RBI D-SIB Safest Banks: ಜನರು ಹಣವನ್ನು ಬ್ಯಾಂಕ್ ನಲ್ಲಿ ಇಡುವಾಗ ಸುರಕ್ಷತೆಯನ್ನು ಬಯಸುತ್ತಾರೆ. ಯಾವ ಬ್ಯಾಂಕ್ ನಲ್ಲಿ ನಮ್ಮ ಹಣ ಹೆಚ್ಚು ಸುರಕ್ಷಿತವಾಗಿರುತ್ತದೆ..? ಅನ್ನುವ ಪ್ರಶ್ನೆ ಹಲವರಲ್ಲಿ ಮೂಡುತ್ತೆ. ಇದೀಗ RBI ನಿಮ್ಮ ಗೊಂದಲಗಳಿಗಾಗಿ ಸುರಕ್ಷಿತ ಬ್ಯಾಂಕ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2025 ಡಿಸೆಂಬರ್ 2 ರಂದು ಘೋಷಣೆ ಮಾಡಿದ ಪ್ರಕಾರ, ಮೂರೂ ಬ್ಯಾಂಕುಗಳು ಮಾತ್ರ ಹಣವನ್ನು ಠೇವಣಿ ಮಾಡಲು ತುಂಬಾ ಸುರಕ್ಷಿತವಾದ ಬ್ಯಾಂಕ್ ಆಗಿದೆ. ಹಾಗಾದರೆ RBI ಪ್ರಕಾರ, ಹಣ ಠೇವಣಿ ಮಾಡಲು ಯಾವ 3 ಬ್ಯಾಂಕುಗಳು ಸುರಕ್ಷಿತ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
D-SIBs ಬ್ಯಾಂಕ್ ಎಂದರೆ?
Domestic Systemically Important Banks (ದೇಶೀಯ ವ್ಯವಸ್ಥಿತವಾಗಿ ಪ್ರಮುಖ ಬ್ಯಾಂಕ್ ಗಳು) ಎಂದರೆ, ದೇಶದ ಆರ್ಥಿಕ ವ್ಯವಸ್ಥೆಗೆ ಅತ್ಯಂತ ಮಹತ್ವದ ಬ್ಯಾಂಕುಗಳು ಅಂತ ಅರ್ಥ. ಇವುಗಳ ಗಾತ್ರ, ಸಂಪರ್ಕಗಳು ಮತ್ತು ಪ್ರಮುಖತ್ವದಿಂದಾಗಿ ಯಾವುದೇ ಸಮಸ್ಯೆ ಬಂದರೆ ಇಡೀ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಈ ಬ್ಯಾಂಕುಗಳು ತಮ್ಮ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಬಂಡವಾಳದ ಅವಶ್ಯಕತೆಗಳಂತಹ ಕಠಿಣ ನಿಯಮಗಳಿಗೆ ಒಳಪಟ್ಟಿರುತ್ತವೆ. ಉದಾಹರಣೆಗೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಗೊತ್ತುಪಡಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, HDFC ಬ್ಯಾಂಕ್ ಮತ್ತು ICICI ಬ್ಯಾಂಕ್ ಸೇರಿವೆ.
ಯಾವ 3 ಬ್ಯಾಂಕ್ ಗಳನ್ನೂ D-SIB ಪಟ್ಟಿಯಲ್ಲಿ ಸೇರಿಸಲಾಗಿದೆ?
2024 ರ ವರ್ಷದಂತೆ ಈ ವರ್ಷವೂ ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, HDFC ಬ್ಯಾಂಕ್ ಮತ್ತು ICICI ಬ್ಯಾಂಕ್ ಅನ್ನು D-SIB ಪಟ್ಟಿಯಲ್ಲಿ ಸೇರಿಸಲಾಗಿದೆ. ಹಾಗೆ RBI ಇವುಗಳನ್ನು ಬಕೆಟ್ ಗಳಾಗಿ ವಿಂಗಡಿಸಿದೆ. SBI ಬಕೆಟ್ 4 ರಲ್ಲಿ (ಹೆಚ್ಚುವರಿ 0.80% CET1 ), HDFC ಬಕೆಟ್ 2 ರಲ್ಲಿ (0.40%) ಮತ್ತು ICICI ಬಕೆಟ್ 1 ರಲ್ಲಿ (0.20%) ಇರಿಸಲಾಗಿದೆ. ಈ ವರ್ಗೀಕರಣವು ಆ ಬ್ಯಾಂಕುಗಳು ನಿರ್ವಹಿಸಬೇಕಾದ ಹೆಚ್ಚುವರಿ ಬಂಡವಾಳದ ಮೊತ್ತವನ್ನು ಆಧರಿಸಿರುತ್ತದೆ.
D-SIB ಪಟ್ಟಿಯಲ್ಲಿನ ಬ್ಯಾಂಕುಗಳ ಇತಿಹಾಸ ಮತ್ತು ಮಹತ್ವ
2015 ಮತ್ತು 2016 ರಲ್ಲಿ SBI ಮತ್ತು ICICI ಮೊದಲ D-SIB ಪಟ್ಟಿಗೆ ಸೇರಿಕೊಂಡವು. ನಂತರ 2017 ರಲ್ಲಿ HDFC D-SIB ಪಟ್ಟಿಗೆ ಸೇರಿಕೊಂಡಿತು. 2015, 2016, 2017 ರಿಂದ ಇಲ್ಲಿವರೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, HDFC ಬ್ಯಾಂಕ್ ಮತ್ತು ICICI ಬ್ಯಾಂಕ್ D-SIB ಪಟ್ಟಿಯಲ್ಲಿ ಸೇರಿಕೊಂಡಿವೆ. ಈ ಬ್ಯಾಂಕುಗಳು ದೇಶದ ಠೇವಣಿ, ಸಾಲಗಳು ಮತ್ತು ಪಾವತಿ ವ್ಯವಸ್ಥೆಯಲ್ಲಿ ದೊಡ್ಡ ಪಾಲನ್ನು ಪಡೆದುಕೊಂಡಿವೆ. ಇವುಗಳ ಪರಿಣಾಮ ಷೇರು ಮಾರುಕಟ್ಟೆ, ಉದ್ಯಮಗಳು ಮತ್ತು ಸಾಮಾನ್ಯ ಜನರ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ RBI ಇವುಗಳ ಮೇಲೆ ವಿಶೇಷ ಗಮನ ಹರಿಸುತ್ತದೆ.
ಠೇವಣಿದಾರರ ಗೊಂದಲಗಳಿಗೆ ಪರಿಹಾರ
ಈ ಮೂರೂ ಬ್ಯಾಂಕ್ ನಲ್ಲಿ ಹಣ ಇಟ್ಟರೆ ನಿಮ್ಮ ಹಣ ಹೆಚ್ಚು ಸುರಕ್ಷಿತವಾಗಿರುತ್ತದೆ. ಯಾವುದೇ ಸಮಸ್ಯೆ ಬಂದರು ಸರ್ಕಾರ ಮತ್ತು RBI ಈ ಬ್ಯಾಂಕುಗಳನ್ನು ಮೊದಲು ಸುರಕ್ಷಿತ ಮಾಡುತ್ತದೆ. ಆದರೆ ಎಲ್ಲಾ ಬ್ಯಾಂಕುಗಳ ಠೇವಣಿಗಳು DICGC ವಿಮೆ ಅಡಿಯಲ್ಲಿ 5 ಲಕ್ಷ ರೂ.ವರೆಗೆ ಮಾತ್ರ ಸುರಕ್ಷಿತ. D-SIB ಸ್ಟೇಟಸ್ ಇವುಗಳನ್ನು ಇನ್ನಷ್ಟು ಬಲಪಡಿಸುತ್ತದೆ. ಈ ಪಟ್ಟಿ ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಸ್ಥಿರತೆಯನ್ನು ತೋರಿಸುತ್ತದೆ. ಈ ಮೂರು ಬ್ಯಾಂಕುಗಳು ದೇಶದ ಆರ್ಥಿಕ ಬುನಾದಿಯಾಗಿ ಮುಂದುವರಿಯಲಿವೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

