Ration Card: ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಮಹಿಳೆಯರಿಗೆ ಇನ್ನೊಂದು ಗುಡ್ ನ್ಯೂಸ್, ಸೆ 10 ರ ಒಳಗೆ ಈ ಕೆಲಸ ಮಾಡಿ.
ರೇಷನ್ ಕಾರ್ಡ್ ವಿಷಯವಾಗಿ ಇನ್ನೊಂದು ಘೋಷಣೆ ಮಾಡಿದ ರಾಜ್ಯ ಸರ್ಕಾರ.
Ration Card Update: ಕೆಲವು ತಿಂಗಳಿಂದ ಅಂದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರು ಅನೇಕ ಯೋಜನೆಗಳನ್ನು ಪಡೆಯುತ್ತಿದ್ದಾರೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಯಾವುದೇ ಯೋಜನೆ ಅಥವಾ ಸೌಲಭ್ಯ ಪಡೆಯಬೇಕೆಂದರೆ ಕುಟುಂಬದ ಪಡಿತರ ಚೀಟಿ ಬಹಳ ಮುಖ್ಯವಾಗಿರುತ್ತದೆ.
ರೇಷನ್ ಕಾರ್ಡ್ ತಿದ್ದುಪಡಿ, ಸೇರ್ಪಡೆಗೆ ಬಹುಮುಖ್ಯವಾಗಿ ವ್ಯಕ್ತಿಯ ಆಧಾರ್ ಕಾರ್ಡ್ ಹಾಗು ಆಧಾರ್ ಸಂಖ್ಯೆಯ ಮಾಹಿತಿ ಆಧರಿಸಿ, ಇ-ಕೈವೆಸಿಯೊಂದಿಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲಾಗುತ್ತದೆ. ಈಗಾಗಲೇ ಚಾಲ್ತಿಯಲ್ಲಿರುವಂತ ಪಡಿತರ ಚೀಟಿಗೆ ಹೊಸದಾಗಿ ಸದಸ್ಯರನ್ನು ಸೇರ್ಪಡೆಗೊಳಿಸಬೇಕಾದರೇ ಅದಕ್ಕಾಗಿ ಕೆಲವು ದಾಖಲೆಗಳನ್ನು ಕೊಡುವುದು ಅತ್ಯಗತ್ಯವಾಗಿದೆ.
ಅದೇ ಮದುವೆಯ ನಂತರ ಮಹಿಳೆಯ ಆಧಾರ್ ಕಾರ್ಡ್, ವಿವಾಹ ನೋಂದಣಿ ಪತ್ರ, ಗಂಡನ ಪಡಿತರ ಪೋಟೋ ಕಾಪಿಯನ್ನು ನೀಡಬೇಕು.ಪಡಿತರ ಚೀಟಿಯಿಂದ ಹೆಸರು ತೆಗೆಸೋದಕ್ಕೆ ಯಾವುದೇ ದಾಖಲೆ ಅಗತ್ಯವಿಲ್ಲ. ತೆಗೆಸೋದಕ್ಕೆ ಕಾರಣ ತಿಳಿಸಿ, ಅವರ ಹೆಸರನ್ನು ಡಿಲಿಟ್ ಮಾಡಿಸಬಹುದಾಗಿದೆ.
ಸೆ 10 ರ ಒಳಗೆ ಈ ಕೆಲಸ ಮಾಡಿ.
ಚಾಲ್ತಿಯಲ್ಲಿರುವಂತ ರೇಷನ್ ಕಾರ್ಡ್ ಗೆ ನೀವು ನಿಮ್ಮ ಮಗುವಿನ ಹೆಸರನ್ನು ಸೇರಿಸೋದಕ್ಕೆ, ಆ ಮಗುವಿನ ಜನನ ಪ್ರಮಾಣ ಪತ್ರ, ಇಬ್ಬರು ಪೋಷಕರ ಆಧಾರ್ ಕಾರ್ಡ್ ಪ್ರತಿಯನ್ನು ನೀಡುವುದು ಕಡ್ಡಾಯವಾಗಿದೆ. ಅಲ್ಲದೇ ಮನೆಯ ಮುಖ್ಯಸ್ಥರ ಪಡಿತರ ಚೀಟಿಯನ್ನು ನೀಡಬೇಕಿದೆ.
ಈ ಬಳಿಕ ನಿಮ್ಮ ಮಗುವಿನ ಹೆಸರನ್ನು ಚಾಲ್ತಿಯಲ್ಲಿರುವಂತ ರೇಷನ್ ಕಾರ್ಡ್ ಗೆ ಸೇರಿಸಬಹುದಾಗಿದೆ. ಈ ರೀತಿಯಾಗಿ ಸೆಪ್ಟೆಂಬರ್ 1 ರಿಂದ 10 ರ ವರೆಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಂಡು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಬಹುದಾಗಿದೆ.