Licence Cancelled: ರಾತ್ರೋರಾತ್ರಿ ಈ 2 ಬ್ಯಾಂಕನ್ನು ಮುಚ್ಚಲು ನಿರ್ಧಾರ ಮಾಡಿದ RBI, ಆಘಾತದಲ್ಲಿ ಖಾತೆ ಹೊಂದಿರುವ ಜನರು.
ಇನ್ನೆರಡು ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು ರದ್ದು ಮಾಡಿದ RBI
RBI Canceled The License Of These Two Banks: ಪ್ರಸ್ತುತ ದೇಶದಲ್ಲಿ Reserve Bank of India 2023 ರಿಂದ ಬ್ಯಾಂಕುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. RBI 2023 ರಲ್ಲಿ ಸಾಕಷ್ಟು ಸಹಕಾರಿ ಬ್ಯಾಂಕ್ ಗಳ ಲೈಸನ್ಸ್ ಅನ್ನು ರದ್ದುಗೊಳಿಸಿರುವ ಬಗ್ಗೆ ಮಾಹಿತಿ ತಿಳಿದೇ ಇದೆ. ಬಂಡವಾಳ ಮತ್ತು ಗಳಿಕೆಯ ಕೊರತೆಯ ಕಾರಣ RBI 10 ಕ್ಕೂ ಹೆಚ್ಚು ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿದೆ.
ಸದ್ಯ ಹೊಸ ವರ್ಷದಲ್ಲಿ ಕೂಡ RBI ಈ ಕೆಲವನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ನಿಯಮ ಉಲ್ಲಂಘನೆ ಮಾಡುತ್ತಿರುವ ಬ್ಯಾಂಕ್ ಗಳ ವಿರುದ್ಧ RBI ಕಠಿಣ ಕ್ರಮ ಕೈಗೊಳ್ಳುತ್ತಿದೆ. ಸದ್ಯ ದೇಶದ ಇನ್ನೆರಡು ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು RBI ರದ್ದು ಮಾಡಿದೆ.
ರಾತ್ರೋರಾತ್ರಿ ಈ 2 ಬ್ಯಾಂಕನ್ನು ಮುಚ್ಚಲು ನಿರ್ಧಾರ ಮಾಡಿದ RBI
Reserve Bank of India ಜನವರಿ 12, 2024 ರಂದು ಶ್ರೀ ಮಹಾಲಕ್ಷ್ಮಿ ಮರ್ಕೆಂಟೈಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ದಾಭೋಯಿ ಮತ್ತು ಹಿರಿಯೂರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಹಿರಿಯೂರಿನ ಪರವಾನಗಿಯನ್ನು ರದ್ದುಗೊಳಿಸಿದೆ. ಜನವರಿ 12, 2024 ರಿಂದ ಬ್ಯಾಂಕಿನ ವ್ಯವಹಾರಗಳನ್ನು ಮುಚ್ಚುವಂತೆ RBI ಆದೇಶವನ್ನು ಹೊರಡಿಸಿದೆ.
ಗುಜರಾತ್ ನ ಸಹಕಾರ ಸಂಘಗಳ ರಿಜಿಸ್ಟ್ರಾರ್ ಮತ್ತು ಕರ್ನಾಟಕದ ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವರು ಬ್ಯಾಂಕ್ ಅನ್ನು ಮುಕ್ತಾಯಗೊಳಿಸಲು ಆದೇಶವನ್ನು ಹೊರಡಿಸಲು ಮತ್ತು ಬ್ಯಾಂಕ್ ಗೆ ಲಿಕ್ವಿಡೇಟರ್ ಅನ್ನು ನೇಮಿಸುವಂತೆ ವಿನಂತಿಸಲಾಗಿದೆ. ಇನ್ನು RBI ಇದರ ಜೊತೆಗೆ ನಿಯಮ ಉಲ್ಲಂಘನೆ ಮಾಡಿದ ಕಾರಣ ಪಂಜಾಬ್ ಮತ್ತು ಸಿಂಧ್ ಬ್ಯಾಂಕುಗಳಿಗೆ 1 ಕೋಟಿ ದಂಡವನ್ನು ಕೂಡ ವಿಧಿಸಿದೆ. ಕೇಂದ್ರೀಯ ಬ್ಯಾಂಕ್ ಪರವಾಗಿ, ಪ್ರತಿಯೊಬ್ಬ ಖಾತೆದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಯಿಂದ ವಿತ್ತೀಯ ಮಿತಿ 5 ಲಕ್ಷದವರೆಗೆ ತಮ್ಮ ಠೇವಣಿಗಳನ್ನು ಕ್ಲೈಮ್ ಮಾಡುವ ಹಕ್ಕನ್ನು ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಬ್ಯಾಂಕ್ ನ ಪರವಾನಗಿ ರದ್ದುಗೊಳಿಸಲು ಕಾರಣ
•ಎರಡು ಬ್ಯಾಂಕ್ ಗಳು ಸಾಕಷ್ಟು ಬಂಡವಾಳ ಮತ್ತು ಗಳಿಕೆಯಯನ್ನು ಹೊಂದಿಲ್ಲ. ಹಾಗೆಯೆ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 ರ ಸೆಕ್ಷನ್ 56 ರೊಂದಿಗೆ ಓದಲಾದ ಸೆಕ್ಷನ್ 11(1) ಮತ್ತು ಸೆಕ್ಷನ್ 22 (3) (ಡಿ) ನಿಬಂಧನೆಗಳನ್ನು ಬ್ಯಾಂಕ್ ಗಳು ಅನುಸರಿಸಿಲ್ಲ.
•ಸೆಕ್ಷನ್ 22(3)(a), 22 (3)(b), 22 (3)(c), 22 (3)(d) ಮತ್ತು 22 (3)(e) ನ ಅವಶ್ಯಕತೆಗಳನ್ನು ಅನುಸರಿಸಲು ಬ್ಯಾಂಕ್ ವಿಫಲವಾಗಿರುವುದು ಒಂದು ಕಾರಣವಾಗಿದೆ.