RBI Rule: ಬ್ಯಾಂಕ್ ಸಾಲ ಇದ್ದವರಿಗೆ ಸಿಹಿಸುದ್ದಿ, ನಿಯಮ ಬದಲಿಸಿದ ರಿಸರ್ವ್ ಬ್ಯಾಂಕ್
ಇದೀಗ ಆರ್ ಬಿಐ ದೇಶದ ಎಲ್ಲ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ.
RBI About Loan: Reserve Bank Of India ಇತ್ತೀಚಿಗೆ ಬ್ಯಾಂಕುಗಳಿಗೆ ಹೊಸ ಹೊಸ ನಿಯಮವನ್ನು ಜಾರಿಗೊಳಿಸಿದೆ. ಬ್ಯಾಂಕುಗಳು ಇತ್ತೀಚಿಗೆ ನಿಯಮ ಉಲ್ಲಂಘನೆ ಮಾಡುತ್ತಿರುವ ಹಿನ್ನಲೆ ಆರ್ ಬಿಐ ಬ್ಯಾಂಕುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ.
ಆರ್ ಬಿಐ ನಿಯಮಾನುಸಾರ ಬ್ಯಾಂಕುಗಳು ವಹಿವಾಟು ನಡೆಸಬೇಕಿದೆ. ಇನ್ನು ಗ್ರಾಹಕರ ಭದ್ರತೆಗಾಗಿ ಆರ್ ಬಿಐ ಹೆಚ್ಚಿನ ನಿಗಾ ವಹಿಸುತ್ತಿದೆ. ಇದೀಗ ಆರ್ ಬಿಐ ದೇಶದ ಎಲ್ಲ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಪ್ರತಿ ತಿಂಗಳು ಬ್ಯಾಂಕ್ ಸಾಲ ಕಟ್ಟುವವರಿಗೆ ಆರ್ ಬಿಐ ಸಿಹಿ ಸುದ್ದಿ ನೀಡಿದೆ.
ಬ್ಯಾಂಕುಗಳಿಗೆ RBI ಮಹತ್ವದ ಮಾಹಿತಿ
ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಸಾಲ ಪಡೆಯುವಾಗ ಆಸ್ತಿ ಪತ್ರಗಳನ್ನು ಅಡಮಾನವಾಗಿ ಇರಿಸಬೇಕಾಗುತ್ತದೆ. ಗ್ರಾಹಕರು ಇರಿಸುವ ಆಸ್ತಿ ಪುರಾವೆಯ ಆಧಾರದ ಮೇಲೆ ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಸಾಲ ಪಡೆದ ನಂತರ ಸಾಲಗಾರರು ನಿಗದಿತ ಸಮಯದೊಳಗೆ ಸಾಲವನ್ನು ಪಾವತಿಸಬೇಕು. ಸಾಲ ಪಾವತಿಯಲ್ಲಿ ಯಾವುದೇ ರೀತಿಯ ತಪ್ಪಾದಲ್ಲಿ ಬ್ಯಾಂಕ್ ಸಾಲಗಾರರಿಗೆ ದಂಡ ವಿಧಿಸುತ್ತದೆ. ಇನ್ನು ಸಾಲಗಾರರು ನಿಗದಿತ ಸಮಯೋದೊಳಗೆ ಸಾಲವನ್ನು ಮರುಪಾವತಿಸಿದರೆ ಬ್ಯಾಂಕ್ ಅವರಿಗೆ ಯಾವುದೇ ರೀತಿಯ ದಂಡವನ್ನು ವಿಧಿಸುವಂತಿಲ್ಲ.
ಸಾಲ ಪಾವತಿಸಿದ ಒಂದು ತಿಂಗಳೊಳಗೆ ಆಸ್ತಿ ದಾಖಲೆಯನ್ನು ಮರಳಿಸಬೇಕು
ಇದೀಗ RBI ಸಾಲ ನೀಡುವ ಬ್ಯಾಂಕುಗಳಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. RBI ಸಾಲದ ಮರು ಪಾವತಿಯ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಬ್ಯಾಂಕುಗಳು ಇನ್ನುಮುಂದೆ RBI ನಿಯಮವನ್ನು ಪಾಲಿಸಬೇಕಿದೆ. ಸಾಲ ಮರುಪಾವತಿಸಿದ 30 ದಿನಗಳ ಅವಧಿಯಲ್ಲಿ ಅಡಮಾನವಾಗಿ ಇರಿಸಿಕೊಂಡಿದ್ದ Property Documents ಗಳನ್ನೂ ಗ್ರಾಹಕರಿಗೆ ಮರಳಿ ನೀಡಬೇಕು.
ಬ್ಯಾಂಕುಗಳು ಈ ತಪ್ಪು ಮಾಡುವಂತಿಲ್ಲ
ಒಂದು ತಿಂಗಳೊಳಗೆ ಅಡಮಾನವಾಗಿ ಇರಿಸಿಕೊಂಡಿದ್ದ Property Documents ಗಳನ್ನೂ ಮರಳಿ ನೀಡದಿದ್ದರೆ ಬ್ಯಾಂಕುಗಳು ಗ್ರಾಹಕರಿಗೆ ಪರಿಹಾರದ ಮೊತ್ತ ನೀಡಬೇಕು ಎಂದು RBI ಬ್ಯಾಂಕುಗಳಿಗೆ ಆದೇಶ ಹೊರಡಿಸಿದೆ. ಸಾಲದ ಪೂರ್ಣ ಮರುಪಾವತಿ ಆದ ಬಳಿಕಾ ಸ್ಥಿರಾಸ್ತಿ, ಚರಾಸ್ತಿಗಳ ಮೇಲಿರುವ ಎಲ್ಲಾ ದಾಖಲೆ, ಮಾಲೀಕತ್ವಗಳನ್ನು ಒಂದು ತಿಂಗಳಲ್ಲಿ ವಾಪಾಸ್ ನೀಡುವುದು ಕಡ್ಡಾಯವಾಗಿದೆ. ಇಲ್ಲವಾದರೆ ಬ್ಯಾಂಕುಗಳು ದಂಡದ ರೂಪದಲ್ಲಿ ಗ್ರಾಹಕರಿಗೆ ಮೊತ್ತವನ್ನು ನೀಡಬೇಕಾಗುತ್ತದೆ.