Shaktikanta Das: 1000 ನೋಟ್ ಮತ್ತೆ ಚಲಾವಣೆಗೆ ಬರುತ್ತಾ, ಮಾಹಿತಿ ನೀಡಿದ ಶಕ್ತಿಕಾಂತ್ ದಾಸ್.
1000 ರೂಪಾಯಿ ನೋಟುಗಳು ಮತ್ತೆ ಚಲಾವಣೆಗೆ ಬರುವುದರ ಬಗ್ಗೆ RBI ಗವರ್ನೆರ್ ಸೂಚನೆಯನ್ನ ನೀಡಿದ್ದಾರೆ.
RBI About 1000 Rupees Notes: ಇದೀಗ ದೇಶದಲ್ಲೆಡೆ 2,000 ಮುಖಬೆಲೆಯ ನೋಟ್ ಬ್ಯಾನ್ (2000 Note Ban) ಆಗುವ ವಿಚಾರಗಳು ಸಾಕಷ್ಟು ವೈರಲ್ ಆಗುತ್ತಿದೆ. ಈ ಹಿಂದೆ ಮೋದಿ ಸರ್ಕಾರ 2016 ರಲ್ಲಿ ನೋಟ್ ಬ್ಯಾನ್ ಮಾಡಿದ್ದು ಈ ವೇಳೆ ಹೊಸ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿದ್ದರು.
ಇದೀಗ ಮತ್ತೊಮೆ ನೋಟ್ ಬ್ಯಾನ್ ಆಗುವ ಬಗ್ಗೆ ಆರ್ ಬಿಐ (RBI) ಘೋಷಣೆ ಹೊರಡಿಸಿದೆ.ಇನ್ನು 2,000 ರೂ. ನೋಟಿನ ಬದಲಾಗಿ 1,000 ಮುಖಬೆಲೆಯ ನೋಟುಗಳು ಚಲಾವಣೆಗೆ ಬರುವ ಬಗ್ಗೆ ಮಾಹಿತಿ ಕೇಳಿಬಂದಿದೆ.
1000 ರೂಪಾಯಿ ನೋಟು ಮತ್ತೆ ಚಲಾವಣೆಗೆ ಬರುವುದಿಲ್ಲ ಎಂದು ಹೇಳಿದ ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್
ಭಾರತೀಯ ರಿಸರ್ವ್ ಬ್ಯಾಂಕ್ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿತ್ತು. ಇದರ ಬೆನ್ನಲ್ಲೇ 1000 ರೂಪಾಯಿ ನೋಟುಗಳು ಮತ್ತೆ ಬರುತ್ತವೆ ಎಂಬ ಸುದ್ದಿ ಹರಿದಾಡಿತ್ತು.
ಈ ಬಗ್ಗೆ ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ (Shaktikanta Das) ಪ್ರತಿಕ್ರಿಯಿಸಿದ್ದಾರೆ. ನೋಟು ಪರಿಚಯಿಸುವ ಯಾವುದೇ ಉದ್ದೇಶ ಇಲ್ಲ. ಈ ಬಗೆಗಿನ ವರದಿಗಳು ಊಹಾತ್ಮಕ ಎಂದು ಹೇಳಿದ್ದಾರೆ.
2,000 ರೂ. ನೋಟುಗಳನ್ನು ಬ್ಯಾನ್ ಮಾಡಿದ RBI
2,000 ಮುಖಬೆಲೆಯ ನೋಟುಗಳ ಬಿಡುಗಡೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ತಕ್ಷಣವೇ ನಿಲ್ಲಿಸುವಂತೆ ಬ್ಯಾಂಕುಗಳಿಗೆ ಸೂಚನೆ ಹೊರಡಿಸಿದೆ.
ಮಾರ್ಚ್ 2017 ಕ್ಕಿಂತ ಮೊದಲು ಹೆಚ್ಚಿನ 2,000 ನೋಟುಗಳು ಚಲಾವಣೆಗೆ ಬಂದಿದೆ. ಈ ನೋಟುಗಳ ಜೀವಿತಾವಧಿ 4 -5 ವರ್ಷಗಳ ಕೊನೆಯಲ್ಲಿದೆ. ಈ ಮುಖಬೆಲೆಯ ನೋಟುಗಳನ್ನು ಸಾಮಾನ್ಯವಾಗಿ ವಹಿವಾಟುಗಳಿಗೆ ಬಳಸಲಾಗುವುದಿಲ್ಲ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 2,000 ನೋಟುಗಳನ್ನು ಮುದ್ರಣವನ್ನು ನಿಲ್ಲಿಸಲು ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ.