Licence Cancel: 8 ಬ್ಯಾಂಕುಗಳ ಲೈಸೆನ್ಸ್ ಅನ್ನು ಶಾಶ್ವತವಾಗಿ ರದ್ದುಮಾಡಿದ RBI, ಹಣ ಇಟ್ಟವರ ಪಾಡು ಹೇಳತೀರದು.
Septembar 20 ರಿಂದ 30 ರೊಳಗೆ ಕೇವಲ 10 ದಿನಗಳಲ್ಲಿ 8 ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿರುವ Reserve Bank.
RBI Cancelled 8 Cooperative Bank Licence: Reserve Bank ದೇಶದಲ್ಲಿ ನಿಯಮ ಉಲ್ಲಂಘನೆ ಮಾಡುತ್ತಿರುವ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ RBI ದೇಶದಲ್ಲಿ Cooperative ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿದೆ.
Septembar ತಿಂಗಳ 10 ದಿನಗಳಲ್ಲಿ RBI ದೇಶದ 8 ಬ್ಯಾಂಕುಗಳ ಪರವಾನಗಿಯನ್ನು ರದ್ದು ಮಾಡಿದೆ. ಸಹಕಾರಿ ಬ್ಯಾಂಕುಗಳ ಪರವಾನಗಿಯನ್ನು ರದ್ದು ಮಾಡುವುದರ ಜೊತೆಗೆ ಕೆಲ ಬ್ಯಾಂಕುಗಳಿಗೆ ಬಾರಿ ಮೊತ್ತದ ದಂಡವನ್ನು ವಿಧಿಸಿದೆ.
Septembar ತಿಂಗಳಲ್ಲಿ ಬರೋಬ್ಬರಿ 8 ಸಹಕಾರಿ ಬ್ಯಾಂಕುಗಳ ಲೈಸೆನ್ಸ್ ರದ್ದು
RBI ಗ್ರಾಹಕರ ಭದ್ರತೆಗಾಗಿ ಹೆಚ್ಚಿನ ನಿಗಾ ವಹಿಸುತ್ತಿದೆ. ಬ್ಯಾಂಕ್ ಗ್ರಾಹಕರು ಯಾವುದೇ ರೀತಿಯಲ್ಲಿ ನಷ್ಟ ಅನುಭವಿಸಬಾರದು ಎನ್ನುವ ಕಾರಣ RBI ವಿವಿಧ ಬ್ಯಾಂಕುಗಳಿಗೆ ಹೊಸ ಹೊಸ ನಿಯಮವನು ಪರಿಚಯಿಸುತ್ತಿದೆ. RBI ನಿಯಮಾನುಸಾರ ಬ್ಯಾಂಕುಗಳು ವಹಿವಾಟನ್ನು ನಡೆಸದಿದ್ದರೆ ಅಂತಹ ಬ್ಯಾಂಕ್ ಗಳ ವಿರುದ್ಧ RBI ಕ್ರಮ ಕೈಗೊಂಡಿದೆ. ಇನ್ನು Septembar 20 ರಿಂದ 30 ರೊಳಗೆ ಕೇವಲ 10 ದಿನಗಳಲ್ಲಿ RBI ದೇಶದ 8 ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿದೆ.
8 ಬ್ಯಾಂಕುಗಳ ಲೈಸೆನ್ಸ್ ಅನ್ನು ಶಾಶ್ವತವಾಗಿ ರದ್ದುಮಾಡಿದ ರಬಿ
*Thiruvananthapuram Anantashayaman Shakari Bank (Kerala)
*Mallikarjuna Town Co-operative Bank Niamita (Maski, Karnataka)
*National Cooperative Bank Limited (Bahraich, UP)
*Lucknow Co-operative Bank Limited
*The Kapole Co-operative Bank Limited (Mumbai)
*Merchants Co-operative Bank Limited (Ahmedabad, Gujarat)
*Nasik District Girna Sahkari Bank Limited (Maharashtra)
*HCBL Cooperative Bank Limited (Lucknow)
ಪರವಾನಗಿಯನ್ನು ರದ್ದುಗೊಳಿಸಲು ಕಾರಣವೇನು..?
ಈ 8 ಸಹಕಾರಿ ಬ್ಯಾಂಕ್ ನಲ್ಲಿ ಬಂಡವಾಳ ಮತ್ತು ಗಳಿಕೆಯ ಕೊರತೆ ಇರುವ ನಿಟ್ಟಿನಲ್ಲಿ ಆರ್ ಬಿಐ ಪರವಾನಗಿಯನ್ನು ರದ್ದು ಮಾಡಿದೆ. ಬ್ಯಾಂಕ್ ನ ಪರವಾನಗಿ ರದ್ದಾದ ಬಳಿಕ ಬ್ಯಾಂಕ್ ನಲ್ಲಿ ಯಾವುದೇ ರೀತಿಯ ಠೇವಣಿಯನ್ನು ಸ್ವೀಕರಿಸುವುದಾಗಲಿ ಅಥವಾ ಗ್ರಾಹಕರು ಬ್ಯಾಂಕ್ ನಲ್ಲಿ ಹಣವನ್ನು ಠೇವಣಿ ಮಾಡಲು ಯಾವುದೇ ರೀತಿಯ ಅನುಮತಿ ಇಲ್ಲ ಎಂದು RBI ಆದೇಶ ಹೊರಡಿಸಿದೆ.
ಗ್ರಾಹಕರು ಇಷ್ಟು ಹಣವನ್ನು ಮಾತ್ರ ಪಡೆಯಲು ಅವಕಾಶ
ಪ್ರತಿ ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಅಡಿಯಲ್ಲಿ ರೂ. 5 ಲಕ್ಷದವರೆಗೆ ಠೇವಣಿಗಳನ್ನು ಪಡೆಯಬಹುದು. ಇದಕ್ಕಿಂತ ಹೆಚ್ಚಿನ ಠೇವಣಿ ಮೊತ್ತವನ್ನು ಕ್ಲೈಮ್ ಮಾಡಲು ಅನುಮತಿಸಲಾಗುವುದಿಲ್ಲ ಎಂದು RBI ಮಾಹಿತಿ ನೀಡಿದೆ. ಸದ್ಯ ಪರವಾನಗಿ ರದ್ದಾಗಿರುವ ಬ್ಯಾಂಕ್ ನಲ್ಲಿ ಹಣ ಇರಿಸಿದವರು ಚಿಂತಿಸುವಂತಾಗಿದೆ. RBI ಬ್ಯಾಂಕ್ ಪರವಾನಗಿಯನ್ನು ರದ್ದುಗೊಳಿಸಿರುವ ಪರಿಣಾಮ ಬ್ಯಾಂಕ್ ಗ್ರಾಹಕರ ಮೇಲೆ ಬೀರಿದೆ. ಗಹಕರು ಬ್ಯಾಂಕ್ ನಲ್ಲಿ ಇರಿಸಿದ ಹಣವನ್ನು ಹಿಂಪಡೆಯಲು ಪರದಾಡಿವಂತಾಗಿದೆ.