Ration Receipt: ಪ್ರತಿ ತಿಂಗಳು ರೇಷನ್ ಪಡೆಯುವ ಎಲ್ಲಾ ಜನರಿಗೆ ಕೇಂದ್ರದಿಂದ ಹೊಸ ನಿಯಮ, ಮುದ್ರಿತ ರಶೀದಿ ಕಡ್ಡಾಯ.
ಇನ್ನುಮುಂದೆ ಪಡಿತರನ್ನು ಪಡೆದ ನಂತರ ಮುದ್ರಿತ ರಶೀದಿ ಪಡೆಯುವುದು ಕಡ್ಡಾಯ.
Ration Receipt Latest Update: ಸದ್ಯ Ration Card ಗೆ ಸಂಬಂಧಿಸಿದಂತೆ ದಿನಕ್ಕೊಂದು ಅಪ್ಡೇಟ್ ಹೊರಬೀಳುತ್ತಿದೆ. ಇತ್ತೀಚಿಗೆ BPL Ration Card ಅನ್ನು ಹೊಂದಲು ಎಲ್ಲರು ಕಡ್ಡಾಯವಾಗಿ ಸರ್ಕಾರದ ನಿಯಮವನ್ನು ಪಾಲಿಸಬೇಕಿದೆ. ಇತೀಚೆಗೆ ಸರ್ಕಾರ ಪಡಿತರ ವಿತರಣೆಯಲ್ಲಿ ಹೊಸ ಹೊಸ ನಿಯಮವನ್ನು ಪರಿಚಯಿಸುತ್ತಿದೆ.
ಇದೀಗ ಸರ್ಕಾರ BPL Ration Card ಹೊಂದಿರುವವರಿಗೆ ಹೊಸ ನಿಯಮವನ್ನು ಸೂಚಿಸಿದೆ. ಸದ್ಯ ಉಚಿತ ಅಕ್ಕಿಯ ಲಾಭ ಪಡೆಯುತ್ತಿರುವ ಜನರಿಗೆ ಪಡಿತರ ಅಕ್ಕಿ ವಿತರಣೆಯಲ್ಲಿ ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಿದೆ. BPL ಕಾರ್ಡ್ ದಾರರು ಪ್ರತಿ ತಿಂಗಳು ಪಡಿತರನ್ನು ಪಡೆಯುವ ಮುನ್ನ ಈ ನಿಯಮವನ್ನು ತಿಳಿದುಕೊಳ್ಳಬೇಕಿದೆ.
ಪಡಿತರ ವಿತರಣೆಗೆ ಕೇಂದ್ರದಿಂದ ಹೊಸ ರೂಲ್ಸ್
ಸದ್ಯ ಕೇಂದ್ರ ಸರಕಾರ ಪಡಿತರ ವಿತರಣೆಗೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ಪಡಿತರ ವಿತರಣೆಯನ್ನು ಮತ್ತಷ್ಟು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಸರಕಾರ ಇದೀಗ ಹೊಸ ಕ್ರಮ ಕೈಗೊಂಡಿದೆ. ಸರ್ಕಾರದ ಈ ಹೊಸ ನಿರ್ಧಾರ ಪಡಿತರ ಚೀಟಿ ಫಲಾನುಭವಿಗಳು ಸಾಕಷ್ಟು ಅನುಕೂಲ ಮಾಡಿಕೊಡಲಿದೆ. ಕೇಂದ್ರ ಸರ್ಕಾರದ ಸೂಚನೆ ಅನ್ವಯ ಆಹಾರ ಇಲಾಖೆ ಆಯುಕ್ತರು ಆದೇಶ ನೀಡಿದ್ದು ರಾಜ್ಯದಲ್ಲಿ ಇನ್ನುಮುಂದೆ ಪಡಿತರ ವಿತರಣೆಯಲ್ಲಿ ಈ ನಿಯಮ ಕಡ್ಡಾಯವಾಗಲಿದೆ.
ಇನ್ನುಮುಂದೆ ಪಡಿತರನ್ನು ಪಡೆದ ನಂತರ ಮುದ್ರಿತ ರಶೀದಿ (Ration Receipt) ಪಡೆಯುವುದು ಕಡ್ಡಾಯ
ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ವಿತರಿಸುವಾಗ ರಸೀದಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ಪಡಿತರ ವಿತರಣೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಲು ಸರ್ಕಾರ ನಿರ್ಧರಿಸಿದೆ.
ಸದ್ಯ ಆಹಾರ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದು, ರಾಜ್ಯದ ಎಲ್ಲ ಪಡಿತರ ಅಂಗಡಿಗಳಲ್ಲಿ ಪಡಿತರ ಪಡೆದುಕೊಳ್ಳುವ ಗ್ರಾಹಕರಿಗೆ ಕಡ್ಡಾಯವಾಗಿ ರಸೀದಿ ನೀಡಬೇಕೆಂದು ಸೂಚನೆ ನೀಡಲಾಗಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ರಸೀದಿ ನೀಡಲು ಅಗತ್ಯವಿರುವ ಸೌಲಭ್ಯ ಅಳವಡಿಸಿಕೊಳ್ಳಲು ತಿಳಿಸಲಾಗಿದೆ. ಮುಂದಿನ 2024 ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.