Ravindar: ಬಯಲಾಯಿತು ರವೀಂದರ್ ಚಂದ್ರಶೇಖರನ್ ಇನ್ನೊಂದು ಅಸಲಿ ಮುಖ, ದಾಖಲಾಯಿತು ಕೇಸ್.
ಹಣ ಪಡೆದು ವಂಚನೆ ಮಾಡಿದ ನಿರ್ಮಾಪಕ ರವೀಂದರ್ ಚಂದ್ರಶೇಖರನ್.
Ravindar Chandrasekaran Controversy: ನಿರ್ಮಾಪಕ ರವೀಂದರ್ ಚಂದ್ರಶೇಖರನ್ (Ravindar Chandrasekaran) ಹಾಗು ನಟಿ ಮಹಾಲಕ್ಷ್ಮಿ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮದುವೆ ಮೂಲಕವೇ ಸುದ್ದಿಯಲ್ಲಿದ್ದಿದ್ದರು. ಮದುವೆಯ ಬಳಿಕ ಈ ಜೋಡಿ ಹೆಚ್ಚು ಟ್ರೊಲ್ ಆಗಿದ್ದರು. ಆದರೆ ಈ ಜೋಡಿ ಟ್ರೊಲ್ ಬಗ್ಗೆ ತಲೆಕೆಡಿಸಿಕೊಳ್ಳದೆ ನಮ್ಮದು ನಿಜವಾದ ಪ್ರೀತಿ ಎನ್ನುತ್ತಾ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು.
ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಹಾಗು ನಟಿ ಮಹಾಲಕ್ಷ್ಮಿ ಜೋಡಿ ಸದಾ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ವಿರುದ್ಧ ಇದೀಗ ಕೇಸ್ ದಾಖಲಾಗಿದೆ. ಹಣ ವಂಚನೆ ಆರೋಪದಲ್ಲಿ ಅಮೇರಿಕ ಮೂಲದ ಭಾರತೀಯ ವ್ಯಕ್ತಿಯೊಬ್ಬರು ಕೇಸ್ ಹಾಕಿದ್ದಾರೆ.
ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮೇಲೆ ಕೇಸ್ ದಾಖಲು
ಇದೀಗ ನಿರ್ಮಾಪಕ ಚಂದ್ರಶೇಖರನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿತ್ಯ ಒಂದಲ್ಲ ಒಂದು ಸುದ್ದಿಯಲ್ಲಿರುವ ಚಂದ್ರಶೇಖರನ್ ಅವರು ಈ ಬಾರಿ ಪೊಲೀಸ್ ಕೇಸ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ನಿರ್ಮಾಪಕ ರವೀಂದರ್ ಹಣ ಪಡೆದು ವಂಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ರವೀಂದರ್ ತನ್ನಿಂದ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಪೊಲೀಸರ ಮೊರೆ ಹೋಗಿದ್ದಾರೆ. ಚೆನ್ನೈನಲ್ಲಿ ರವೀಂದರ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಲಕ್ಷ ಲಕ್ಷ ವಂಚನೆ ಮಾಡಿದ ನಿರ್ಮಾಪಕ ರವೀಂದರ್ ಚಂದ್ರಶೇಖರನ್
ಅಮೆರಿಕಾದಲ್ಲಿ ನೆಲೆಸಿರುವ ವಿಜಯ್ ಎಂಬ ವ್ಯಕ್ತಿ ರವೀಂದರ್ ಜೊತೆಗಿನ ಸಿನಿಮಾ ನಿರ್ಮಾಣದ ಭಾಗವಾಗಿದ್ದರು. ಚಿತ್ರ ಉತ್ತಮ ಲಾಭ ತಂದುಕೊಡಲಿದೆ ಎಂದು ವಿಜಯ್ ಗೆ ರವೀಂದರ್ ಗೆ ತಿಳಿಸಿದರು. ಅಲ್ಲದೆ ವಿಜಯ್ ಅವರು ಈ ಸಿನಿಮಾಗೆ 15 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರಂತೆ. ಆದರೆ ಚಿತ್ರ ಬಿಡುಗಡೆಯಾಗಿ ತಿಂಗಳುಗಳು ಕಳೆದರು ರವೀಂದರ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇನ್ನು ವಂಚನೆಗೆ ಒಳಗಾದ ವಿಜಯ್ ಅವರು ಹಣ ನೀಡುವಂತೆ ಎಷ್ಟು ಬೇಡಿದ್ದರು ರವೀಂದರ್ 15 ಲಕ್ಷ ನೀಡಿರಲಿಲ್ಲ. ಇದರಿಂದ ಬೇಸರಗೊಂಡ ವಿಜಯ್ ಕೇಸ್ ಹಾಕಿದ್ದಾರೆ. ಚನೈ ಸೆಂಟ್ರಲ್ ಕ್ರೈಮ್ ಬ್ರಾಂಚ್ ಪೊಲೀಸರಿಗೆ ಆನ್ ಲೈನ್ ಮೂಲಕವೇ ಕೇಸ್ ದಾಖಲಿಸಿದ್ದಾರೆ.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಚನೈ ಪೊಲೀಸರು ವಿಚಾರಣೆಗೆ ಮುಂದುವರೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರವೀಂದರ್ ಅವರು ಚೆನೈ ಪೋಲೀಸರ ಆಯುಕ್ತರ ಕಚೇರಿಯ ಕೇಂದ್ರ ಅಪರಾಧ ವಿಭಾಗದಲ್ಲಿ ತನಿಖೆಗೆ ಹಾಜರಾಗಿದ್ದು, ವಿಚಾರಣೆ ಮುಂದುವರೆಸಿದ್ದಾರೆ.