2000 Rupees: 2000 ರೂ ಮೇಲೆ ರಾತ್ರೋರಾತ್ರಿ ಇನ್ನೊಂದು ಘೋಷಣೆ ಮಾಡಿದ RBI, ಮತ್ತೊಂದು ಅವಕಾಶ.

ಇನ್ನು ಸ್ವಲ್ಪ ಸಮಯದವರೆಗೆ 2000 ನೋಟುಗಳು ತನ್ನ ಮೌಲ್ಯವನ್ನು ಕಳೆದುಕೊಳ್ಳುವುದಿಲ್ಲ.

RBI Extended The 2000 Note Exchange Date: ದೇಶದಲ್ಲಿ ರದ್ದಾಗಿರುವ 2,000 ರೂ. ನೋಟುಗಳ ವಿನಿಮಯ ಹಾಗೂ ಠೇವಣಿಗೆ RBI ಸೆಪ್ಟೆಂಬರ್ ನ ವರೆಗೂ ಕಾಲಾವಕಾಶವನ್ನು ನೀಡಿದೆ. ಮೇ ಯಿಂದ ಸೆಪ್ಟೆಂಬರ್ ವರೆಗೆ ಕಾಲಾವಕಾಶವನ್ನು ನೀಡಿದ್ದು ಸೆಪ್ಟೆಂಬರ್ 30 ನೋಟು ವಿನಿಮಯ ಅಥವಾ ಠೇವಣಿಗೆ ಕೊನೆಯ ದಿನಾಂಕವಾಗಿದೆ. ಈಗಾಗಲೆ ಆರ್ ಬಿಐ ಈ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡುತ್ತಾ ಇದೆ.

ದೇಶದ ಜನರು ತಮ್ಮ ಬಳಿ ಇರುವ 2,000 ರೂ. ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದು ಅಗತ್ಯವಾಗಿದೆ. ಸದ್ಯ Septembar 30 ಮುಕ್ತಾಯಗೊಂಡಿದ್ದು ಇದೀಗ RBI ನೋಟು ವಿನಿಮಯದಲ್ಲಿ ಮಹತವಾದ ಬದಲಾವಣೆಯನ್ನು ತಂದಿದೆ. ಜನಸಮಯರಿಗೆ ನೋಟು ವಿನಿಮಯ ಹಾಗೂ ಠೇವಣಿಗೆ ಮತ್ತಷ್ಟು ಸಮಯಾವಕಾಸಹವನ್ನು ನೀಡಿದೆ. ಇನ್ನು ಸ್ವಲ್ಪ ಸಮಯದವರೆಗೆ 2,000 ರೂ ನೋಟುಗಳು ತನ್ನ ಮೌಲ್ಯವನ್ನು ಕಳೆದುಕೊಳ್ಳುವುದಿಲ್ಲ.

RBI Extended The 2000 Note Exchange Date
Image Credit: Lawtrend

2000 ರೂ ನೋಟಿನ ಕುರಿತು RBI ಮಹತ್ವದ ಆದೇಶ
ಈ ಹಿಂದೆ ನೋಟು ವಿನಿಮಯ ಹಾಗೂ ಠೇವಣಿಗೆ ನಿಗಧಿಪಡಿಸಿದ ದಿನಾಂಕವನ್ನು ಮುಂದೂಡಲಾಗಿದೆ ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಿದಾಡಿದ್ದವು. RBI ಕೊನೆಯ ದಿನಾಂಕದ ಮುಂದೂಡಿಕೆಯ ಬಗ್ಗೆ ಸಾಕಷ್ಟು ಬಾರಿ ಸ್ಪಷ್ಟನೇ ನೀಡಿದೆ. ಸೆಪ್ಟೆಂಬರ್ 30, 2,000 ರೂ ನೋಟಿನ ವಿನಿಮಯಕ್ಕೆ ಕೊನೆಯ ದಿನಾಂಕ ಎಂದು ಹೇಳಿರುವ RBI ಇದೀಗ ಗಡುವು ಮುಗಿಯುತ್ತಿದ್ದಂತೆ ದಿನಾಂಕವನ್ನು ವಿಸ್ತರಣೆ ಮಾಡಿದೆ.

2000 ನೋಟು ವಿನಿಮಯಕ್ಕೆ ದಿನಾಂಕ ವಿಸ್ತರಣೆ
ನೋಟು ವಿನಿಮಯದ ದಿನಾಂಕ ಹತ್ತಿರವಾಗುತ್ತಿದ್ದರು ಕೆಲವರು ಇನ್ನು ಕೂಡ ತಮ್ಮ ಬಳಿ ಇರುವ ಹಣವನ್ನು ವಿನಿಮಯ ಮಾಡಿಕೊಂಡಿಲ್ಲ. ಇನ್ನು 24,000 ಕೋಟಿ ರೂ. ಮೌಲ್ಯದ 2,000 ರೂ ನೋಟುಗಳು ಬ್ಯಾಂಕಿಗೆ ತಲುಪಿಲ್ಲ. ಅಂದರೆ ಚಲಾವಣೆಯಲ್ಲಿದ್ದ ಒಟ್ಟು ನೋಟುಗಳಲ್ಲಿ ಶೇ. 93 ರಷ್ಟು ಮಾತ್ರ ಬ್ಯಾಂಕಿಂಗ್ ವ್ಯವಸ್ಥೆಗೆ ತಲುಪಿದೆ.
ಇನ್ನು ಉಳಿದ ಶೇ. 7 ರಷ್ಟು ಹಣ ಬ್ಯಾಂಕಿಗೆ ತಲುಪಿಲ್ಲ.

Join Nadunudi News WhatsApp Group

ನೋಟು ವಿನಿಮಯಕ್ಕೆ ಅಕ್ಟೋಬರ್ 7 ಕೊನೆಯ ದಿನಾಂಕ
ಇನ್ನು ಕೂಡ ಜನರು ಹಣವನ್ನು ವಿನಿಮಯ ಮಾಡಿಕೊಳ್ಳುವುದು ಬಾಕಿ ಇದೆ. ಈ ನಿಟ್ಟಿನಲ್ಲಿ RBI Septembar 30 ರ ಕೊನೆಯ ದಿನಾಂಕವನ್ನು October 7 ರ ವರೆಗೆ ಮುಂದೂಡಿದೆ.

 2000 note latest update
Image Credit: India

ನಿಮ್ಮ ಬಳಿ ಇರುವ 2,000 ರೂ ನೋಟನ್ನು ಅಕ್ಟೋಬರ್ 7 ರವರೆಗೆ ನೀವು ವಿನಿಮಯ ಅಥವಾ ಠೇವಣಿ ಮಾಡಬಹುದಾಗಿದೆ. ಇನ್ನು 7 ದಿನಗಳ ಸಮಯಾವಕಾಶವನ್ನು ನೀಡಿರುವ RBI October 8 ರಿಂದ 2,000 ರೂ ನೋಟುಗಳು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದೆ.

Join Nadunudi News WhatsApp Group