರ ಮತ್ತು ನಾಗರೀಕ ಇಲಾಖೆಯವರು ತಿಳಿಸಿದ್ದಾರೆ. ಸದ್ಯ ಚಿತ್ರದುರ್ಗ ಜಿಲ್ಲೆಯೊಂದರಲ್ಲೇ ಸುಮಾರು 16 ಸಾವಿರಕ್ಕೂ ಹೆಚ್ಚು ಮಂದಿ ಆಧಾರ್ ಕಾರ್ಡ್ ಜೋಡಣೆ ಮಾಡದೇ ತಮ್ಮ ಬಿಪಿಎಲ್ ಕಾರ್ಡ್ ಕಳೆದುಕೊಂಡಿದ್ದಾರೆ. ಹೀಗಾಗಿ ನೀವು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಅಕ್ಟೋಬರ್ 31 ರ ಒಳಗಾಗಿ ಇ-ಕೆವೈಸಿ ಮಾಡಿಸಿಕೊಳ್ಳಿ. ಸ್ನೇಹಿತರೆ ಈ ಮಾಹಿತಿಯನ್ನ ಬಿಪಿಎಲ್ ಕಾರ್ಡುಗಳನ್ನ ಹೊಂದಿರುವ ಎಲ್ಲಾ ಜನರಿಗೆ ತಲುಪಿಸಿ.