Ravindar: ಮಿಸ್ ಮ್ಯಾಚ್ ಜೋಡಿ ನಡುವೆ ಬಂತಾ ಬಿರುಕು, ಒಂಟಿಯಾಗಿ ದುಃಖ ಹಂಚಿಕೊಂಡ ರವೀಂದರ್.
ರವೀಂದರ್ ಚಂದ್ರಶೇಖರನ್ ಅವರು ಒಂಟಿಯಾಗಿ ಫೋಟೋ ಶೇರ್ ಮಾಡಿದ ಕಾರಣ ಇಬ್ಬರ ನಡುವೆ ಬಿರುಕು ಮೂಡಿದೆ ಅನ್ನುವ ಸುದ್ದಿ ಈಗ ವೈರಲ್ ಆಗಿದೆ.
Ravindar Chandrasekaran Latest Instagram Post: ಪ್ರೀತಿಸಿ ಮದುವೆಯಾಗಿ ಯಾವಾಗಲೂ ಸುದ್ದಿಯಲ್ಲಿರುವ ಮಹಾಲಕ್ಷ್ಮಿ (Mahalakshmi) ಮತ್ತು ರವೀಂದರ್ ಜೋಡಿ ಮತ್ತೆ ಈಗ ಸುದ್ದಿಯಾಗಿದ್ದಾರೆ. ಇದೀಗ ಇವರ ದಾಂಪತ್ಯ ಜೀವನದ ಬಗ್ಗೆ ಇಲ್ಲ ಸಲ್ಲದ ವಿಚಾರಗಳು ಹೊರ ಬೀಳುತ್ತಿದೆ.
ಕಿರುತೆರೆ ನಟಿ ಮಹಾಲಕ್ಷ್ಮಿ ಅವರ ಪತಿ ನಿರ್ಮಾಪಕ ರವೀಂದರ್ ಚಂದ್ರಶೇಖರನ್ (Ravindar Chandrasekaran) ಅವರ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲವಾ ಎಂಬ ಅನುಮಾನ ಮೂಡಿದೆ.ಇದಕ್ಕೆ ಕಾರಣ ರವೀಂದರ್ ತಮ್ಮ ಅಧಿಕೃತ ಫೇಸ್ ಬುಕ್ ನಲ್ಲಿ ಹಾಕಿದ ಫೋಟೋ.
ಒಬ್ಬರೇ ಇರುವ ಫೋಟೋವನ್ನು ಶೇರ್ ಮಾಡಿದ ನಿರ್ಮಾಪಕ ರವೀಂದರ್
ನಿರ್ಮಾಪಕ ರವೀಂದರ್ ಮೊದಲು ನಟಿ ಮಹಾಲಕ್ಷ್ಮಿ ಜೊತೆಗಿರುವ ಫೋಟೋವನ್ನು ಶೇರ್ ಮಾಡುತ್ತಿದ್ದರು. ಆದರೆ ಈಗ ತಾವು ಒಬ್ಬರೇ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಈ ಇವರಿಬ್ಬರ ನಡುವೆ ಏನಾದರು ಸಮಸ್ಯೆ ಇದೆಯಾ ಎಂದು ಕೇಳುತ್ತಿದ್ದಾರೆ.
View this post on Instagram
ಮಹಾಲಕ್ಷ್ಮಿ ರವೀಂದರ್ ದಾಂಪತ್ಯದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಅಭಿಮಾನಿಗಳು
ರವೀಂದರ್ ಚಂದ್ರಶೇಖರ್ ಅವರು ತಮ್ಮ ಫೇಸ್ ಬುಕ್ ನಲ್ಲಿ ನಿಗೂಢ ಶೀರ್ಷಿಕೆಯನ್ನು ಬರೆದು ಒಬ್ಬರೇ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಬದುಕಲು ಕಾರಣ ಪ್ರೀತಿಸುವುದೇ ಕಾರಣ. ಕಷ್ಟದ ಸಮಯದಲ್ಲಿ ನಗು, ಯಾಕೆಂದರೆ ಅವರು ನಿನ್ನ ದುಃಖದಿಂದ ಮಾತ್ರ ಸಂತೋಷ ಪಡುತ್ತಾರೆ ಎಂದು ಪೋಸ್ಟ್ ಮಾಡಿದ್ದಾರೆ.
ಪತಿ ರವೀಂದರ್ ಪೋಸ್ಟ್ ಗೆ ಮೊದಲು ಮಹಾಲಕ್ಷ್ಮಿ ಕಾಮೆಂಟ್ ಮಾಡುತ್ತಿದ್ದರು. ಆದರೆ ಈ ಫೋಟೋಗೆ ಇಲ್ಲಿಯವರೆಗೆ ಯಾವುದೇ ಕಾಮೆಂಟ್ ಗಳನ್ನೂ ಮಾಡಿಲ್ಲ. ಇದನ್ನು ನೋಡಿದ ಅಭಿಮಾನಿಗಳು ಇವರಿಬ್ಬರ ನಡುವೆ ಏನಾಗಿದೆ ಎಂದು ಕೇಳುತ್ತಿದ್ದಾರೆ.