Note Exchange: ಬ್ಯಾನ್ ಆಗಲಿಲ್ಲ 2000 ರೂ ನೋಟುಗಳು, ಎಕ್ಸ್ಚೇಂಜ್ ಬಗ್ಗೆ ಸ್ಪಷ್ಟನೆ ನೀಡಿದ RBI.
2000 ನೋಟುಗಳನ್ನ RBI ಬ್ಯಾನ್ ಮಾಡಿದೆ ಅನ್ನುವ ಸುದ್ದಿಗೆ ಈಗ rbi ಸ್ಪಷ್ಟನೆ ನೀಡಿದೆ.
Latest Updates Of 2000 Rupees Note: ದೇಶದಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಬ್ಯಾನ್ ಆಗಿವೆ ಎಂಬ ಸುದ್ದಿ ಹರಿದಾಡುತ್ತಿದೆ. 2 ಸಾವಿರ ರೂಪಾಯಿ ನೋಟನ್ನು ಹೊಂದಿರುವವರು ಬೇಗನೆ ಬ್ಯಾಂಕಿಗೆ ಹೋಗಿ ನೋಟನ್ನು ಎಕ್ಸ್ಚೇಂಜ್ ಮಾಡಿಕೊಳ್ಳಬೇಕು ಎಂಬ ಸುದ್ದಿ ಸಹ ಹೊರ ಬಿದ್ದಿದೆ.
ದೇಶದಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ತೀರ್ಮಾನಿಸಿದೆ.
2 ಸಾವಿರ ರೂಪಾಯಿ ನೋಟು ಬ್ಯಾನ್
ಮೇ 23 ರಿಂದ ಸೆಪ್ಟೆಂಬರ್ 30 ರೊಳಗೆ 2 ಸಾವಿರ ರೂಪಾಯಿ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಎಕ್ಸ್ಚೇಂಜ್ ಮಾಡಿಕೊಳ್ಳಬಹುದಾಗಿದೆ. ಇದರ ಬೆನ್ನಲ್ಲೇ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಆರ್ ಬಿ ಐ ಬ್ಯಾನ್ ಮಾಡಿದೆ. ಅಂದರೆ ನಿಷೇಧ ಮಾಡಿದೆ ಎಂದು ಹೇಳಲಾಗುತ್ತಿದೆ.
ಆದರೆ ಆರ್ ಬಿ ಐ ಎರಡು ಸಾವಿರ ರೂಪಾಯಿ ನೋಟುಗಳನ್ನು ನಿಷೇಧಿಸಿಲ್ಲ. ನೋಟುಗಳನ್ನು ನಿಷೇಧಿಸುವುದಕ್ಕೂ, ಹಿಂಪಡೆಯುವುದಕ್ಕೂ ವ್ಯತ್ಯಾಸವಿದೆ. ಹಾಗಾದರೆ ನೋಟ್ ಬ್ಯಾನ್ ಗೂ ಮತ್ತು ಹಿಂಪಡೆಯುವುದಕ್ಕೂ ಏನು ವ್ಯತ್ಯಾಸ, ಎರಡು ಮಧ್ಯೆ ಯಾವ ಬದಲಾವಣೆ ಇದೆ ಎಂಬುದರ ಬಗ್ಗೆ ತಿಳಿಯೋಣ.
ನೋಟು ನಿಷೇಧ ಎಂದರೇನು
ಯಾವುದೇ ನೋಟುಗಳನ್ನು ನಿಷೇಧಿಸುವುದು ಎಂದರೆ ಅವುಗಳು ಅಮಾನ್ಯ ಎಂದು ಘೋಷಿಸುವುದಾಗಿದೆ. ಅಂದರೆ ನಿಷೇಧಿತ ನೋಟುಗಳ ಬಳಕೆಯೇ ಕಾನೂನುಬಾಹಿರ ಆಗುತ್ತದೆ. ನೋಟು ನಿಷೇಧಿಸಿದರೆ, ನಿಷೇಧಿತ ನೋಟುಗಳ ಬದಲಾಗಿ ಬೇರೆ ನೋಟುಗಳನ್ನು ಮುದ್ರಿಸಲಾಗುತ್ತದೆ. 2016 ರಲ್ಲಿ ಕೇಂದ್ರ ಸರ್ಕಾರ ಐನೂರು, ಸಾವಿರ ರೂಪಾಯಿ ನೋಟುಗಳನ್ನು ನಿಷೇಧಿಸಿ, 500 ಹಾಗು ಎರಡು ಸಾವಿರ ರೂಪಾಯಿ ಮೌಲ್ಯಗಳ ನೋಟುಗಳನ್ನು ಚಾಲ್ತಿಗೆ ತಂದಿದೆ ಸರ್ಕಾರ.
ನೋಟುಗಳನ್ನು ಹಿಂಪಡೆಯುವುದು ಎಂದರೇನು
ಯಾವುದೇ ನೋಟುಗಳನ್ನು ಹಿಂಪಡೆಯುವುದು ಎಂದರೆ ಅವುಗಳ ಚಲಾವಣೆಯನ್ನು ಮಾತ್ರ ತಡೆಯುವುದು ಹೊರತು ಅವುಗಳ ಮಾನ್ಯತೆಯನ್ನು ರದ್ದು ಗೊಳಿಸುವುದಲ್ಲ. ಇದನ್ನೇ ಹಿಂಪಡೆಯುವುದು ಎನ್ನುತ್ತಾರೆ.
ನೋಟುಗಳನ್ನು ಹಿಂಪಡೆದ ಬಳಿಕ ಆ ನೋಟುಗಳ ಚಲಾವಣೆ ಇರುವುದಿಲ್ಲ. ಬ್ಯಾಂಕುಗಳು ಕೂಡ ಆ ನೋಟುಗಳನ್ನು ನೀಡುವುದಿಲ್ಲ. ಆದರೆ, ಹಿಂಪಡೆದ ನೋಟುಗಳು ಅಮಾನ್ಯ ಆಗಿರುವುದಿಲ್ಲ. ಹಾಗಾಗಿ, ನೋಟುಗಳನ್ನು ಹಿಂಪಡೆಯುವುದಕ್ಕೂ, ನಿಷೇಧಗೊಳಿಸುವುದಕ್ಕೂ ವ್ಯತ್ಯಾಸ ಇದೆ.