Ration Shop: ರೇಷನ್ ಕಾರ್ಡ್ ಇದ್ದವರಿಗೆ ಬೇಸರದ ಸುದ್ದಿ, ಇಂದಿನಿಂದ ರಾಜ್ಯದ ಎಲ್ಲಾ ರೇಷನ್ ಅಂಗಡಿ ಬಂದ್.

ಇಂದಿನಿಂದ ರಾಜ್ಯದಲ್ಲಿ ಎಲ್ಲ ನ್ಯಾಯ ಬೆಲೆ ಅಂಗಡಿಗಳು ಬಂದ್.

Anna Bhagya Scheme: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಚುನಾವಣಾ ಸಮಯದಲ್ಲಿ ಐದು ಗ್ಯಾರೆಂಟಿ ಗಳನ್ನೂ ಹೊರಡಿಸಿ ಕಾಂಗ್ರೆಸ್ ಸರ್ಕಾರ ಇದೀಗ ಅಧಿಕಾರಕ್ಕೆ ಬಂದಿದೆ. ಐದು ಗ್ಯಾರೆಂಟಿ ಗಳನ್ನೂ ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸುತ್ತಿದೆ.

ಅನ್ನಭಾಗ್ಯ ಯೋಜನೆ ಸಿಎಂ ಸಿದ್ದರಾಮಯ್ಯ ಅವರ ಮಹತ್ವದ ಘೋಷಣೆಯಾಗಿದೆ. ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಜುಲೈನಿಂದ ನೀಡುವುದಾಗಿ ಹೇಳಿದರು. ಆದರೆ ಈ ಯೋಜನೆಯ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.

All ration shops in the state are closed from today.
Image Credit: Timesofindia

ಅನ್ನಭಾಗ್ಯ ಯೋಜನೆ
ರಾಜ್ಯ ಸರ್ಕಾರ ಅಕ್ಕಿ ನೀಡಲು ಹಲವು ರೀತಿಯ ಸರ್ಕಸ್ ಗಳನ್ನೂ ಮಾಡುತ್ತಿದೆ. ಆದರೂ ಸಹ ಸರ್ಕಾರಕ್ಕೆ ಅಕ್ಕಿ ನೀಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. 5 ಕೆಜಿ ಅಕ್ಕಿ ಮತ್ತು ಇನ್ನುಳಿದ 5 ಕೆಜಿ ಅಕ್ಕಿಗೆ ಹಣವನ್ನು ಕುಟುಂಬದವರ ಖಾತೆಗೆ ವರ್ಗಾಯಿಸಲು ಸರ್ಕಾರ ನಿರ್ಧರಿಸಿದೆ.

ಆದರೆ ರೇಷನ್ ಅಂಗಡಿ ವರ್ತಕರು ನಮಗೆ ಇದರಿಂದ ನಷ್ಟ ಆಗುವುದು ಪಕ್ಕ, ನಾವು 10 ಕೆಜಿ ಅಕ್ಕಿ ನೀಡಿದರೆ ನಮಗೆ ಕಮಿಷನ್ ಹೆಚ್ಚಾಗಿ ಸಿಗುತ್ತೆ ಅಂತ ವೋಟ್ ಹಾಕಿದ್ದೀವಿ. ಈಗ 5 ಕೆಜಿ ಅಕ್ಕಿ ನೀಡಿದರೆ ಕಮಿಷನ್ ಕಟ್ ಆಗುತ್ತದೆ, ಇದನ್ನೇ ನಂಬಿಕೊಂಡು ನಾವು ಹೇಗೆ ಜೀವನ ಮಾಡುವುದು ಅಂತಾ ಆತಂಕಗೊಂಡಿದ್ದಾರೆ.

All ration shops in the state are closed from today.
Image Credit: Thesouthfirst

ನ್ಯಾಯಬೆಲೆ ಅಂಗಡಿ ಬಂದ್
ಈ ಕಾರಣದಿಂದ ವರ್ತಕರು ರಾಜ್ಯದ ಒಟ್ಟು 20 ಸಾವಿರಕ್ಕೂ ಅಧಿಕ ಪಡಿತರ ವಿತರಕರು ಇಂದಿನಿಂದ ನ್ಯಾಯಬೆಲೆ ಅಂಗಡಿಯನ್ನು ಬಂದ್ ಮಾಡಿ ರೇಷನ್ ವಿಲೇವಾರಿ ಮಾಡದಿರಲು ನಿರ್ಧಾರ ಮಾಡಿದ್ದಾರೆ.

Join Nadunudi News WhatsApp Group

ಸರ್ಕಾರ ನಮ್ಮನ್ನು ಕರೆದು ಚರ್ಚೆ ಮಾಡಬೇಕು, ಖಾತೆಗೆ ಹಣ ಹಾಕುವ ಬದಲು 10 ಕೆಜಿಗೆ ಬೇರೆ ಬೇರೆ ದವಸಗಳನ್ನು ನೀಡಿ, ಇಲ್ಲವೇ ಖಾತೆಗೆ ಹಣ ಹಾಕುತ್ತೀರಾ. ನಮಗೆ 10 ಕೆಜಿಯ ಕಮಿಷನ್ ನೀಡಿ ಅನ್ನುವ ಪಟ್ಟು ಹಿಡಿದ್ದಾರೆ. ಒಟ್ಟಿನಲ್ಲಿ ಅಕ್ಕಿ ಸಿಗದೇ ಇದ್ದರು ಪರವಾಗಿಲ್ಲ, ಹಣ ಹಾಕಿ ಬಿಡೋಣ ಅಂತ ನಿರ್ಧಾರ ಮಾಡಿದ್ದ ಸರ್ಕಾರಕ್ಕೆ ನ್ಯಾಯಬೆಲೆ ವಿತರಕರ ಬೇಡಿಕೆ ಹೊಸ ತಲೆನೋವಿಗೆ ಕಾರಣವಾಗಿದೆ.

Join Nadunudi News WhatsApp Group