RBI Bank Loan Eligibility Criteria: ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಸಾಲದ ಅವಶ್ಯಕತೆ ಇದ್ದೆ ಇರುತ್ತದೆ ಮತ್ತು ಒಂದಲ್ಲ ರೀತಿಯಲ್ಲಿ ಎಲ್ಲರೂ ಕೂಡ ಸಾಲಗಾರರೇ ಆಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ಗ್ರಾಹಕರಿಗೆ ಅಗತ್ಯಕ್ಕೆ ತಕ್ಕಂತೆ ಸಾಲ ನೀಡುತ್ತಿದೆ. ಆದರೆ RBI ನಿಯಮಗಳ ಪ್ರಕಾರ, ಬ್ಯಾಂಕಿನಲ್ಲಿ ಯಾವುದೇ ಸಾಲ ಪಡೆದುಕೊಳ್ಳಲು ಕೆಲವು ಅರ್ಹತೆ ಹೊಂದಿರುವುದು ಕಡ್ಡಾಯವಾಗಿದೆ. ಈ ಲೇಖನದಲ್ಲಿ ನಾವು ನಿಮಗೆ ಬ್ಯಾಂಕ್ ಸಾಲ ಪಡೆದುಕೊಳ್ಳಲು ಗ್ರಾಹಕರಿಗೆ ಇರಬೇಕಾದ ಅರ್ಹತೆ ಯಾವುದು ಅನ್ನುವುದರ ಬಗ್ಗೆ ಮಾಹಿತಿ ತಿಳಿಸಿಕೊಡುತ್ತೇವೆ.
ಬ್ಯಾಂಕ್ ಸಾಲಕ್ಕೆ RBI ಮಾರ್ಗದರ್ಶನ
ಭಾರತೀಯ ರಿಸರ್ವ್ ಬ್ಯಾಂಕ್ ಸಾಲಗಳಿಗೆ ಸಂಬಂಧಿಸಿದಂತೆ ಕೆಲವು ಅರ್ಹತಾ ಮಾನದಂಡಗಳನ್ನು ದೇಶಾದ್ಯಂತ ಜಾರಿಗೆ ತಂದಿದೆ. RBI ನಿಯಮಗಳ, ಬ್ಯಾಂಕಿನಲ್ಲಿ ಯಾವುದೇ ಸಾಲ, ಅಂದರೆ ವಯಕ್ತಿಕ ಸಾಲ, ಗೃಹಸಾಲ, ವಾಹನ ಸಾಲ, ಚಿನ್ನದ ಸಾಲ ಹೀಗೆ ಯಾವುದೇ ಸಾಲ ಆಗಿರಬಹುದು, ಕೆಲವು ದಾಖಲೆ ಮತ್ತು ಅರ್ಹತೆ ಇಲ್ಲದೆ ಸಾಲ ಪಡೆದುಕೊಳ್ಳಲು ಸಾಧ್ಯವಿಲ್ಲ. RBI ನಿಯಮಗಳು ನಿಮ್ಮಂತಹ ಸಾಮಾನ್ಯ ಜನರಿಗೆ ಸುರಕ್ಷಿತ ಮತ್ತು ನ್ಯಾಯಯುತ ಸಾಲ ಪಡೆಯಲು ಸಹಾಯ ಮಾಡುತ್ತವೆ. ಇಂದು ನಾವು RBI ಯ ಕಡ್ಡಾಯ 5 ಅರ್ಹತೆಗಳನ್ನು ಸರಳವಾಗಿ ತಿಳಿಯೋಣ.
ಬ್ಯಾಂಕ್ ಸಾಲಕ್ಕೆ 5 ಕಡ್ಡಾಯ ಅರ್ಹತೆಗಳು
* ಉತ್ತಮ ಕ್ರೆಡಿಟ್ ಸ್ಕೋರ್
ಯಾವುದೇ ಒಬ್ಬ ವ್ಯಕ್ತಿ ಬ್ಯಾಂಕಿನಲ್ಲಿ ಸಾಲ ಪಡೆದುಕೊಳ್ಳಬೇಕು ಅಂದರೆ ಆತ ಬಹಳ ಉತ್ತಮವೇದ ಕ್ರೆಡಿಟ್ ಸ್ಕೊರ್ ಹೊಂದಿರುವುದು ಕಡ್ಡಾಯವಾಗಿದೆ. ಕ್ರೆಡಿಟ್ ಸ್ಕೊರ್ ಸಾಲ ಪಡೆದುಕೊಳ್ಳುವ ಸಮಯದಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ. 700 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೊರ್ ಹೊಂದಿದ್ದರೆ ಮಾತ್ರ ಬ್ಯಾಂಕುಗಳು ಸಾಲ ಕೊಡುವ ನಿರ್ಧಾರ ಮಾಡುತ್ತೆ. 700 ಕ್ಕಿಂತ ಕಡಿಮೆ ಸಿಬಿಲ್ ಸ್ಕೊರ್ ಇದ್ದವರು ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡರೂ ಕೂಡ ಹೆಚ್ಚಿನ ಬಡ್ಡಿ ಪಾವತಿ ಮಾಡಬೇಕಾಗುತ್ತದೆ. CIBIL ಅಥವಾ Equifax ನಂತಹ ಏಜೆನ್ಸಿಗಳು ನಿಮ್ಮ ಸಿಬಿಲ್ ಸ್ಕೊರ್ ನಿರ್ಧಾರ ಮಾಡುತ್ತೆ, ಈ ಕಾರಣಗಳಿಂದ ಆಗಾಗ ಸಿಬಿಲ್ ಸ್ಕೊರ್ ಚೆಕ್ ಮಾಡುವುದು ಬಹಳಾಗತ್ಯ.
* ವ್ಯಕ್ತಿಯ ಆದಾಯ ಮತ್ತು ಆತನ ಉದ್ಯೋಗ
ಒಬ್ಬ ವ್ಯಕ್ತಿಯ ಮಾಸಿಕ ಆದಾಯ ಮತ್ತು ಆತನ ಉದ್ಯೋಗ ಸಾಲ ಪಡೆದುಕೊಳ್ಳುವಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ. ದೊಡ್ಡ ಮೊತ್ತದ ಸಾಲ ಪಡೆದುಕೊಳ್ಳಬೇಕು ಅಂದರೆ, ನಿಮ್ಮ ಮಾಸಿಕ ಆದಾಯ 25,000 ರೂ.ಗಿಂತ ಹೆಚ್ಚು ಇರಬೇಕು. ನಿಮಗೆ ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ಇದ್ದರೆ ಮಾತ್ರ ಬ್ಯಾಂಕುಗಳು ನಿಮಗೆ ಸಾಲ ಕೊಡುತ್ತೆ. ಸಾಲ ಪಡೆಯಲು ನೀವು ಸ್ಥಿರ ಉದ್ಯೋಗ ಅಥವಾ ವ್ಯವಹಾರ ಹೊಂದಿರುವುದು ಬಹಳ ಅವಶ್ಯಕ.
* ಅರ್ಜಿದಾರನ ವಯಸ್ಸಿನ ಮಿತಿ
ಸಾಲಕ್ಕೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಅರ್ಜಿದಾರನ ವಯಸ್ಸಿನ ಮಿತಿ ಕೂಡ ಪ್ರಮುಖವಾದ ಪಾತ್ರ ವಹಿಸುತ್ತದೆ. ಸಾಲಕ್ಕೆ ಅರ್ಜಿ ಸಲ್ಲಿಸುವವವರು, ಸಾಮಾನ್ಯವಾಗಿ 21ರಿಂದ 60 ವರ್ಷಗಳ ನಡುವಿನವರು ಅರ್ಹರು. 60 ವರ್ಷ ಮೇಲ್ಪಟ್ಟವರು ಕೆಲವು ವಿಶೇಷವಾದ ಯೋಜನೆಯ ಅಡಿಯಲ್ಲಿ ಸಾಲ ಪಡೆದುಕೊಳ್ಳಬಹುದು.
* ಕೆಲವು ಅಗತ್ಯ ದಾಖಲೆ ಪರಿಶೀಲನೆ
ಯಾವುದೇ ಬ್ಯಾಂಕ್ ಸಾಲಕೊಡುವ ಸಮಯದಲ್ಲಿ ಅರ್ಜಿದಾರನ ಕೆಲವು ಅಗತ್ಯ ದಾಖಲೆ ಪರಿಶೀಲನೆ ಮಾಡುತ್ತೆ. ಆಧಾರ್, PAN, ಬ್ಯಾಂಕ್ ಸ್ಟೇಟ್‌ಮೆಂಟ್, ITR ಸೇರಿದಂತೆ ಕೆಲವು ಅಗತ್ಯ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ. ವಂಚನೆ ತಡೆಗಟ್ಟುವ ಉದ್ದೇಶದಿಂದ ದಾಖಲೆ ಪರಿಶೀಲನೆಕಡ್ಡಾಯ.
* ಭಾರತೀಯ ನಾಗರಿಕರಿಗೆ ಮಾತ್ರ ಸಿಗುತ್ತೆ ಸಾಲ
ಭಾರತದಲ್ಲಿ ಬ್ಯಾಂಕ್ ಸಾಲ ಪಡೆದುಕೊಳ್ಳಲು ಆತ ಭಾರತದ ಪ್ರಜೆಯಾಗಿರುವುದು ಕಡ್ಡಾಯ. NRI ಅಥವಾ ವಿದೇಶದಿಂದ ಬಂದ ವ್ಯಕ್ತಿಗೆ ಯಾವುದೇ ಸಾಲದ ಅನುಮೋದನೆ ಸಿಗುವುದಿಲ್ಲ.RBI ಸಾಮಾನ್ಯವಾಗಿ ದೇಶೀಯರಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಇದು ದೇಶದ ಆರ್ಥಿಕ ಸ್ಥಿರತೆಗೆ ಸಹಾಯ ಮಾಡುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

