Bank Loan: ಪ್ರತಿ ತಿಂಗಳು ಬ್ಯಾಂಕ್ ಸಾಲ ಕಟ್ಟುವವರಿಗೆ RBI ನಿಂದ ಬಂಪರ್ ಗುಡ್ ನ್ಯೂಸ್, ಹೊಸ ನಿಯಮ ಜಾರಿಗೆ.

ಇದೀಗ ಆರ್ ಬಿಐ ದೇಶದ ಎಲ್ಲ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ.

RBI About Bank Loan Interest: ಆರ್ ಬಿಐ (Reserve Bank Of India) ಇತ್ತೀಚಿಗೆ ಬ್ಯಾಂಕುಗಳಿಗೆ ಹೊಸ ಹೊಸ ನಿಯಮವನ್ನು ಜಾರಿಗೊಳಿಸಿದೆ. ಬ್ಯಾಂಕುಗಳು ಇತ್ತೀಚಿಗೆ ನಿಯಮ ಉಲ್ಲಂಘನೆ ಮಾಡುತ್ತಿರುವ ಹಿನ್ನಲೆ ಆರ್ ಬಿಐ ಬ್ಯಾಂಕುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಆರ್ ಬಿಐ ನಿಯಮಾನುಸಾರ ಬ್ಯಾಂಕುಗಳು ವಹಿವಾಟು ನಡೆಸಬೇಕಿದೆ.

ಇನ್ನು ಗ್ರಾಹಕರ ಭದ್ರತೆಗಾಗಿ ಆರ್ ಬಿಐ ಹೆಚ್ಚಿನ ನಿಗಾ ವಹಿಸುತ್ತಿದೆ. ಇದೀಗ ಆರ್ ಬಿಐ ದೇಶದ ಎಲ್ಲ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ.

RBI About Bank Loan Interest
Image Credit: Paytm

ದೇಶದ ಎಲ್ಲಾ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದ RBI
ಸಾಮಾನ್ಯವಾಗಿ ಇನ್ನು ಬ್ಯಾಂಕ್ ನಲ್ಲಿ ಸಾಲ ಪಡೆದ ನಂತರ ನಿಗದಿತ ಸಮಯದೊಳಗೆ ಸಾಲವನ್ನು ಪಾವತಿಸಬೇಕು. ಸಾಲ ಪಾವತಿಯಲ್ಲಿ ಯಾವುದೇ ರೀತಿಯ ತಪ್ಪಾದಲ್ಲಿ ಬ್ಯಾಂಕ್ ಸಾಲಗಾರರಿಗೆ ದಂಡ ವಿಧಿಸುತ್ತದೆ. ಇದೀಗ ಪ್ರತಿ ತಿಂಗಳು ಬ್ಯಾಂಕ್ ಸಾಲ ಕಟ್ಟುವವರಿಗೆ ಆರ್ ಬಿಐ ಸಿಹಿ ಸುದ್ದಿ ನೀಡಿದೆ.

ಇನ್ನು ಬ್ಯಾಂಕ್ ನಲ್ಲಿ ಸಾಲ ಪಡೆದವರು ಚಿಂತಿಸುವ ಅಗತ್ಯ ಇರುವುದಿಲ್ಲ. ದೇಶದ ಪ್ರತಿಷ್ಠಿತ ಬ್ಯಾಂಕುಗಳಿಗೆ ಹಾಗು ಸಾಲ ನೀಡುವ ಹಣಕಾಸು ಸಂಸ್ಥೆಗಳಿಗೆ ಆರ್ ಬಿಐ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಇನ್ನುಮುಂದೆ ಸಾಲಗಾರರ ಹೊರೆ ಕಡಿಮೆಯಾಗಲಿದೆ.

RBI has given important information to all the bank customers of the country
Image Credit: Forbesindia

ಬ್ಯಾಂಕ್ ನಲ್ಲಿ ಸಾಲ ಪಡೆದವರಿಗೆ ಸಿಹಿ ಸುದ್ದಿ
ಬ್ಯಾಕ್ ಗಳು ಸಾಲ ನೀಡುವ ಮೊದಲು ಸಾಲದ ನಿಯಮಗಳನ್ನು ತಿಳಿಸುತ್ತವೆ. ಬ್ಯಾಂಕ್ ನ ಸಾಲದ ನಿಯಮಗಳನ್ನು ತಪ್ಪದೆ ಪಾಲಿಸಬೇಕು. ಇನ್ನು ಸಾಲಗಾರರು ತಮ್ಮ ಸಾಲವನ್ನು ನಿಗದಿತ ಸಮಯದೊಳಗೆ ಮರುಪಾವತಿ ಮಾಡದಿದ್ದರೆ ಬ್ಯಾಂಕ್ ದಂಡ ವಿಧಿಸುತ್ತದೆ. ಇದೀಗ ಬ್ಯಾಂಕ್ ಸಾಲಗಾರರಿಗೆ ವಿಧಿಸುವ ದಂಡದಲ್ಲಿ ಆರ್ ಬಿಐ ಹೊಸ ನಿಯಮವನ್ನು ಹೊರಡಿಸಿದೆ. ಆರ್ ಬಿಐ ವಿಧಿಸಿರುವ ಹೊಸ ನಿಯಮದ ಕೋಟ್ಯಾಂತರ ಸಾಲಗಾರರಿಗೆ ಖುಷಿ ನೀಡಿದೆ.

Join Nadunudi News WhatsApp Group

ಸಾಲಗಳ ಮೇಲೆ ದಂಡವನ್ನು ವಿಧಿಸುವಂತಿಲ್ಲ
ಸಾಲವನ್ನು ನಿಗದಿತ ಸಮಯದೊಳಗೆ ಪಾವತಿ ಮಾಡದಿದ್ದರೆ ಬ್ಯಾಂಕ್ ಗಳು ಅಥವಾ ಕೆಲವು ಹಣಕಾಸು ಸಂಸ್ಥೆಗಳು ಸಾಮಾನ್ಯ ಬಡ್ಡಿದರದ ಜೊತೆಗೆ ಹೆಚ್ಚಿನ ದಂಡವನ್ನು ವಿಧಿಸುತ್ತದೆ. ಈ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಲಗಳ ಖಾತೆಯ ದಂಡದ ಬಗ್ಗೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ಸಾಲದ ಖಾತೆಗೆ ಸಂಬಂಧಿಸಿದ ದಂಡವನ್ನು ಶುಲ್ಕ ಎಂದು ಪರಿಗಣಿಸಬೇಕೇ ಹೊರತು ಒಟ್ಟು ಬಡ್ಡಿದರ ಎಂದು ಬಡ್ಡಿಯ ಜತೆಗೆ ಸೇರಿಸಬಾರದು ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.

RBI has given important information to all the bank customers of the country
Image Credit: Informalnewz

ಬ್ಯಾಂಕುಗಳು ಸಾಲಗಾರರಿಗೆ ದಂಡವನ್ನು ವಿಧಿಸುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಬಾರದು. ಅದು ದಂಡದ ಪರಿಕಲ್ಪನೆಯ ದುರ್ಬಳಕೆ ಆಗುತ್ತದೆ ಎಂದು ಆರ್ ಬಿಐ ತಿಳಿಸಿದೆ. ಸಾಲಗಳ ಕಂತುಗಳಿಗೆ ಸಂಬಂಧಿಸಿದಂತೆ ಶುಲ್ಕ ವಿಧಿಸಬೇಕೇ ಹೊರತು ಒಟ್ಟು ಸಾಲಕ್ಕೆ ಚಕ್ರಬಡ್ಡಿ ಹಾಕಬಾರದು ಎಂದು RBI ಎಲ್ಲಾ ಬ್ಯಾಂಕುಗಳಿಗೆ ಆದೇಶವನ್ನ ಹೊರಡಿಸಿದೆ. ಸಾಲದ ಖಾತೆಗಳ ಮೇಲೆ ದಂಡದ ಆಯ್ಕೆಯನ್ನು ಬಳಸಬಾರದು ಎಂದು ಆರ್ ಬಿಐ ಮಾರ್ಗಸೂಚಿಯನ್ನು ಹೊರಡಿಸಿದೆ.

Join Nadunudi News WhatsApp Group