Tomato Price: ಟೊಮ್ಯಾಟೋ ದರದ ಕುರಿತು ಮಹತ್ವದ ಹೇಳಿಕೆ ಪ್ರಕಟಿಸಿದ ರಿಸರ್ವ್ ಬ್ಯಾಂಕ್
ಆರ್ ಬಿಐ ಟೊಮೆಟೊ ದರ ಏರಿಕೆ ಕುರಿತು ಹೇಳಿಕೆಯನ್ನು ನೀಡಿದೆ.
RBI About Tomato Price: ಪ್ರಸ್ತುತ ದೇಶದಲ್ಲಿ ಟೊಮೆಟೊ(Tomato) ಬೆಲೆ ಗಣನೀಯ ಏರಿಕೆ ಕಾಣುತ್ತಿದೆ. ಪ್ರತಿ ನಿತ್ಯ ಅಡುಗೆಗೆ ಬಳಸಲಾಗುವ ಟೊಮೆಟೊ (Tomato) ಖರೀದಿ ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ. ದೇಶದ ಹಲವು ಪ್ರದೇಶಗಳಲ್ಲಿ ಟೊಮೊಟೊ ದರ 200 ಕ್ಕಿಂತ ಅಧಿಕವಾಗಿದೆ. ಪ್ರಸ್ತುತ ಟೊಮೊಟೊ ಗರಿಷ್ಟ ದರ 250 ರೂ. ತಲುಪಿದೆ. ಇದೀಗ ಆರ್ ಬಿಐ ಟೊಮೆಟೊ ದರ ಏರಿಕೆ ಕುರಿತು ಹೇಳಿಕೆಯನ್ನು ನೀಡಿದೆ.
ಟೊಮೆಟೊ ದರದ ಕುರಿತು ಆರ್ ಬಿಐ ಹೇಳಿಕೆ
ಜುಲೈ 2023 ರ ಪ್ರಕಾರ, ದೇಶದ ವಿವಿಧ ಭಾಗಗಳಲ್ಲಿ ಟೊಮೆಟೊ ಬೆಲೆಗಳು ಕೆಜಿಗೆ 250 ರೂ. ಗೆ ತಲುಪಿದೆ. ಅಡುಗೆಮನೆಯ ಅಗತ್ಯವೂ ಮನೆಗಳ ಬಜೆಟ್ ಜೇಬಿಗೆ ಕತ್ತರಿ ಹಾಕುವ ಮೂಲಕ ವ್ಯಾಪಕ ಗಮನವನ್ನು ಪಡೆದುಕೊಂಡಿದೆ ಎಂದು ಆರ್ ಬಿಐ ಮಾಹಿತಿ ನೀಡಿದೆ. ಸುಮಾರು 2 .6 ರಷ್ಟು ಪೋರ್ಟ್ ನೈಟ್ ಅವಧಿ (ಅಂದರೆ ಒಟ್ಟಾರೆ 39 ದಿನಗಳು) ಟೊಮೆಟೊ ಬೆಲೆ ಸರಿಸುಮಾರು 40 ರೂ. ಗಿಂತ ಹೆಚ್ಚಿರುತ್ತದೆ ಹಾಗೂ 10 ರಷ್ಟು ಪೋರ್ಟ್ ನೈಟ್ ಅವಧಿಯಲ್ಲಿ ಟೊಮೆಟೊ ಬೆಲೆ ಸರಾಸರಿ 20 ರೂ. ಗಿಂತ ಕಡಿಮೆ ಇರುತ್ತದೆ ಎಂದು ಆರ್ ಬಿಐ ಉಲ್ಲೇಖಿಸಿದೆ.
ಟೊಮೆಟೊ ದರದ ಏರಿಕೆಗೆ ಕಾರಣವೇನು
ಪ್ರಸ್ತುತ ಟೊಮೊಟೊ ದರ ಜನಸಾಮನ್ಯರನ್ನು ಅಚ್ಚರಿ ಪಡಿಸುತ್ತಿದೆ. ಟೊಮೇಟೊ ಬೆಲೆ ಏರಿಕೆಗೆ ತಾತ್ಕಾಲಿಕ ಸಮಸ್ಯೆ ಎದುರಾಗಿದೆ. ಟೊಮೇಟೊ ದರ ತೀವ್ರ ಏರಿಕೆಗೆ ಮಳೆಯೇ ಕಾರಣವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಟೊಮೇಟೊ ದರ ಹೆಚ್ಚುತ್ತಿದೆ. ಇನ್ನು ಮುಂಗಾರು ಆರಂಭದ ಕಾರಣ ಟೊಮೇಟೊ ಬೆಳೆ ಪ್ರಸ್ತುತ ಋತುಮಾನದ ಬದಲಾವಣೆಗಳ ಮೂಲಕ ಸಾಗುತ್ತಿದೆ. ಟೊಮೆಟೊ ಬೆಲೆಯ ಏರಿಕೆಯು ಅಲ್ಪಕಾಲಿಕವಾಗಿರುತ್ತದೆ ಎಂದು ಆರ್ ಬಿಐ ಹೇಳಿದೆ.
ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆಯಿಂದಾಗಿ ಟೊಮೇಟೊ ಬೆಳೆ ಹಾನಿಯಾಗಿದೆ ಮತ್ತು ಬೇಡಿಕೆಗೆ ಹೋಲಿಸಿದರೆ ಅದರ ಪೂರೈಕೆಯು ಕಡಿಮೆಯಾಗಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ, 2022 -23 ರ ಬೆಳೆ ಋತುವಿನಲ್ಲಿ ಟೊಮೇಟೊ ಉತ್ಪಾದನೆಯು 20.62 ಮಿಲಿಯನ್ ಟನ್ ಗಳು ಎಂದು ಅಂದಾಜಿಸಲಾಗಿದೆ. ಪ್ರಮುಖ ಉತ್ಪಾದಕ ಪ್ರದೇಶಗಳಲ್ಲಿ ಕೆಟ್ಟ ಹವಾಮಾನ ಮತ್ತು ಕೀಟಗಳಿಂದ ಉಂಟಾದ ಬೆಳೆ ಹಾನಿಯಿಂದಾಗಿ ಟೊಮೆಟೊ ಬೆಲೆಯಲ್ಲಿ ಇತ್ತೀಚಿಗೆ ಏರಿಕೆಯಾಗಿದೆ ಎಂದು ಕೇಂದ್ರ ಬ್ಯಾಂಕ್ ವರದಿಯಲ್ಲಿ ತಿಳಿಸಿದೆ.