Ravi Basrur Remuneration: ಕಬ್ಜ ಚಿತ್ರಕ್ಕೆ ದುಬಾರಿ ಸಂಭಾವನೆ ಪಡೆದ ರವಿ ಬಸ್ರೂರು, ರವಿ ಬಸ್ರೂರು ಅವರಿಗೆ ಹೆಚ್ಚಾಯಿತು ಬೇಡಿಕೆ.
Music Director Ravi Basrur Salary In Kabzaa Movie: ಕಬ್ಜ ಸಿನಿಮಾ ಇಂದು ಬಿಡುಗಡೆಯಾಗಿ ಪ್ರೇಕ್ಷಕರಿಂದ ಬಹಳಷ್ಟು ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಕಬ್ಜ ಸಿನಿಮಾದಲ್ಲಿ ರವಿ ಬಸ್ರೂರು (Ravi Basrur) ಅವರ ಸಂಗೀತ ಚೆನ್ನಾಗಿ ಮೂಡಿಬಂದಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ರವಿ ಬಸ್ರೂರು ಖ್ಯಾತ ಸಂಗೀತ ನಿರ್ದೇಶಕರಾಗಿದ್ದು ಕಬ್ಜ ಸಿನಿಮಾದಲ್ಲಿ ತಮ್ಮ ಸಂಗೀತದ ಹೊಸ ಛಾಪು ಮೂಡಿಸಿದ್ದಾರೆ. ಕಬ್ಜ ಸಿನಿಮಾದ ಹಾಡುಗಳು ಅಭಿಮಾನಿಗಳಿಗೆ ಇನ್ನಷ್ಟು ಮೆಚ್ಚುಗೆಯಾಗಿದೆ. ಕಬ್ಜ ಸಿನಿಮಾದ ಮೂಲಕ ರವಿ ಬಸ್ರೂರು ಅವರು ಇನ್ನಷ್ಟು ಖ್ಯಾತಿ ಪಡೆಯಲಿದ್ದಾರೆ ಎನ್ನಬಹುದು.
ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರುರು
ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಕಬ್ಜ ಸಿನಿಮಾದಲ್ಲಿ ಮಾಸ್ ಹಾಡುಗಳನ್ನು ನೀಡಿದ್ದಾರೆ. ಇನ್ನು ಈ ಹಾಡುಗಳು ಜನರಿಗೆ ಹೆಚ್ಚು ಮೆಚ್ಚುಗೆಯಾಗಿದೆ. ಖ್ಯಾತ ಸಂಗೀತ ನಿರ್ದೇಶಕರಾದ ರವಿ ಬಸ್ರೂರು ಅವರು ಹಲವು ಭಾಷೆಯ ಸಿನಿಮಾಗಳಿಗೆ ಸಂಗೀತವನ್ನು ನೀಡಿದ್ದಾರೆ.
ಅಲ್ಲದೆ ತಮ್ಮ ಹಾಡುಗಳ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಸಿನಿಮಾವಾಗಿ ಮಿಂಚಲಿರುವ ಕಬ್ಜ ಸಿನಿಮಾದಲ್ಲಿ ಸಹ ರವಿ ಬಸ್ರೂರು ಅವರನ್ನು ತಮ್ಮ ಸಂಗೀತ ನಿರ್ದೇಶನದ ಮೂಲಕ ಜನರ ಗಮನ ಸೆಳೆದಿದ್ದಾರೆ.
ಕಬ್ಜ ಸಿನಿಮಾಗಾಗಿ ದುಬಾರಿ ಸಂಭಾವನೆ ಪಡೆದ ರವಿ ಬಸ್ರೂರು
ಇನ್ನು ರವಿ ಬಸ್ರೂರು ಅವರು ಕಬ್ಜ ಸಿನಿಮಾದಲ್ಲಿ ಸಂಗೀತ ನಿರ್ದೇಶನ ಮಾಡಿದ್ದಕ್ಕೆ 3 ರಿಂದ 5 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಕಬ್ಜ ಸಿನಿಮಾ ನೋಡಿದ ಸಿನಿ ಪ್ರೇಕ್ಷಕರು ಡೈರೆಕ್ಟರ್ ಆರ್ ಚಂದ್ರು, ಸಂಗೀತ ನಿರ್ದೇಶಕ ರವಿ ಬಸ್ರೂರು , ಮತ್ತು ಜೊತೆಯಾಗಿ ನಟಿಸಿರುವ ಸುದೀಪ್ ಮತ್ತು ಉಪೇಂದ್ರ ಅವರನ್ನು ಹೊಗಳುತ್ತಿದ್ದಾರೆ. ಇನ್ನು ನಟಿ ಶ್ರಿಯಾ ಸರನ್ ಅವರ ನಟನೆಯನ್ನು ನೋಡಿ ಸಹ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.