EPOS: ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ರಿಲೀಫ್ ನೀಡಿದ ಕೇಂದ್ರ ಸರ್ಕಾರ, ಆದೇಶ ಹೊರಡಿಸಿದ ಕೇಂದ್ರ.

ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ ನೀಡಿದ್ದ ಕೇಂದ್ರ ಸರ್ಕಾರ.

Ration Card Update: ಸರ್ಕಾರ ಜನಸಾಮಾನ್ಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ದೇಶದ ಬಡಜನತೆಗಾಗಿ ಸರ್ಕಾರ ಉಚಿತ ಪಡಿತರನ್ನು ನೀಡುತ್ತಿದೆ. ಇತ್ತೀಚೆಗಂತೂ ಪಡಿತರ ವಿತರಣೆಯಲ್ಲಿ (Ration Card) ಸಾಕಷ್ಟು ರೀತಿಯ ಅಪ್ಡೇಟ್ ಗಳು ಹೊರಬರುತ್ತಲೇ ಇದೆ. ಪಡಿತರ ವಿತರಣೆಯಲ್ಲಿ ವಿವಿಧ ರೀತಿಯ ಸೌಲಭ್ಯಗಳನ್ನು ಸರ್ಕಾರ ಜಾರಿಗೊಳಿಸಿದೆ. ಇದೀಗ ಪಡಿತರ ವಿತರಣೆಯಲ್ಲಿ ಹೊಸ ಸೌಲಭ್ಯ ಬಿಡುಗಡೆಗೊಂಡಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

Ration Card New Facility
Image Credit: dnaindia

ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ
ದೇಶದ ಜನರಿಗಾಗಿ ಉಚಿತ ಪಡಿತರನ್ನು ಸರ್ಕಾರ ನೀಡುತ್ತಿದೆ. ಜನಸಾಮಾನ್ಯರು ಉಚಿತ ಪಡಿತರ ವಿತರಣೆಯ ಲಾಭವನ್ನು ಪಡೆಯುತ್ತಿದ್ದಾರೆ. ಇತ್ತೀಚಿಗೆ ಮೋದಿ ಸರ್ಕಾರವು ಒನ್ ನೇಷನ್ ಒನ್ ರೇಷನ್ ಕಾರ್ಡ್ (One Nation One Ration Card) ಯೋಜನೆಯನ್ನು ಜಾರಿಗೊಳಿಸಿದೆ. ಇದರ ಜೊತೆಗೆ ಆನ್ಲೈನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (POS) ಸಾಧನಗಳನ್ನು ಎಲ್ಲ ಅಂಗಡಿಗಳಲ್ಲಿ ಕಡ್ಡಾಯಗೊಳಿಸಲಾಗಿದೆ.

ಆನ್ಲೈನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (EPOS) 
ರಾಷ್ಟ್ರೀಯ ಆಹಾರ ಭದ್ರತಾ ಕಾನೂನಿನ ಅಡಿಯಲ್ಲಿ ಪಡಿತರ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಮಾಪಕಗಳೊಂದಿಗೆ ಆನ್ಲೈನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ ಸಾಧನಗಳನ್ನು ಲಿಂಕ್ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಸೌಲಭ್ಯದಿಂದಾಗಿ ಪಡಿತರ ಚೀಟಿದಾರರು ಪೂರ್ಣ ಪ್ರಮಾಣದ ಆಹಾರ ದಾನ್ಯಗಳನ್ನು ಪಡೆಯಬಹುದು.

One Nation, One Ration Card.
Image Credit: rewariyasat

EPOS ಸಾಧನಗಳನ್ನು ಸರಿಯಾಗಿ ಚಲಾಯಿಸಲು ರಾಜ್ಯಗಳನ್ನು ಉತ್ತೇಜಿಸಲು ಮತ್ತು ಪ್ರತಿ ಕ್ವಿನ್ಟ್ಯಾಲ್ ಗೆ ರೂ. 17 .00 ಹೆಚ್ಚುವರಿ ಲಾಭದಿಂದ ಉಳಿತಾಯವನ್ನು ಉತ್ತೇಜಿಸಲು ಆಹಾರ ಭದ್ರತೆ 2015 ರ ಉಪ -ನಿಯಮ (2) ಅನ್ನು ಹೊಂದಿದೆ ಎಂದು ಸರ್ಕಾರ ವರದಿ ಮಾಡಿದೆ. ನಿಯಮ 7 ರ ಅಡಿಯಲ್ಲಿ ಸರ್ಕಾರ ತಿದ್ದುಪಡಿ ಮಾಡಿದೆ.

Join Nadunudi News WhatsApp Group

Join Nadunudi News WhatsApp Group