Repo Rate Fall: ಬ್ಯಾಂಕ್ ಸಾಲ ಮಾಡಿದವರಿಗೆ ಗುಡ್ ನ್ಯೂಸ್, ಕಡಿಮೆ ಆಗಲಿದೆ ಬ್ಯಾಂಕಿನ ಬಡ್ಡಿದರ.
ಮುಂದಿನ ವರ್ಷ ರೆಪೋ ದರ ಇಳಿಕೆ ಆಗುವ ಕಾರಣ ದೇಶದಲ್ಲಿ ಜನರ ಸಾಲಗಳ ಬಡ್ಡಿದರ ಕೂಡ ಇಳಿಕೆ ಆಗಲಿದೆ
Repo Rate 2024: ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಶೀಘ್ರದಲ್ಲಿಯೇ ರೆಪೋ ದರಗಳಲ್ಲಿ (Repo Rate) ಕಡಿಮೆ ಮಾಡಲಿದೆ. ರೆಪೋ ದರಗಳ ಕಡಿತಕ್ಕೆ ಸಂಬಂಧಿಸಿದಂತೆ ತಜ್ಞರು ನಿರ್ದಿಷ್ಟ ಮಾಹಿತಿಯನ್ನು ನೀಡಿದ್ದಾರೆ. ರೆಪೋ ದರಗಳ ಕಡಿತದ ನಂತರ ಸಾಮಾನ್ಯ ಜನರ EMI ಸಹ ಕಡಿಮೆ ಆಗುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ವರ್ಷದ ನೀತಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರುವ ನಿಲುವನ್ನು ಉಳಿಸಿಕೊಳ್ಳಬಹುದು ಮತ್ತು 2024 ರ ಆರಂಭದಲ್ಲಿ ದರಗಳನ್ನು ಕಡಿತಗೊಳಿಸಬಹುದು ಎಂದು ತಜ್ಞರು ನಂಬಿದ್ದಾರೆ.
ಈ ತಿಂಗಳ ಆರಂಭದಲ್ಲಿ ಮಂಡಿಸಲಾದ ಹಣಕಾಸು ನೀತಿ ಪರಾಮರ್ಶೆಯಲ್ಲಿ ಕೇಂದ್ರ ಬ್ಯಾಂಕ್ ನೀತಿ ದರದ ರೆಪೊವನ್ನು ಶೇಕಡಾ 6.5 ಕ್ಕೆ ಉಳಿಸಿಕೊಂಡಿದೆ. ಈ ಹಿಂದೆ ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಆರ್ ಬಿ ಐ ಕಳೆದ ವರ್ಷ ಮೇ ತಿಂಗಳಿನಿಂದ ಆರು ಬಾರಿ ರೆಪೋ ದರವನ್ನು ಶೇಕಡಾ 2.50 ರಷ್ಟು ಹೆಚ್ಚಿಸಿತ್ತು.
ಸದ್ಯ ಈಗ ದೇಶದಲ್ಲಿ ಹಣದುಬ್ಬರದ ಸಮಸ್ಯೆ ಸುಧಾರಿಸಿಕೊಂಡಿದೆ ಮತ್ತು ಈ ಕಾರಣಗಳಿಂದ RBI ಮುಂದಿನ ವರ್ಷ ರೆಪೋ ದರವನ್ನ ಇಳಿಕೆ ಮಾಡಲಿದೆ ಎಂದು ಹೇಳಲಾಗುತ್ತಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ರೇಟ್
2024 ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರಗಳನ್ನು ಬದಲಾಯಿಸುವುದಿಲ್ಲ ಮತ್ತು ಮಾರ್ಚ್ 2024 ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ದರಗಳನ್ನು ಶೇಕಡಾ 0.25 ರಷ್ಟು ಕಡಿಮೆ ಮಾಡುತ್ತದೆ. ಮುಂದಿನ ವರ್ಷ ದೇಶದ ಹಣಕಾಸು ಪಾರಿಸ್ತಿತಿ ಮತ್ತು ದೇಶದ ಹಣದುಬ್ಬರವನ್ನ ಗಣನೆಗೆ ತಗೆದುಕೊಂಡು ರೆಪೋ ದರವನ್ನ RBI ನಿಗದಿ ಮಾಡಲಿದೆ.