ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಜನರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಬೊಮ್ಮಾಯಿ, ಹೊಸ ಯೋಜನೆ ಜಾರಿಗೆ.

ನಮ್ಮ ರಾಜ್ಯ ಸರ್ಕಾರ ಜನರ ಅನುಕೂಲದ ಉದ್ದೇಶದಿಂದ ರಾಜ್ಯದಲ್ಲಿ ಅನೇಕ ಯೋಜನೆಗಳನ್ನ ಜಾರಿಗೆ ತಂದಿದೆ ಎಂದು ಹೇಳಬಹುದು. ರಾಜ್ಯದಲ್ಲಿ ಜನರಿಗೆ ಯಾವುದಕ್ಕೂ ಸಮಸ್ಯೆ ಆಗಬಾರದು ಅನ್ನುವ ಉದ್ದೇಶದಿಂದ ದೇಶದಲ್ಲಿ ಹಲವು ಯೋಜನೆಯನ್ನ ಜಾರಿಗೆ ತರಲಾಗಿದ್ದು ಈ ಯೋಜನೆಗಳ ಲಾಭವನ್ನ ಜನರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇನ್ನು ರಾಜ್ಯದಲ್ಲಿ ಬಿಪಿಎಲ್ ಕಾರ್ಡುಗಳನ್ನ ಹೊಂದಿರುವವರಿಗೆ ಈಗಾಗಲೇ ಹಲವು ಯೋಜನೆಗಳನ್ನ ಜಾರಿಗೆ ತರಲಾಗಿದೆ ಮತ್ತು ಈಗಲೂ ಕೂಡ ಹಲವು ಯೋಜನೆಗಳನ್ನ ಜಾರಿಗೆ ತರಲಾಗುತ್ತಿದೆ ಎಂದು ಹೇಳಬಹುದು. ಬಿಪಿಎಲ್ ಕಾರ್ಡುಗಳನ್ನ ಹೊಂದಿರುವ ಬಡಕುಟುಂಬದ ಎಲ್ಲಾ ಜನರಿಗೆ ಈಗಾಗಲೇ ಬಹುತೇಕ ಎಲ್ಲಾ ಸೌಕರ್ಯಗಳನ್ನ ಕಲ್ಪಿಸಿಕೊಡಲಾಗಿದೆ.

ಇನ್ನು ಈಗ ಯಾವುದೇ ರೇಷನ್ ಕಾರ್ಡುಗಳನ್ನ ಹೊಂದಿರುವ ಎಲ್ಲಾ ಜನರಿಗೆ ಈಗ ಮತ್ತೆ ರಾಜ್ಯದ ಮುಖ್ಯ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಬಂಪರ್ ಗೂಡ ನ್ಯೂಸ್ ನೀಡಿದ್ದು ಇದು ಜನರ ಖುಷಿಗೆ ಕಾರಣವಾಗಿದೆ ಎಂದು ಹೇಳಬಹುದು. ಹಾಗಾದರೆ ಏನದು ಬಂಪರ್ ಗೂಡ ನ್ಯೂಸ್ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ರೇಷನ್ ಕಾರ್ಡುಗಳನ್ನ ಹೊಂದಿರುವ ಎಲ್ಲಾ ಜನರಿಗೆ ತಲುಪಿಸಿ. ಹೌದು ಸ್ನೇಹಿತರೆ ಮುಂದಿನ ದಿನಗಳಲ್ಲಿ ರೇಷನ್ ಕಾರ್ಡುಗಳನ್ನ ಹೊಂದಿರುವವರ ಮನೆಯ ಬಾಗಿಲಿಗೆ ರೇಷನ್ ದಾನ್ಯಗಳು ಬರಲಿದೆ ಎಂದು ರಾಜ್ಯ ಮುಖ್ಯ ಮಂತ್ರಿಗಳು ಹೇಳಿದ್ದಾರೆ.

ration foo to home

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಹೊನ್ನೆಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಮುಖ್ಯ ಮಂತ್ರಿಗಳು ಪಡಿತರ ಧಾನ್ಯಗಳನ್ನು ಫಲಾನುಭವಿಗಳ ಮನೆ ಭಾಗಿಲಿಗೆ ತಲುಪಿಸೋ ಕೆಲಸ ಮಾಡಲಾಗುತ್ತದೆ ಎಂಬುದಾಗಿ ಘೋಷಣೆ ಮಾಡಿದರು. ಮೊದಲ ಹಂತವಾಗಿ ನವೆಂಬರ್ 1 ರಿಂದ ಈ ಯೋಜನೆ ಬೆಂಗಳೂರಿನಲ್ಲಿ ಜಾರಿಗೆ ಬರಲಿದ್ದು ಮುಂದಿನ ಜನರಿ 26 ರ ನಂತರ ರಾಜ್ಯವ್ಯಾಪ್ತಿ ಈ ಯೋಜನೆ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ. ಸಾಮಾಜಿ ಭದ್ರತೆ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಲರ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲಿದ್ದೇವೆ.

ಜನರಿಗೆ ಇನ್ನು ಮುಂದೆ ಸೌಲಭ್ಯಗಳ ಮಾಹಿತಿಯನ್ನು ಮೊಬೈಲ್ ಗೆ ಹಾಕಲಿದ್ದೇವೆ ಮತ್ತು ಈ ಮೂಲಕ ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಫಲಾನುಭವಿಗೆ ಸೌಲಭ್ಯ ಮುಟ್ಟಿಸುತ್ತೇವೆಂದು ತಿಳಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಗ್ರಾಮ ಮಟ್ಟದ ಅಧಿಕಾರಿಗಳವರೆಗೆ ಎಲ್ಲರೂ ಜನರ ಮನೆ ಬಾಗಿಲಿಗೆ ಹೋಗಬೇಕೆಂಬ ಸದುದ್ದೇಶದ ಕಾರ್ಯಕ್ರಮ ಜನಸೇವಕ ಆಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಅಧಿಕಾರಿಗಳು ಜನರ ಮನೆ ಬಾಗಿಲಿಗೆ ಹೋಗಲಿದ್ದಾರೆ. ಜನರಿಗೆ ಸರ್ಕಾರದ ಸೌಲಭ್ಯಗಳು ಜೇನು ತುಪ್ಪದಂತೆ ಸಿಗಬೇಕು ಎಂದು ಮುಖ್ಯ ಮಂತ್ರಿಗಳು ಹೇಳಿದ್ದಾರೆ. ಸರ್ಕಾರಿ ಸೌಲಭ್ಯಗಳು ನೇರವಾಗಿ ಜನರಿಗೆ ತಲುಪಬೇಕು. ಯಾವುದೇ ಮಧ್ಯವರ್ತಿಗಳ ಹಾವಳಿ ಇರಕೂಡದು. ಇದೇ ಸದುದ್ದೇಶದಿಂದ ಜನ ಸೇವಕ ಕಾರ್ಯಕ್ರಮ ರೂಪಿಸಿ, ಬದಲಾವಣೆ ತರಲು ಹೊರಟಿದ್ದೇವೆ. ಇಡೀ ರಾಜ್ಯದ ಜನರ ಅಭಿವೃದ್ಧಿಗೆ ನಾವು ಬದ್ಧರಿದ್ದೇವೆ. ಬದಲಾವಣೆಯನ್ನೂ ತರುತ್ತೇವೆ ಮುಖ್ಯ ಮಂತ್ರಿಗಳು ಹೇಳಿದ್ದಾರೆ. ಸ್ನೇಹಿತರೆ ಮುಖ್ಯ ಮಂತ್ರಿಗಳ ಈ ಘೋಷಣೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

ration foo to home

Join Nadunudi News WhatsApp Group