ATM Scam: ATM ಕಾರ್ಡ್ ಬಳಸುವವರಿಗೆ RBI ನಿಂದ ಇನ್ನೊಂದು ರೂಲ್ಸ್, ಈ ತಪ್ಪು ಮಾಡಿದರೆ ಖಾತೆ ಖಾಲಿ.
ATM ಕಾರ್ಡ್ ಬಳಸುವವರು ಈ ತಪ್ಪು ಮಾಡಿದರೆ ನಿಮ್ಮ ಖಾತೆ ಸಂಪೂರ್ಣ ಖಾಲಿಯಾಗಲಿದೆ.
ATM Card Fraud: ATM ಕಾರ್ಡ್ ಸಾಮಾನ್ಯವಾಗಿ ಎಲ್ಲರು ಬಳಸುತ್ತಾರೆ. ಬ್ಯಾಂಕ್ ಖಾತೆ ಹೊಂದಿರುವ ಜನರು ATM ಕಾರ್ಡ್ ಬಳಸುವುದು ಸರ್ವೇ ಸಾಮಾನ್ಯ ಕೂಡ ಆಗಿದೆ. ಇನ್ನು ಇದರ ನಡುವೆ ದೇಶದಲ್ಲಿ ವಂಚನೆ ಹೆಚ್ಚಾಗುತ್ತಿದ್ದು ATM ಕಾರ್ಡ್ ಬಳಸುವವರು ಮಾಡಿದ ಕೆಲವು ತಪ್ಪುಗಳ ಕಾರಣ ತಮ್ಮ ಖಾತೆಯಲ್ಲಿನ ಹಣ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.
ಸದ್ಯ ATM ಕಾರ್ಡ್ ನಿಯಮಗಳನ್ನ ಬದಲಾಯಿಸಿರುವ RBI ಕೆಲವು ಹೊಸ ನಿಯಮಗಳನ್ನ ಕೂಡ ಜಾರಿಗೆ ತಂದಿದೆ ಎಂದು ಹೇಳಬಹುದು. ಸದ್ಯ ATM ಕಾರ್ಡ್ ಬಳಸುವವರಿಗೆ ಇನ್ನೊಂದು ಎಚ್ಚರಿಕೆಯನ್ನ RBI ನೀಡಿದ್ದು ಜನರು ಎಚ್ಚರ ವಹಿಸುವುದು ಅಗತ್ಯ ಎಂದು ಹೇಳಬಹುದು.
ದೇಶದಲ್ಲಿ ಹೆಚ್ಚಾಗುತ್ತಿದೆ ವಂಚನೆ
ಹೌದು ದೇಶದಲ್ಲಿ ಸೈಬರ್ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ ಎಂದು ಹೇಳಬಹುದು. ಹೌದು ಜನರ ನಿರ್ಲಕ್ಷ್ಯವನ್ನ ಬಳಸಿಕೊಳ್ಳುತ್ತಿರುವ ಸೈಬರ್ ಕಳ್ಳರ ಜನರ ಬ್ಯಾಂಕ್ ಖಾತೆಗೆ ಖನ್ನಾ ಹಾಕುತ್ತಿದ್ದಾರೆ ಎಂದು ಹೇಳಬಹುದು. ಸದ್ಯ ಜನರಿಗೆ ಇನ್ನೊಂದು ಎಚ್ಚರಿಕೆಯನ್ನ ನೀಡಿರುವ ರಿಸರ್ವ್ ಬ್ಯಾಂಕ್ ಈಗ ATM ಕಾರ್ಡ್ ಬಳಸುವವರಿಗೆ ಇನ್ನೊಂದು ಎಚ್ಚರಿಕೆಯನ್ನ ನೀಡಿದೆ.
ATM ಕಾರ್ಡ್ ಬಳಸುವವರು ಈ ತಪ್ಪುಗಳನ್ನ ಮಾಡಬಾರದು
ಇತ್ತೀಚಿನ ದಿನಗಳಲ್ಲಿ ATM ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆ ಜನರು ಹೆಚ್ಚಾಗಿ ಮಾಡುತ್ತಿದ್ದಾರೆ. ಇನ್ನು ATM ಕಾರ್ಡ್ ಬಳಸುವ ಮುನ್ನ ಜನರು ಎಚ್ಚರ ವಹಿಸುವುದು ಅತೀ ಅಗತ್ಯ ಎಂದು ಹೇಳಬಹುದು. ATM ಕಾರ್ಡ್ ಬಳಸುವ ಸಮಯದಲ್ಲಿ ನಿಮ್ಮ ಮಾಹಿತಿ ಸೋರಿಕೆ ಆಗುವ ಸದ್ಯ ಇದ್ದು ಎಚ್ಚರದಿಂದ ವಹಿವಾಟು ಮಾಡುವಂತೆ RBI ತಿಳಿಸಿದೆ.
Online ವಹಿವಾಟು ಮಾಡುವಾಗ ಎಚ್ಚರ
ಇತ್ತೀಚಿನ ದಿನಗಳಲ್ಲಿ ಜನರು ಆನ್ಲೈನ್ ಮೂಲಕ ಕೆಲವು ವಸ್ತುಗಳನ್ನ ಖರೀದಿ ಮಾಡುತ್ತಾರೆ. ಹೌದು ಆನ್ಲೈನ್ ಮೂಲಕ ಖರೀದಿ ಮಾಡುವ ಸಮಯದಲ್ಲಿ ಜನರು ಹೆಚ್ಚಾಗಿ ATM ಕಾರ್ಡ್ ಬಳಕೆ ಮಾಡುತ್ತಾರೆ ಮತ್ತು ಖರೀದಿ ಮಾಡಿದ ನಂತರ ಕಾರ್ಡ್ ಮಾಹಿತಿಯನ್ನ ಅಳಿಸದೇ ಹಾಗೆ ಅಲ್ಲೇ ಇಡುತ್ತಾರೆ.
ನೀವು ಆನ್ಲೈನ್ ನಲ್ಲಿ ಖರೀದಿ ಮಾಡುವ ಸಮಯದಲ್ಲಿ ATM ಕಾರ್ಡ್ ಮಾಹಿತಿ ನೀಡುವ ಕಾರಣ ನಿಮ್ಮ ಕಾರ್ಡ್ ಅಸುರಕ್ಷಿತವಾಗಿರುತ್ತದೆ ಮತ್ತು ಖರೀದಿ ಮಾಡಿದ ನಂತರ ನೀವು ಕಾರ್ಡ್ ಮಾಹಿತಿ ಅಳಿಸದೇ ಇದ್ದರೆ ನಿಮ್ಮ ಮಾಹಿತಿ ಸಂಪೂರ್ಣ ಲೀಕ್ ಆಗುವ ಸಾಧ್ಯತೆ ಇದೆ.
WiFi ಮೂಲಕ ವಹಿವಾಟು ಮಾಡುವುದು
ಅದೇ ರೀತಿಯಲ್ಲಿ ಬೇರೆಯವರ ವೈಫೈ ಬಳಸಿಕೊಂಡು ಆನ್ಲೈನ್ ವಹಿವಾಟು ಮಾಡಿದರೆ ನಿಮ್ಮ ATM ಕಾರ್ಡ್ ಮಾಹಿತಿ ಸಂಪೂರ್ಣ ಲೀಕ್ ಆಗುವ ಸಾಧ್ಯತೆ ಇರುತ್ತದೆ. ಸೈಬರ್ ಕಳ್ಳರು ವೈಫೈ ಹ್ಯಾಕ್ ಮಾಡಿ ನಿಮ್ಮ ATM ಕಾರ್ಡ್ ಮಾಹಿತಿ ಕದಿಯುವ ಸಾಧ್ಯತೆ ಇರುವ ಕಾರಣ ವೈಫೈ ಬಳಸಿಕೊಂಡು ಯಾವುದೇ ಆನ್ಲೈನ್ ವಹಿವಾಟು ಮಾಡುವುದು ಅಷ್ಟೊಂದು ಸೂಕ್ತವಲ್ಲ. ಅಪರಿಚಿತರಿಗೆ ನಿಮ್ಮ ಕಾರ್ಡ್ ಮೂಲಕ ಆನ್ಲೈನ್ ಯಾವುದೇ ವಸ್ತು ಖರೀದಿ ಮಾಡಲು ಸಹಾಯ ಮಾಡಬೇಡಿ ಮತ್ತು ಇದು ಕೂಡ ಸೈಬರ್ ಖದೀಮರ ಕೈಚಳಕ ಆಗಿರುತ್ತದೆ.