Ration Card: ಅಕ್ಕಿ ಕೊಡುವ ವಿಚಾರದಲ್ಲಿ ಧಿಡೀರ್ ಹೊಸ ಬದಲಾವಣೆ, ಮಧ್ಯಮವರ್ಗಕ್ಕೆ ಗಿಫ್ಟ್
ರೇಷನ್ ಕಾರ್ಡ್ ಹೊಂದಿರುವ ಜನರಿಗೆ ಕೇಂದ್ರದಿಂದ ಇನ್ನೊಂದು ಹೊಸ ಯೋಜನೆಗೆ ಜಾರಿಗೆ ಬಂದಿದೆ.
Ration Card New Update: ಇದೀಗ ಆಹಾರ ಇಲಾಖೆಯಿಂದ ಜನತೆಗೆ ಮತ್ತೊಂದು ಸಿಹಿ ಸುದ್ದಿ ಹೊರ ಬಿದ್ದಿದೆ. ಪಡಿತರ ಚೀಟಿದಾರರಿಗೆ ಇತ್ತೀಚಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ಒದಗಿಸಿ ಕೊಡುತ್ತಿದೆ. ಕಾಂಗ್ರೆಸ್ ನ(Congress) ಅನ್ನಭಾಗ್ಯ ಯೋಜನೆಯಿಂದಲೂ ಜನರಿಗೆ ಅನುಕೂಲವಾಗುತ್ತಿದೆ. ಜನರ ಆರೋಗ್ಯದ ಉದ್ದೇಶದಿಂದ ರೇಷನ್ ಧಾನ್ಯಗಳಲ್ಲಿ ಬದಲಾವಣೆ ಮಾಡಲಾಗಿದೆ.
ಕಾಂಗ್ರೆಸ್ ನ ಅನ್ನಭಾಗ್ಯ ಯೋಜನೆ
ಕಾಂಗ್ರೆಸ್ ಸರ್ಕಾರದ ಅನ್ನ ಭಾಗ್ಯ ಯೋಜನೆಯ ಕುರಿತು ಸಾಕಷ್ಟು ಅಪ್ಡೇಟ್ ಗಳು ಈಗಾಗಲೇ ಹೊರ ಬಿದ್ದಿವೆ. ಸರ್ಕಾರ 10 ಕೆಜಿ ಅಕ್ಕಿಯಲ್ಲಿ 5 ಕೆಜಿ ಅಕ್ಕಿ ನೀಡಲು ಮುಂದಾಗಿದೆ. ಈ ಹಣವನ್ನು ನೇರವಾಗಿ ಪಡಿತರ ಚೀಟಿಯ ಮುಖ್ಯಸ್ಥರ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ ಕೆಲವರು ಇನ್ನು ಹಣ ಪಡೆದುಕೊಳ್ಳಲಿಲ್ಲ.
ಇನ್ನು ಅನ್ನಭಾಗ್ಯ ಯೋಜನೆಯಡಿ 4 ಕೋಟಿಗೂ ಅಧಿಕ ಬಿಪಿಎಲ್ ಫಲಾನುಭವಿಗಳಿಗೆ ಸರ್ಕಾರ ತಲಾ 10 ಕೆಜಿ ಅಕ್ಕಿ ನೀಡುವ ಬದಲು 5 ಕೆಜಿ ಅಕ್ಕಿ ನೀಡಿ ಇನ್ನುಳಿದ 5 ಕೆಜಿ ಅಕ್ಕಿಗೆ ಹಣ ನೀಡುವುದಾಗಿ ಭರವಸೆ ನೀಡಿತ್ತು.ಆದರೆ ಬಿಪಿಎಲ್ ಕಾರ್ಡುದಾರರಲ್ಲಿ 22 ಲಕ್ಷ ಕುಟುಂಬಗಳು ಬ್ಯಾಂಕ್ ಖಾತೆಗಳನ್ನೇ ಹೊಂದಿಲ್ಲ ಎಂದು ತಿಳಿದು ಬಂದಿದೆ.
ಬ್ಯಾಂಕ್ ಖಾತೆಯನ್ನ ಯಾರು ಹೊಂದಿರುವುದಿಲ್ಲವೋ ಅವರಿಗೆ ಹಣ ಜಮಾ ಆಗುವುದಿಲ್ಲ ಎಂದು ಸರ್ಕಾರ ಸ್ಪಷ್ಟನೆಯಲ್ಲಿ ತಿಳಿಸಿದೆ. ಸರ್ಕಾರ ಅನ್ನಭಾಗ್ಯ ಯೋಜನೆಯ ಹಣ ಇನ್ನು ಸಾಕಷ್ಟು ಕುಟುಂಬದವರಿಗೆ ಜಮಾ ಆಗಲಿಲ್ಲ.
ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಬದಲಾಗಿ ನೀಡುತ್ತಿರುವ ಹಣವನ್ನು ಬಂದಿದೆಯಾ ಎಂದು ತಿಳಿದುಕೊಳ್ಳಲು ಬ್ಯಾಂಕ್ ಗೆ ಹೋಗಿ ಬೇಸರದಿಂದ ವಾಪಾಸ್ ಆಗುತ್ತಿದ್ದಾರೆ. ಇದಕ್ಕೆ ಕಾರಣ ಅವರ ಬ್ಯಾಂಕ್ ಖಾತೆ ಸಕ್ರಿಯವಾಗಿಲ್ಲ ಎಂದರ್ಥ. ಹೀಗಾಗಿ ಇದನ್ನು ಚೆಕ್ ಮಾಡಿಕೊಳ್ಳುವುದು ಉತ್ತಮ.
ಪಡಿತರ ಚೀಟಿದಾರರಿಗೆ ಸಿಗಲಿದೆ ಸಾರವರ್ಧಿತ ಅಕ್ಕಿ
ಭಾರತ ಆಹಾರ ನಿಗಮದಲ್ಲಿ ಲಭ್ಯತೆಯ ಅನುಸಾರ ಜುಲೈ 2023 ರಲ್ಲಿ ಸಾರ್ವಜನಿಕ ವಿತರಣಾ ಪದ್ಧತಿಯಡಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಚೀಟಿದಾರರಿಗೆ ಸಾರವರ್ಧಿತ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದ್ದು, ಸಾರ್ವಜನಿಕ ಪಡಿತರಾದಾರರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ ಸಾರವರ್ಧಿತ ಅಕ್ಕಿಯನ್ನು ಪಡೆದು ಸದುಪಯೋಗಿಸಿಕೊಳ್ಳಬೇಕೆಂದು ಸಾರ್ವಜನಿಕ ಪಡಿತರಾದಾರರಲ್ಲಿ ಆಹಾರ ಇಲಾಖೆ ಮಾಹಿತಿ ನೀಡಿದೆ.