Ration Shop Close: ಈ ತಿಂಗಳು ಅಕ್ಕಿ ಜೊತೆಗೆ ಅನ್ನಭಾಗ್ಯ ಹಣ ಸಿಗುವುದು ಕೂಡ ಅನುಮಾನ, ಎಲ್ಲಾ ರೇಷನ್ ಅಂಗಡಿ ಕ್ಲೋಸ್ ಆಗಲಿದೆ.
ಕರ್ನಾಟಕದಲ್ಲಿ ಅನ್ನ ಭಾಗ್ಯ ರೇಷನ್ ಅಂಗಡಿಗಳು ನವೆಂಬರ್ 10 ರಿಂದ ಬಂದ್ ಆಗಲಿವೆ.
Ration Shop Closed In Karnataka: ದೇಶದಲ್ಲಿ ಕರೋನ ಅಲೆ ಕಾಣಿಸಿಕೊಂಡಾಗ ಕೇಂದ್ರ ಸರ್ಕಾರ ದೇಶದ ಜನತೆಗೆಗಾಗಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಪ್ರಾರಂಭಿಸಿತ್ತು. ಈ ಯೋಜನೆಯಡಿ ಬಡವರಿಗೆ ಉಚಿತವಾಗಿ 5KG ಅಕ್ಕಿಯನ್ನು ನೀಡುವುದಾಗಿ ಘೋಷಣೆ ಹೊರಡಿಸಿದೆ. ಈಗಲೂ ಕೂಡ ಈ ಯೋಜನೆಯಡಿ ದೇಶದ ಬಡ ಜನರಿಗೆ ಉಚಿತ ಅಕ್ಕಿಯ ವಿತರಣೆ ಆಗುತ್ತಿದೆ.
ಬಡ ಜನರಿಗಾಗಿ ಉಚಿತ ಪಡಿತರ ವಿತರಣೆ
ಇನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರವನ್ನು ಪಡೆದುಕೊಂಡಾಗ ರಾಜ್ಯದಲ್ಲಿ Anna Bhagya ಯೋಜನೆಯಡಿ ಉಚಿತ 10KG ಅಕ್ಕಿ ನೀಡುವುದಾಗಿ ಘೋಷಣೆ ಹೊರಡಿಸಿತ್ತು. ಜುಲೈ ನಿಂದ ರಾಜ್ಯದ ಜನತೆಗೆ 5kg ಅಕ್ಕಿ ಹಾಗೂ 5kg ಅಕ್ಕಿಯ ಬದಲಾಗಿ ಹೆಚ್ಚುವರಿಯಾಗಿ ಪ್ರತಿ ಕೆಜಿಗೆ 34 ರೂ. ಗಳಂತೆ 170 ರೂ. ಗಳನ್ನೂ ಕುಟುಂಬಕ್ಕೆ ಅನುಗುಣವಾಗಿ ಸರ್ಕಾರ DBT ಮೂಲಕ ಹಣ ವರ್ಗಾವಣೆ ಮಾಡುತ್ತಿದೆ. ಸದ್ಯ Anna Bhagya ಯೋಜನೆಯಡಿ ಪಡಿತರ ವಿತರಣೆ ಸರ್ಕಾರಕ್ಕೆ ಒಂದು ರೀತಿ ಸಮಸ್ಯೆಯಾಗಿದೆ ಎನ್ನಬಹುದು.
ಕರ್ನಾಟಕದಲ್ಲಿ ರೇಷನ್ ಅಂಗಡಿ ಬಂದ್ ಆಗುತ್ತಾ..?
ಸದ್ಯ ಕಾಂಗ್ರೆಸ್ ಸರ್ಕಾರ ಅನ್ನ ಭಾಗ್ಯ ಯೋಜನೆಗೆ ಬೇಕಾಗುವ ಅಕ್ಕಿಯನ್ನು ಪೂರೈಸಲು ಸಾಧ್ಯವಾಗದೆ ಸಮಸ್ಯೆಗೆ ಸಿಲುಕಿಕೊಂಡಿದೆ ಎನ್ನಬಹುದು. ಇದರ ನೇರ ಪರಿಣಾಮ ನ್ಯಾಯ ಬೆಲೆ ಅಂಗಡಿಗಳ ಮೇಲೆ ಬಿದ್ದಿದೆ ಎನ್ನಬಹುದು. ಈಗಾಗಲೇ ರಾಜ್ಯ ಸರ್ಕಾರ ಘೋಷಿಸಿರುವ 5KG ಅಕ್ಕಿ ಕೂಡ ನ್ಯಾಯಬೆಲೆ ಅಂಗಡಿಗೆ ಬಂದು ತಲುಪಿಲ್ಲ.
ಇನ್ನು ಕೇಂದ್ರದಿಂದ ಬರುವ ಐದು ಕೆಜಿ ಅಕ್ಕಿ ವಿತರಣೆಯಿಂದ ಮತ್ತು ಅದರಿಂದ ಬರೋ ಕಮಿಷನ್ ನಿಂದ ಪಡಿತರ ಅಂಗಡಿ ನಡೆಸೋದು ಕಷ್ಟವಾಗುತ್ತಿದೆ ಎಂದು ಪಡಿತರ ವಿತರಕರು ಅಭಿಪ್ರಾಯ ತಿಳಿಸಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿ ವಿತರಿಸಬೇಕು. ಅಂದರೆ ಸರ್ಕಾರಕ್ಕೆ ಪ್ರತಿ ತಿಂಗಳು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗುತ್ತದೆ.
ನವೆಂಬರ್ 10 ರಿಂದ ರೇಷನ್ ಅಂಗಡಿ ಬಂದ್
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರ್ಹರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಪ್ರತಿ ಫಲಾನುಭವಿಗೆ ಹತ್ತು ಕೆಜಿ ಅಕ್ಕಿ ನೀಡುವಷ್ಟು ದಾಸ್ತಾನು ಇರಲಿಲ್ಲ. ಜನರಿಗೆ ಅನ್ನ ಭಾಗ್ಯ ಹಣ ತಲುಪದ ಕಾರಣ ಜನರು ಪಡಿತರ ವಿತರಕರನ್ನು ಪ್ರಶ್ನಿಸುತ್ತಿದ್ದಾರೆ. ಇನ್ನು ಸರ್ಕಾರದಿಂದ ಪಡಿತರ ವಿತರಕರಿಗೆ ಕಮಿಷನ್ ಲಭ್ಯವಾಗದ ಕಾರಣ ನ್ಯಾಯಬೆಲೆ ಅಂಗಡಿಗಳನ್ನು ಬಂದ್ ಮಾಡಲು ವಿತರಕರು ನಿರ್ಧರಿಸಿದ್ದಾರೆ.
ಕೇವಲ ಕೇಂದ್ರ ಸರ್ಕಾರದ ದಾಸ್ತಾನಿನ ಅಕ್ಕಿಯನ್ನು ವಿತರಣೆ ಮಾಡುವುದರಿಂದ ಪಡಿತರ ವಿತರಕರಿಗೆ ಆರ್ಥಿಕ ನಷ್ಟ ಎದುರಾಗುತ್ತಿದೆ. ಈ ಕಾರಣಕ್ಕೆ November ತಿಂಗಳಿನಲ್ಲಿ ಅಕ್ಕಿಯನ್ನು ವಿತರಣೆ ಮಾಡದೆ ಬ್ರಹತ್ ಪ್ರತಿಭಟನೆ ಮಾಡಲು ಪಡಿತರ ವಿತರಕರು ನಿರ್ಧರಿಸಿದ್ದಾರೆ. ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆಗೆ ಪಡಿತರ ವಿತರಕರು ವಿರೋಧ ವ್ಯಕ್ತಪಡಿಸಿದ್ದು, ಕರ್ನಾಟಕದಲ್ಲಿ ಅನ್ನ ಭಾಗ್ಯ ರೇಷನ್ ಅಂಗಡಿಗಳು ನವೆಂಬರ್ 10 ರಿಂದ ಬಂದ್ ಆಗಲಿವೆ.