Gold Metal Loan New Rules 2025: ಗೋಲ್ಡ್ ಲೋನ್ ಇದು ನಿಮ್ಮ ಚಿನ್ನದ ಆಭರಣಗಳು ಅಥವಾ ಚಿನ್ನದ ನಾಣ್ಯವನ್ನು ಬ್ಯಾಂಕ್ ಅಥವಾ NBFC (ಬ್ಯಾಂಕೇತರ ಹಣಕಾಸು ಸಂಸ್ಥೆ) ನಲ್ಲಿ ಅಡವಿಟ್ಟು ಸಾಲವನ್ನು ಪಡೆಯುದಾಗಿದೆ. ಇದೀಗ ಚಿನ್ನದ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿದ್ದು, ವ್ಯಾಪಾರಿಗಳಿಗೆ ಪಾರದರ್ಶಕತೆ ಮತ್ತು ದುರ್ಬಳಕೆಯನ್ನು ತಡೆಯಲು ಇದೀಗ RBI ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹಾಗಾದರೆ ಗೋಲ್ಡ್ ಲೋನ್ ಗಳಿಗೆ ಸಂಬಂಧಿಸಿದಂತೆ RBI ಜಾರಿಗೆ ತಂದಿರುವ ಹೊಸ ನಿಯಮ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
RBI ಗೋಲ್ಡ್ ಮೆಟಲ್ ಲೋನ್
ಗೋಲ್ಡ್ ಮೆಟಲ್ ಲೋನ್ ಯೋಜನೆಯು ಬ್ಯಾಂಕುಗಳು, ಆಭರಣ ವ್ಯಾಪಾರಿಗಳು, ಆಭರಣ ತಯಾರಕರು, ಮತ್ತು ರಪ್ತುದಾರರಂತಹ ಅರ್ಹ ವ್ಯಕ್ತಿಗಳಿಗೆ ನಗದು ಬದಲಿಗೆ ಭೌತಿಕ ಚಿನ್ನವನ್ನು ಸಾಲವಾಗಿ ನೀಡಲು ಅನುಮತಿ ನೀಡುತ್ತದೆ. ಸಾಲ ಮೊತ್ತವನ್ನು ಚಿನ್ನದ ಶುದ್ಧ ತೂಕ ಮತ್ತು ಮಾರುಕಟ್ಟೆ ಬೆಲೆ ಆಧಾರದಲ್ಲಿ ನಿಗದಿಪಡಿಸಲಾಗುತ್ತದೆ. ಇದೀಗ RBI ಗೋಲ್ಡ್ ಮೆಟಲ್ ಲೋನ್ ನಿಯಮದಲ್ಲಿ ಹೊಸ ಬದಲಾವಣೆಯನ್ನು ಜಾರಿಗೆ ತಂದಿದೆ. ಈ ನಿಯಮಗಳು ಏಪ್ರಿಲ್ 1, 2026 ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ ಮತ್ತು ಇದರಿಂದ ಉದ್ಯಮದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಹಣದ ಸಾಲಕ್ಕಿಂತ ಇದರ ವೆಚ್ಚ ಕಡಿಮೆ ಆಗಿರುತ್ತದೆ, ಏಕೆಂದರೆ ಇದರ ಬಡ್ಡಿದರ ಕಡಿಮೆ ಆಗಿರುತ್ತದೆ. ಭಾರತದಲ್ಲಿ ಸುಮಾರು 800 ರಿಂದ 1000 ಟನ್ ಚಿನ್ನ ಆಮದು ಆಗುತ್ತದೆ. ಇದರಲ್ಲಿ ದೊಡ್ಡ ಪ್ರಮಾಣ ಸಾಲದ ಮೂಲಕ ಬಳಕೆ ಆಗುತ್ತದೆ.
ಹೊಸ ಬದಲಾವಣೆಗಳು
* ಗೋಲ್ಡ್ ಮೆಟಲ್ ಲೋನ್ ನಲ್ಲಿ ಎರಡು ಪ್ರಕಾರವಾಗಿ ವಿಂಗಡಿಸಲಾಗಿದೆ. ಅದರಲ್ಲಿ ಒಂದು ಆಮದು ಮಾಡಿದ ಚಿನ್ನದ ಸಾಲ (ನಾಮ ನಿರ್ದೇಶಿತ ಬ್ಯಾಂಕುಗಳು ಮಾತ್ರ ), ಇನ್ನೊಂದು ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ (ದೇಶಿಯ ಚಿನ್ನದ ಸಾಲ)
* ನಾಮನಿರ್ದೇಶಿತ ಬ್ಯಾಂಕುಗಳು ಆಮದು ಸಾಲವನ್ನು ನೀಡುತ್ತದೆ ಮತ್ತು GMS ಗೆ ಎಲ್ಲ ಬ್ಯಾಂಕುಗಳು ಸಾಲ ನೀಡುತ್ತವೆ.
* ಹೊಸದಾಗಿ ತಯಾರಿಕೆ ಮಾಡದ ಆಭರಣ ಮಾರಾಟಗಾರರು ಕೂಡ ಸಾಲ ಪಡೆಯಬಹುದು, ಆದರೆ ಅವರು ಔಟ್ ಸೊರ್ಸ್ ಮಾಡುವ ಷರತ್ತಿನೊಂದಿಗೆ ತಯಾರಿಕೆಯನ್ನು ಮಾಡಬೇಕು. ಇದರಿಂದ ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.
ಮರುಪಾವತಿಯ ನಿಯಮಗಳು ಮತ್ತು ಮೌಲ್ಯಮಾಪನ
* ಚಿನ್ನದ ಮೌಲ್ಯವನ್ನು ಪ್ರತಿದಿನ ಲಂಡನ್ ಬುಲಿಯನ್ ಮಾರ್ಕೆಟ್ ಅಸೋಸಿಯೇಷನ್ ಗೋಲ್ಡ್ ಪ್ರೈಸ್ ಮತ್ತು RBI ನ ರೂಪಾಯಿ ಡಾಲರ್ ವಿನಿಮಯ ದರದ ಆಧಾರದಲ್ಲಿ ನಿರ್ಧರಿಸಬೇಕು.
* ಇನ್ನು ಮರುಪಾವತಿ ಮುಖ್ಯವಾಗಿ ರೂಪಾಯಿಯಲ್ಲಿ, ಆದರೆ GMS ಸಾಲಗಳಲ್ಲಿ ಚಿನ್ನದ ರೂಪದಲ್ಲಿ ಕೂಡ ಮಾಡಬಹುದಾಗಿದೆ. ರಫ್ತುದಾರರಿಗೆ ವಿದೇಶಿ ವ್ಯಾಪಾರ ನೀತಿಯಂತೆ ಹೆಚ್ಚು ಸಾಲ ನೀಡುತ್ತದೆ (ಸುಮಾರು 180 ರಿಂದ 270 ದಿನಗಳು) ಮತ್ತು ಇತರರಿಗೆ ಗರಿಷ್ಠ 270 ದಿನಗಳನ್ನು ನೀಡಲಾಗುತ್ತದೆ.
* ಬ್ಯಾಂಕುಗಳು ಸಾಲದ ಬಳಕೆಯನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಬೇಕು ಮತ್ತು ತ್ರೈಮಾಸಿಕ ವರದಿಯನ್ನು RBI ಗೆ ಸಲ್ಲಿಸಬೇಕು.
ಬದಲಾವಣೆಯಿಂದ ಲಾಭಗಳು
* ಈ ಹೊಸ ನಿಯಮಗಳು ಚಿನ್ನದ ಸಾಲ ಮಾರುಕಟ್ಟೆಯಲ್ಲಿ ದುರ್ಬಳಕೆ ಮತ್ತು ಮೋಸವನ್ನು ತಡೆಯುತ್ತದೆ.
* ಇದು ಸಣ್ಣ ಮತ್ತು ಮಧ್ಯಮ ಆಭರಣ ವ್ಯಾಪಾರಿಗಳಿಗೆ ಹೆಚ್ಚು ಅನುಕೂಲಕರವಾಗಿದೆ.
* ಹೆಚ್ಚಿನ ಉದ್ಯಮ ಸಂಸ್ಥೆಗಳು ಇದನ್ನು ಒಪ್ಪಿಕೊಂಡಿವೆ, ಏಕೆಂದರೆ ಪಾರದರ್ಶಕತೆಯಿಂದ ನಂಬಿಕೆ ಹೆಚ್ಚಾಗಿದೆ.
* ಸ್ಥಿರತೆ ಮತ್ತು ಬೆಳವಣಿಗೆಗೆ ಸಹಾಯಕವಾಗಲಿದೆ. ಹೆಚ್ಚಿನ ಮಾಹಿತಿಗಾಗಿ RBI ನ ಅಧಿಕೃತ ವೆಬ್ಸೈಟ್ ಆಗಿರುವ https://www.rbi.org.in/ ಗೆ ಸಂಪರ್ಕಿಸಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

