RBI New Update: 2000 ರೂ ನೋಟುಗಳು ಮತ್ತೆ ಕಾನೂನುಬದ್ಧವಾಗಿ ಮುಂದುವರೆಯಲಿದೆ, RBI ನಿಂದ ಇನ್ನೊಂದು ಘೋಷಣೆ.
ಇದೀಗ RBI 2000 ರೂ. ನೋಟುಗಳ ಬಗ್ಗೆ ಮಹತ್ವದ ಹೇಳಿಕೆ ನೀಡಿದೆ.
RBI New Update On 2000 Rupees: ಸದ್ಯ ದೇಶದಲ್ಲಿ May 19 ರಂದು RBI 2000 ರೂ. ನೋಟುಗಳನ್ನು ಅಮಾನ್ಯಗೊಳಿಸಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಇನ್ನು ನೋಟು ವಿನಿಮಯ ಅಥವಾ ಠೇವಣಿ RBI ನಿಗದಿಪಡಿಸಿದ್ದ ದಿನಾಂಕ ಕೂಡ ಮುಗಿದಿದೆ. ದೇಶದಲ್ಲಿ 2000 ರೂ. ತನ್ನ ಮೌಲ್ಯವನ್ನು ಕಳೆದುಕೊಂಡಿದೆ ಎನ್ನಬಹುದು.
ಇನ್ನು ಚಲಾವಣೆಯಿಂದ ಹಿಂತೆಗೆದುಕೊಂಡ 2000 ರೂಪಾಯಿ ನೋಟುಗಳ ಪೈಕಿ ಶೇ. 97 ರಷ್ಟು ನೋಟುಗಳು ಬ್ಯಾಂಕ್ ಗಳಲ್ಲಿ ಠೇವಣಿಯಾಗಿ ಹಿಂದಿರುಗಿವೆ ಎಂದು ಶಕ್ತಿಕಾಂತ್ ದಾಸ್ ಹೇಳಿಕೆ ನೀಡಿದ್ದಾರೆ. ಇದೀಗ Reserve Bank Of India ಮತ್ತೆ 2000 ರೂ. ನೋಟುಗಳ ಬಗ್ಗೆ ಮಹತ್ವದ ಹೇಳಿಕೆ ನೀಡಿದೆ.
ನಿಮ್ಮ ಬಳಿ ಇರುವ 2000 ನೋಟುಗಳನ್ನು ಇಲ್ಲಿ ಬದಲಿಸಿಕೊಳ್ಳಬಹುದು
October 7 ವರೆಗೆ ಜನರು ತಮ್ಮ ಬಳಿ ಇರುವ 2000 ರೂಪಾಯಿ ನೋಟುಗಳನ್ನು ಬ್ಯಾಂಕ್ ನಲ್ಲಿ ಬದಲಾಯಿಸಿಕೊಳ್ಳುತ್ತಿದ್ದರು. ಆದರೆ October 8 ರಿಂದ ಬ್ಯಾಂಕ್ ನಲ್ಲಿ 2000 ರೂಪಾಯಿ ನೋಟುಗಳನ್ನು ಸ್ವೀಕರಿಸುತ್ತಿಲ್ಲ. ವಾಣಿಜ್ಯ ಬ್ಯಾಂಕ್ಗಳು 2,000 ರೂಪಾಯಿ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ.
ವಾಣಿಜ್ಯ ಬ್ಯಾಂಕ್ಗಳು 2,000 ರೂಪಾಯಿ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ ಕಾರಣ RBI ಕಚೇರಿಯಲ್ಲಿ 2,000 ರೂಪಾಯಿ ನೋಟುಗಳ ವಿನಿಮಯಕ್ಕೆ ಅವಕಾಶವನ್ನು ನೀಡಲಾಗಿದೆ. Reserve Bank Of India (RBI) 19 ಕಚೇರಿಗಳಲ್ಲಿ 2000 ರೂ. ನೋಟುಗಳನ್ನು ಬದಲಿಸಿಕೊಳ್ಳಬಹುದುದಾಗಿದೆ. ವ್ಯಕ್ತಿಗಳು ಅಥವಾ ಸಂಸ್ಥೆಗಳು 19 RBI ಕಚೇರಿಗಳಲ್ಲಿ ಒಂದು ಬಾರಿಗೆ 20,000 ರೂ.ಗಳ ಮಿತಿಯ ವರೆಗೆ 2,000 ರೂ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.
2000 ನೋಟುಗಳು ಕಾನೂನುಬದ್ಧವಾಗಿ ಮುಂದುವರೆಯಲಿದೆ
“2000 ನೋಟುಗಳು ಕಾನೂನುಬದ್ಧ ಟೆಂಡರ್ ಆಗಿ ಮುಂದುವರೆಯಲಿದೆ ಹಾಗೂ ಜನರು ದೇಶದ ಯಾವುದೇ ಅಂಚೆ ಕಚೇರಿಯ ಮೂಲಕ ತನ್ನ ಬಳಿ ಇರುವ ಹಣವನ್ನು ಠೇವಣಿ ಮಾಡಬಹುದು” ಎಂದು RBI ಅಧಿಕೃತ ಹೇಳಿಕೆ ನೀಡಿದೆ. October 9 ರಿಂದ RBI ವಿತರ ಖಚೇರಿಗಳು 2000 ನೋಟುಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ. ಜನ ಸಾಮಾನ್ಯರು ದೇಶದ ಯಾವುದೇ ಅಂಚೆ ಕಚೇರಿಯಿಂದ ದೇಶದ ಯಾವುದೇ RBI ಇಶ್ಯು ಆಫೀಸ್ ಗಳಿಗೆ ತನ್ನ ಬ್ಯಾಂಕ್ ಖಾತೆಗೆ ಕ್ರೆಡಿಟ್ ಮಾಡಲು ಕಳುಹಿಸಬಹುದು ಎಂದು RBI ಹೇಳಿಕೆ ನೀಡಿದೆ.