ಮೇಘನಾ ರಾಜ್ ಸರ್ಜಾ ಅವರು ಕರ್ನಾಟಕದಲ್ಲಿ ಬಹಳ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಬಹುದು. ಹಲವು ವರ್ಷಗಳ ಕಾಲ ಚಿರು ಸರ್ಜಾ ಅವರನ್ನ ಪ್ರೀತಿ ಮಾಡಿ ಮದುವೆಯನ್ನ ಮಾಡಿಕೊಂಡ ಇವರ ಸುಂದರ ಸಂಸಾರದ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ಎರಡು ವರ್ಷದ ಹಿಂದೆ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ಇಹಲೋಕವನ್ನ ತ್ಯಜಿಸಿದರು. ಚಿರು ಸರ್ಜಾ ಅವರು ಇಹಲೋಕವನ್ನ ತ್ಯಜಿಸುವ ಸಮಯದಲ್ಲಿ ಮೇಘನಾ ರಾಜ್ ಅವರು ತುಂಬು ಗರ್ಭಿಣಿಯಾಗಿದ್ದು ಕಳೆದ ವರ್ಷ ಮೂಡದ ಗಂಡು ಮಗುವಿಗೆ ಜನ್ಮ ನೀಡಿದರು. ಎರಡು ತಿಂಗಳ ಹಿಂದೆ ಮಗನಿಗೆ ಅದ್ದೂರಿಯಾಗಿ ನಾಮಕರಣ ಮಾಡಿದ ಮೇಘನಾ ರಾಜ್ ಅವರು ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡುವುದರ ಮೂಲಕ ಮನೆಯಲ್ಲಿ ಮತ್ತೆ ಹಬ್ಬದ ವಾತಾವರಣವನ್ನ ಸೃಷ್ಟಿ ಮಾಡಿದರು ಎಂದು ಹೇಳಬಹುದು.
ಇನ್ನು ಇಂದು ರಾಯನ್ ರಾಜ್ ಸರ್ಜಾ ಹುಟ್ಟಿದ ಒಂದು ವರ್ಷವಾಗಿದ್ದು ಇಂದು ಮೇಘನಾ ರಾಜ್ ಅವರು ತಮ್ಮ ಮಗನ ಹುಟ್ಟಿದ ಹಬ್ಬವನ್ನ ಬಹಳ ಸಡಗರದಿಂದ ಆಚರಣೆ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ಸಡಗರವನ್ನ ನೋಡಿದ ಅಭಿಮಾನಿಗಳ ತಲೆಯಲ್ಲಿ ಮೂಡಿದ ಒಂದು ಪ್ರಶ್ನೆ ಏನು ಅಂದರೆ ಅದೂ ರಾಯನ್ ರಾಜ್ ಸರ್ಜಾ ಹುಟ್ಟಿದ ಹಬ್ಬಕ್ಕೆ ಯಾಕೆ ದ್ರುವ ಸರ್ಜಾ ಅವರು ಬರಲಿಲ್ಲ ಅನ್ನುವುದು ಆಗಿದೆ. ದ್ರುವ ಯಾಕೆ ಮಗನ ಹುಟ್ಟಿದ ಹಬ್ಬಕ್ಕೆ ಬರಲಿಲ್ಲ ಎಂದು ಮೇಘನಾ ರಾಜ್ ಅವರು ಈಗ ಹೇಳಿದ್ದು ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನ ಕೊಟ್ಟಿದ್ದಾರೆ.
ಹಾಗಾದರೆ ರಾಯನ್ ರಾಜ್ ಸರ್ಜಾ ಹುಟ್ಟಿದ ಹಬ್ಬಕ್ಕೆ ದ್ರುವ ಸರ್ಜಾ ಯಾಕೆ ಬರಲಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನೀವು ಕೂಡ ಮಗುವಿಗೆ ಹುಟ್ಟಿದ ಹಬ್ಬದ ಶುಭಾಶಯ ಹೇಳಿ. ಹೌದು ಚಿರು ಮಗನ ಹುಟ್ಟಿದ್ದ ಹಬ್ಬದ ಸಡಗರಕ್ಕೆ ದ್ರುವ ಸರ್ಜಾ ಅವರಿಗೆ ಭಾಗವಹಿಸಲು ಆಗಲಿಲ್ಲ, ಆದರೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ದ್ರುವ ಸರ್ಜಾ ಅವರು ವಿಶ್ ಮಾಡಿದ್ದಾರೆ. ಇನ್ನು ಇದರ ಕುರಿತು ಮಾಹಿತಿ ನೀಡಿದ ಮೇಘನಾ ರಾಜ್ ಅವರು ಚಿರು ಪುತ್ರನಿಗೆ ಧ್ರುವ ಸರ್ಜಾ ಸೋಶಿಯಲ್ ಮಿಡಿಯಾ ಮೂಲಕ ವಿಶ್ ಮಾಡಿದ್ದಾರೆ, ಆದರೆ ಬರ್ತ್ಡೇ ಸಡಗರದಲ್ಲಿ ಭಾಗಿಯಾಗಲು ಅವರಿಗೆ ಸಾಧ್ಯವಾಗಿಲ್ಲ ಮತ್ತು ಅದಕ್ಕೆ ಕಾರಣ ಏನು ಎಂಬುದನ್ನು ಮೇಘನಾ ರಾಜ್ ತಿಳಿಸಿದ್ದಾರೆ.
ಧ್ರುವ ಈಗ ವಿಶಾಖಪಟ್ಟಣದಲ್ಲಿ ಇದ್ದಾರೆ ಮತ್ತು ಈ ಬಾರಿ ಅವರು ಬರಲು ಸಾಧ್ಯವಾಗುವುದಿಲ್ಲ ಎನಿಸುತ್ತದೆ ಎಂದು ಮೇಘನಾ ಹೇಳಿದ್ದಾರೆ. ಮಾರ್ಟಿನ್ ಚಿತ್ರದ ಕೆಲಸದಲ್ಲಿ ದ್ರುವ ಸರ್ಜಾ ಬಹಳ ಬ್ಯುಸಿ ಆಗಿದ್ದಾರೆ. ಸಿನಿಮಾ ಕೆಲಸಗಳ ಸಲುವಾಗಿ ತಮ್ಮ ಹುಟ್ಟುಹಬ್ಬವನ್ನು ಕೂಡ ಅಭಿಮಾನಿಗಳ ಜೊತೆ ಸೆಲೆಬ್ರೇಟ್ ಮಾಡಲು ಧ್ರುವಗೆ ಸಾಧ್ಯವಾಗಿರಲಿಲ್ಲ ಎಂದು ಮೇಘನಾ ರಾಜ್ ಹೇಳಿದ್ದಾರೆ. ದ್ರುವ ವಿಶಾಖಪಟ್ಟಣದಲ್ಲಿ ಇರುವ ಕಾರಣ ಚಿರು ಮಗನ ಹುಟ್ಟಿದ ಹಬ್ಬಕ್ಕೆ ಬರಲು ಸಾಧ್ಯವಾಗಿಲ್ಲ ಮತ್ತು ಅವರು ಅಲ್ಲೇ ಇದ್ದುಕೊಂಡು ಮಗನಿಗೆ ಆಶೀರ್ವಾದ ಮಾಡಿದ್ದಾರೆ ಎಂದು ಮೇಘನಾ ರಾಜ್ ಅವರು.