New Note: ಈ ದಿನದಂದು ಜನರ ಕೈಸೇರಲಿದೆ ಇನ್ನೊಂದು ಹೊಸ ನೋಟ್, ಸ್ಪಷ್ಟನೆ ನೀಡಿದ RBI

ಹೊಸ ನೋಟು ಜಾರಿಗೆ ಬರುವುದರ ಬಗ್ಗೆ RBI ಸ್ಪಷ್ಟನೆ ನೀಡಿದೆ.

Reserve Bank Of India About New Currency: ದೇಶದಲ್ಲೆಡೆ 2,000 ಮುಖಬೆಲೆಯ ನೋಟ್ ಬ್ಯಾನ್  (2000 Note Ban) ಆಗಿರುವ ಬಗ್ಗೆ ಎಲ್ಲರಿಗು ಮಾಹಿತಿ ತಿಳಿದೇ ಇದೆ. ಈ ಹಿಂದೆ ಮೋದಿ ಸರ್ಕಾರ 2016 ರಲ್ಲಿ ನೋಟ್ ಬ್ಯಾನ್ ಮಾಡಿದ್ದು ಈ ವೇಳೆ ಹೊಸ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿದ್ದರು.

ಇದೀಗ ಮತ್ತೊಮೆ ನೋಟ್ ಬ್ಯಾನ್ ಆಗುವ ಬಗ್ಗೆ ಆರ್ ಬಿಐ ಘೋಷಣೆ ಹೊರಡಿಸಿತ್ತು. ಇನ್ನು 2,000 ರೂ. ನೋಟಿನ ಬದಲಾಗಿ ಹೊಸ ಮುಖಬೆಲೆಯ ನೋಟುಗಳು ಚಲಾವಣೆಗೆ ಬರುವ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ.

Reserve Bank Of India About New Currency
Image Credit: Economictimes

ದೇಶದಲ್ಲಿ 2,000 ರೂ. ನೋಟ್ ಬ್ಯಾನ್
2,000 ಮುಖಬೆಲೆಯ ನೋಟುಗಳ ಬಿಡುಗಡೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ಸ್ಥಗಿತಗೊಳಿಸುವ ಬಗ್ಗೆ ಈಗಾಗಲೇ ಆದೇಶ ಹೊರಡಿಸಿದೆ. ಮಾರ್ಚ್ 2017 ಕ್ಕಿಂತ ಮೊದಲು ಹೆಚ್ಚಿನ 2,000 ನೋಟುಗಳು ಚಲಾವಣೆಗೆ ಬಂದಿದೆ. ಈ ನೋಟುಗಳ ಜೀವಿತಾವಧಿ 4 -5 ವರ್ಷಗಳ ಕೊನೆಯಲ್ಲಿದೆ. ಈ ಮುಖಬೆಲೆಯ ನೋಟುಗಳನ್ನು ಸಾಮಾನ್ಯವಾಗಿ ವಹಿವಾಟುಗಳಿಗೆ ಬಳಸಲಾಗುವುದಿಲ್ಲ.

ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 2,000 ನೋಟುಗಳನ್ನು ಮುದ್ರಣವನ್ನು ನಿಲ್ಲಿಸಲು ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಇನ್ನು ದೇಶದಲ್ಲಿ ಹೆಚ್ಚುತ್ತಿರುವ ಕಪ್ಪು ಹಣದ ವಹಿವಾಟಿಗೆ ಬ್ರೇಕ್ ಹಾಕಲು ಮೋದಿ ಸರ್ಕಾರ ಈ ದಿಟ್ಟ ನಿರ್ಧಾರವನ್ನು ಕೈಗೊಂಡಿದೆ.

RBI Clarification on New Note Release
Image Credit: Economictimes

ಇನ್ನು ಜನಸಾಮಾನ್ಯರಿಗೆ ತಮ್ಮ ಬಳಿ ಇರುವ 2,000 ರೂ. ನೋಟುಗಳ ವಿನಿಮಯ ಹಾಗೂ ಠೇವಣಿ ಮಾಡಲು ಸೆಪ್ಟೆಂಬರ್ 30 ,2023 ರ ತನಕ ಸಮಯಾವಕಾಶವನ್ನು ನೀಡಲಾಗಿದೆ. 2000 ನೋಟು ಹೊಂದಿದವರು ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಹಣವನ್ನು ವಿನಿಮಯ ಅಥವಾ ಠೇವಣಿ ಮಾಡಿಕೊಳ್ಳಬಹುದು.

Join Nadunudi News WhatsApp Group

ಈ ದಿನದಂದು ಜನರ ಕೈಸೇರಲಿದೆ ಇನ್ನೊಂದು ಹೊಸ ನೋಟ್
2,000 ನೋಟುಗಳು ಬ್ಯಾನ್ ಆದ ಬಳಿಕ ಹೊಸ ನೋಟುಗಳು ಮುದ್ರಣವಾಗಲಿದೆ. 2016 ರಲ್ಲಿ 500 ಹಾಗೂ 1,000 ಮುಖಬೆಲೆಯ ನೋಟುಗಳು ಬ್ಯಾನ್ ಆಗಿದ್ದವು. ಈ ವೇಳೆ ಕೇವಲ 500 ರ ಹೊಸ ನೋಟುಗಳು ಚಲಾವಣೆಗೆ ಬಂದಿದ್ದವು ಹೊಸ 1,000 ನೋಟುಗಳ ಮುದ್ರಣದ ಬಗ್ಗೆ ಆರ್ ಬಿಐ ನಿರ್ಧರಿಸಿಲ್ಲ. ಆದರೆ ಈ ಬಾರಿ ಹೊಸ 1,000 ಮುಖಬೆಲೆಯ ನೋಟುಗಳ ಚಲಾವಣೆಯ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ ಮತ್ತು ಈ ಬಗ್ಗೆ ಆರ್ ಬಿಐ ಸ್ಪಷ್ಟನೆ ನೀಡಿದೆ.

RBI has clarified about the coming into force of new notes.
Image Credit: Outlookindia

ಹೊಸ ನೋಟು ಬಿಡುಗಡೆಯ ಬಗ್ಗೆ RBI ಸ್ಪಷ್ಟನೆ
ಈಗಾಗಲೇ ಹೊಸ ನೋಟುಗಳ ಬಿಡುಗಡೆಯ ಬಗ್ಗೆ ಸುದ್ದಿಗಳು ವೈರಲ್ ಆಗುತ್ತಿವೆ. ಇನ್ನು 2,000 ನೋಟುಗಳ ಬ್ಯಾನ್ ಆದ ಬಳಿಕ 1,000 ನೋಟುಗಳ ಮುದ್ರಣ ಆರಂಭವಾಗಲಿದೆ ಹಾಗೂ 1,000 ಮುಖಬೆಲೆಯ ನೋಟುಗಳು ಸದ್ಯದಲ್ಲೇ ಚಲಾವಣೆಗೆ ಬರಲಿದೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಹೊಸ 1000 ಮುಖಬೆಲೆಯ ನೋಟು ಬಿಡುಗಡೆಯ ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ಈ ಮೂಲಕ ವೈರಲ್ ಸುದ್ದಿಗಳಿಗೆ ಬ್ರೇಕ್ ನೀಡಿದೆ.

Join Nadunudi News WhatsApp Group