Ration Shop Bandh: ಪ್ರತಿ ತಿಂಗಳು ರೇಷನ್ ಪಡೆಯುವವರಿಗೆ ಬೇಸರದ ಸುದ್ದಿ, ರಾಜ್ಯದಲ್ಲಿ ಬಂದ್ ಆಗಲಿದೆ ಎಲ್ಲಾ ರೇಷನ್ ಅಂಗಡಿ.

ಇನ್ನುಮುಂದೆ ಬಂದ್ ಆಗಲಿದೆ ನ್ಯಾಯ ಬೆಲೆ ಅಂಗಡಿಗಳು.

Ration Distribution Shop Bandh: ಸದ್ಯ ರಾಜ್ಯದಲ್ಲಿ ಉಚಿತ ಪಡಿತರ ವಿತರಣೆ ನೀಡಲಾಗುತ್ತಿದೆ. ಕಾಂಗ್ರೆಸ್ (Congress) ಸರ್ಕಾರ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಅನ್ನ ಭಾಗ್ಯ ಯೋಜನೆಯಡಿ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತ ಪಡಿತರನ್ನು ನೀಡುತ್ತಿದೆ. ಆದರೆ ಸರ್ಕಾರ ಚುನಾವಣಾ ಪೂರ್ವದಲ್ಲಿ ಉಚಿತವಾಗಿ 10 kg ಅಕ್ಕಿ ನೀಡುವುದಾಗಿ ಘೋಷಿಸಿತ್ತು. ಆದರೆ ಅಕ್ಕಿ ಸರಬರಾಜಿನ ಕೊರತೆ ಇರುವ ಕಾರಣ 5kg ಅಕ್ಕಿಯ ಬದಲಾಗಿ ಹೆಚ್ಚುವರಿ ಹಣ ನೀಡಲಾಗುತ್ತದೆ ಎಂದು ಸರ್ಕಾರ ಘೋಷಿಸಿತ್ತು.

Ration Distribution Latest Update
Image Credit: Economictimes

ಅನ್ನ ಭಾಗ್ಯ ಯೋಜನೆಯ ಲಾಭ ಅರ್ಹರಿಗೆ ತಲುಪುತ್ತಿಲ್ಲ
ಜುಲೈ ನಿಂದ ರಾಜ್ಯದ ಜನತೆಗೆ 5kg ಅಕ್ಕಿ ಹಾಗೂ 5kg ಅಕ್ಕಿಯ ಬದಲಾಗಿ ಹೆಚ್ಚುವರಿಯಾಗಿ ಪ್ರತಿ ಕೆಜಿಗೆ 34 ರೂ. ಗಳಂತೆ 170 ರೂ. ಗಳನ್ನೂ ಕುಟುಂಬಕ್ಕೆ ಅನುಗುಣವಾಗಿ ಸರ್ಕಾರ DBT ಮೂಲಕ ಹಣ ವರ್ಗಾವಣೆ ಮಾಡುತ್ತಿದೆ. ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಿಸಿರುವ ನಾಲ್ಕು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದರೂ ಕೂಡ ಎಲ್ಲ ಯೋಜನೆಗಳ ಲಾಭ ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎನ್ನಬಹುದು.

ಗೃಹ ಲಕ್ಷ್ಮಿ (Gruha Lakshmi) ಯೋಜನೆ ಇನ್ನು ಸಂಪೂರ್ಣವಾಗಿ ಎಲ್ಲರಿಗು ಲಭ್ಯವಾಗಿಲ್ಲ ಎನ್ನುವುದು ಎಲ್ಲರ ಗಮನಕೆ ತಿಳಿದಿರುವ ವಿಚಾರ. ಆದರೆ ಸದ್ಯ ರಾಜ್ಯದಲ್ಲಿ ಅನ್ನ ಭಾಗ್ಯ ಯೋಜನೆ ಕೂಡ ಅರ್ಹರಿಗೆ ತಲುಪುತ್ತಿಲ್ಲ ಎನ್ನುವುದು ಸದ್ಯದ ಚಿಂತೆಯಾಗಿದೆ. ಸದ್ಯ ಕಾಂಗ್ರೆಸ್ ಸರ್ಕಾರ ಅನ್ನ ಭಾಗ್ಯ ಯೋಜನೆಗೆ ಬೇಕಾಗುವ ಅಕ್ಕಿಯನ್ನು ಪೂರೈಸಲು ಸಾಧ್ಯವಾಗದೆ ಸಮಸ್ಯೆಗೆ ಸಿಲುಕಿಕೊಂಡಿದೆ ಎನ್ನಬಹುದು. ಇದರ ನೇರ ಪರಿಣಾಮ ನ್ಯಾಯ ಬೆಲೆ ಅಂಗಡಿಗಳ ಮೇಲೆ ಬಿದ್ದಿದೆ ಎನ್ನಬಹುದು.

ration shop
Image Credit: Businesstoday

ಶೀಘ್ರದಲ್ಲೇ ನ್ಯಾಯಬೆಲೆ ಅಂಗಡಿಗಳು ಬಂದ್ ಆಗಲಿವೆ
ಈಗಾಗಲೇ ರಾಜ್ಯ ಸರ್ಕಾರ ಘೋಷಿಸಿರುವ 5KG ಅಕ್ಕಿ ಕೂಡ ನ್ಯಾಯಬೆಲೆ ಅಂಗಡಿಗೆ ಬಂದು ತಲುಪಿಲ್ಲ. ಇನ್ನು ಕೇಂದ್ರದಿಂದ ಬರುವ ಐದು ಕೆಜಿ ಅಕ್ಕಿ ವಿತರಣೆಯಿಂದ ಮತ್ತು ಅದರಿಂದ ಬರೋ ಕಮಿಷನ್ ನಿಂದ ಪಡಿತರ ಅಂಗಡಿ ನಡೆಸೋದು ಕಷ್ಟವಾಗುತ್ತಿದೆ ಎಂದು ಪಡಿತರ ವಿತರಕರು ಅಭಿಪ್ರಾಯ ತಿಳಿಸಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿ ವಿತರಿಸಬೇಕು.ಅಂದರೆ ಸರ್ಕಾರಕ್ಕೆ ಪ್ರತಿ ತಿಂಗಳು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗುತ್ತದೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರ್ಹರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಪ್ರತಿ ಫಲಾನುಭವಿಗೆ ಹತ್ತು ಕೆಜಿ ಅಕ್ಕಿ ನೀಡುವಷ್ಟು ದಾಸ್ತಾನು ಇರಲಿಲ್ಲ. ಜನರಿಗೆ ಅನ್ನ ಭಾಗ್ಯ ಹಣ ತಲುಪದ ಕಾರಣ ಜನರು ಪಡಿತರ ವಿತರಕರನ್ನು ಪ್ರಶ್ನಿಸುತ್ತಿದ್ದಾರೆ. ಇನ್ನು ಸರ್ಕಾರದಿಂದ ಪಡಿತರ ವಿತರಕರಿಗೆ ಕಮಿಷನ್ ಲಭ್ಯವಾಗದ ಕಾರಣ ನ್ಯಾಯಬೆಲೆ ಅಂಗಡಿಗಳನ್ನು ಬಂದ್ ಮಾಡಲು ವಿತರಕರು ನಿರ್ಧರಿಸಿದ್ದಾರೆ.

Join Nadunudi News WhatsApp Group

Join Nadunudi News WhatsApp Group