RBI: ರಾತ್ರಿಯೇ ಇನ್ನೊಂದು ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದ RBI, ಹಣಕ್ಕಾಗಿ ಕ್ಯೂ ನಿಂತ ಜನ.

ದೇಶದ ಇನ್ನೊಂದು ಪ್ರತಿಷ್ಠಿತ ಬ್ಯಾಂಕಿನ ಲೈಸೆನ್ಸ್ ಅನ್ನು ಈಗ RBI ರದ್ದು ಮಾಡಿದೆ.

Bank License Close: ದೇಶದಲ್ಲಿರುವ ಕೆಲವು ಸಹಕಾರಿ ಬ್ಯಾಂಕ್ ಗಳಲ್ಲಿ ಬಂಡವಾಳ ಮತ್ತು ಗಳಿಕೆಯ ಕೊರತೆ ಇರುವ ನಿಟ್ಟಿನಲ್ಲಿ ಆರ್ ಬಿಐ (RBI) ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಪ್ರತಿಯೊಬ್ಬ ಠೇವಣಿದಾರರು ತನ್ನ ಠೇವಣಿಗಳನ್ನು 5 ಲಕ್ಷ ರೂ. ಮಿತಿಯವರೆಗೆ ಸ್ವೀಕರಿಸಲು ಆರ್ಹನಾಗಿರುತ್ತಾನೆ. ಈ ಬಗ್ಗೆ ಆರ್ ಬಿಐ ಮಾಹಿತಿ ನೀಡಿದೆ.

ಆರ್ ಬಿಐ ನಿಯಮಗಳನ್ನು ನಿರ್ಲಕ್ಷಿಸಿದ ಯಾವುದೇ ಬ್ಯಾಂಕ್ ನ ವಿರುದ್ಧ ಆರ್ ಬಿಐ ಕ್ರಮ ಕೈಗೊಳುಯುತ್ತದೆ. ಇದೀಗ ಆರ್ ಬಿಐ ನಿಯಮ ಉಲ್ಲಂಘನೆಯ ಕಾರಣ ಮತ್ತೊಂದು ಬ್ಯಾಂಕ್ ನ ಪರವಾನಗಿಯನ್ನು ರದ್ದು ಮಾಡಿದೆ. ಈಗಾಗಲೇ ಆರ್ ಬಿಐ ಸಾಕಷ್ಟು ಬ್ಯಾಂಕ್ ಗಳ ಲೈಸೆನ್ಸ್ ಅನ್ನು ರದ್ದುಪಡಿಸಿದ್ದು ಅದರಲ್ಲಿ ಕರ್ನಾಟಕದ ಕೆಲವು ಸಹಕಾರಿ ಬ್ಯಾಂಕ್ ಗಳು ಕೂಡ ಇವೆ.

Bank License Close
Image Credit: Indiatvnews

ಇನ್ನೊಂದು ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದ RBI
ಆರ್ ಬಿಐ ಕಳೆದ ಎರಡು ವಾರದಲ್ಲಿ ಬರೋಬ್ಬರಿ ನಾಲ್ಕು ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಮಾಡಿತ್ತು. ಇದೀಗ ಮತ್ತೊಂದು ಬ್ಯಾಂಕ್ ನ ಪರವಾನಗಿಯನ್ನು ರದ್ದುಗೊಳಿಸಿದೆ.

ಉತ್ತರ ಪ್ರದೇಶದ ಸಹಕಾರಿ ಬ್ಯಾಂಕ್ ಯುನೈಟೆಡ್ ಇಂಡಿಯಾ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ (United India Cooperative Bank Ltd Licence) ನ ಪರವಾನಗಿಯನ್ನು ರದ್ದು ಮಾಡಿದೆ. ಯುನೈಟೆಡ್ ಇಂಡಿಯಾ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ತನ್ನ ವ್ಯವಹಾರವನ್ನು ನಡೆಸುವಂತಿಲ್ಲ ಎಂದು ಆರ್ ಬಿಐ ಮಾರ್ಗಸೂಚಿ ಹೊರಡಿಸಿದೆ.

reserve bank of india latest news
Image Credit: Currentaffairs

ಈ ತಿಂಗಳಿನಲ್ಲಿ ಐದು ಬ್ಯಾಂಕ್ ಗಳ ಪರವಾನಗಿ ರದ್ದುಗೊಳಿಸಿದ RBI
ಆರ್ ಬಿಐ ಈಗಾಗಲೇ ನಾಲ್ಕು ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಗೊಳಿಸಿದೆ. RBI ಬುಲ್ಧಾನಾ ಮೂಲದ ಮಲ್ಕಾಪುರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮತ್ತು ಬೆಂಗಳೂರು ಮೂಲದ ಸುಶ್ರುತಿ ಸೌಹಾರ್ದ ಸಹಕಾರ ಬ್ಯಾಂಕ್, ಕರ್ನಾಟಕದ ತುಮುಕೂರಿನಲ್ಲಿರುವ ಶ್ರೀ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್ ಮತ್ತು ಮಹಾರಾಷ್ಟ್ರದ ಸತಾರದಲ್ಲಿರುವ ಹರಿಹರೇಶ್ವರ ಬ್ಯಾಂಕ್ ವಿರುದ್ಧ ಆರ್ ಬಿಐ ಕಠಿಣ ಕ್ರಮ ಕೈಗೊಂಡಿದೆ. ಇದೀಗ ಯುನೈಟೆಡ್ ಇಂಡಿಯಾ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಈ ಸಾಲಿಗೆ ಸೇರಿಕೊಂಡಿದೆ.

Join Nadunudi News WhatsApp Group

Join Nadunudi News WhatsApp Group