RBI: ಈ 4 ಬ್ಯಾಂಕುಗಳ ಲೈಸನ್ಸ್ ರಾತ್ರೋ ರಾತ್ರಿ ರದ್ದು, ಖಾತೆಯಲ್ಲಿ ಹಣ ಇಟ್ಟವರಿಗೆ ಮುಖ್ಯ ಸೂಚನೆ
ಮತ್ತೆ ಎರಡು ಬ್ಯಾಂಕ್ ಗಳ ಲೈಸೆನ್ಸ್ ರದ್ದು ಮಾಡಿದ ಆರ್ ಬಿ ಐ, ಒಂದೇ ವಾರದಲ್ಲಿ 4 ಬ್ಯಾಂಕುಗಳ ಲೈಸೆನ್ಸ್ ರದ್ದು.
RBI Cancelled Two Bank Licence: ಈಗಾಗಲೇ ಆರ್ ಬಿಐ (RBI) ಸಾಕಷ್ಟು ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ RBI ನಿಯಮ ಉಲ್ಲಂಘನೆ ಮಾಡಿದ ವಿವಿಧ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಇದೀಗ ಆರ್ ಬಿಐ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಗೊಳಿಸಿದೆ.
RBI ಪರವಾನಗಿ ರದ್ದು ಮಾಡಿರುವ ಬ್ಯಾಂಕ್ ನ ವಿವರ
RBI ಇದೀಗ ಕರ್ನಾಟಕದ ತುಮುಕೂರಿನಲ್ಲಿರುವ ಶ್ರೀ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್ (Sharada Mahila Co- Operative Bank) ಮತ್ತು ಮಹಾರಾಷ್ಟ್ರದ ಸತಾರದಲ್ಲಿರುವ ಹರಿಹರೇಶ್ವರ ಬ್ಯಾಂಕ್ (Harihareshwara Bank) ವಿರುದ್ಧ ಆರ್ ಬಿಐ ಕಠಿಣ ಕ್ರಮ ಕೈಗೊಂಡಿದೆ. ಶಾರದಾ ಮಹಿಳಾ ಸಹಕಾರಿ ಬ್ಯಾಂಕ್ ಹಾಗೂ ಹರಿಹರೇಶ್ವರ ಬ್ಯಾಂಕ್ ಸಾಕಷ್ಟು ಬಂಡವಾಳ ಮತ್ತು ಗಳಿಕೆಯನ್ನು ಹೊಂದಿಲ್ಲ ಎನ್ನುವ ಕಾರಣಕ್ಕೆ ಆರ್ ಬಿಐ ಈ ನಿರ್ಧಾರವನ್ನು ಕೈಗೊಂಡಿದೆ.
ಶಾರದಾ ಮಹಿಳಾ ಸಹಕಾರಿ ಬ್ಯಾಂಕ್ ಹಾಗೂ ಹರಿಹರೇಶ್ವರ ಬ್ಯಾಂಕ್ ಎಲ್ಲ ರೀತಿಯ ವಹಿವಾಟುಗಳನ್ನು ನಿಲ್ಲಿಸಬೇಕು ಎಂದು ಆರ್ ಬಿಐ ಜುಲೈ 11 2023 ರಿಂದಲೇ ಆದೇಶವನ್ನು ನೀಡಿದೆ. ಎರಡು ಬ್ಯಾಂಕ್ ಗಳು ತಮ್ಮ ಠೇವಣಿದಾರರ ಪ್ರಸ್ತುತ ಆರ್ಥಿಕ ಸ್ಥಿತಿಯ ದೃಷ್ಟಿಯಿಂದ ಅವರ ಸಂಪೂರ್ಣ ಹಣವನ್ನು ಹಿಂದಿರುಗಿಸಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಹೇಳಿದೆ.
ಒಂದೇ ವಾರದಲ್ಲಿ 4 ಬ್ಯಾಂಕುಗಳ ಲೈಸೆನ್ಸ್ ರದ್ದು ಮಾಡಿದ RBI
ಇತ್ತೀಚೆಗಷ್ಟೇ RBI ಬುಲ್ಧಾನಾ ಮೂಲದ ಮಲ್ಕಾಪುರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (Malkapur Urban Co-operative Bank Ltd) ಮತ್ತು ಬೆಂಗಳೂರು ಮೂಲದ ಸುಶ್ರುತಿ ಸೌಹಾರ್ದ ಸಹಕಾರ ಬ್ಯಾಂಕ್ (Shushruti Souharda C0- operative Bank Ltd) ನಿಯಮಿತ ಬ್ಯಾಂಕಿಂಗ್ ಪರವಾನಗಿಗಳನ್ನು ರದ್ದುಗೊಳಿಸಿರುವ ಬಗ್ಗೆ RBI ಮಾಹಿತಿ ನೀಡಿದೆ.
ಈ ಎರಡು ಸಹಕಾರಿ ಬ್ಯಾಂಕ್ ಗಳು ಬಂಡವಾಳ ಮತ್ತು ಗಳಿಕೆಯ ಕೊರತೆ ಇರುವ ನಿಟ್ಟಿನಲ್ಲಿ ಆರ್ ಬಿಐ ಈ ಕ್ರಮ ಕೈಗೊಂಡಿದೆ. ಇದೀಗ ಮತ್ತೆ ಎರಡು ಬ್ಯಾಂಕ್ ಲೈಸೆನ್ಸ್ ಅನ್ನು ಆರ್ ಬಿಐ ರದ್ದು ಮಾಡಿದ್ದು ಒಂದೇ ವಾರದಲ್ಲಿ 4 ಬ್ಯಾಂಕುಗಳ ಲೈಸೆನ್ಸ್ ರದ್ದು ಮಾಡಿದೆ.