RBI New Rules For Google Pay And PhonePe: ಫೋನ್ ಪೆ, ಗೂಗಲ್ ಪೆ ನಲ್ಲಿ ಹೊಸ ಫೀಚರ್ಸ್ ಜಾರಿಗೆ ತಂದ RBI.

RBI New Rules For Google Pay And PhonePe: ಜನರು ಸುಲಭವಾಗಿ ಹಣವನ್ನು ಪಾವತಿ ಮಾಡಲು ಇದೀಗ ಫೋನ್ ಪೆ (PhonePe), ಗೂಗಲ್ ಪೆ (Google Pay), ಪೆಟಿಎಂ(Paytm)  ಸೇರಿದಂತೆ ಹಲವು ಯೂಪಿಐ ಆಪ್ ಅನ್ನು ಬಳಸುವುದು ಸಾಮಾನ್ಯವಾಗಿದೆ.

ಕೈಯಲ್ಲಿ ನಗದು ಹಣ ವಿಲ್ಲದಿದ್ದರು ಕೂಡ ಮೊಬೈಲ್ ನಲ್ಲಿ ತಮ್ಮ ವಹಿವಾಟನ್ನು ಮಾಡುತ್ತಿದ್ದಾರೆ. ಆದರೆ ಇದೀಗ ಆರ್ ಬಿಐ (RBI) ಫೋನ್ ಪೆ, ಗೂಗಲ್ ಪೆ, ಪೆಟಿಎಂ ಸೇರಿದಂತೆ ಹಲವು ಯೂಪಿಐ ಆಪ್ ಬಳಕೆದಾರರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

RBI implemented new features in Phone Pay, Google Pay.
Image Credit: hindustantimes

ಹೊಸ ಫೀಚರ್ಸ್ ಪರಿಚಯಿಸಿದ ಆರ್ ಬಿಐ (RBI Introduce New Feature) 
ಗ್ರಾಹಕರಿಗೆ ಅನುಕೂಲಕರ ಹಾಗೂ ಸುರಕ್ಷಿತ ವ್ಯವಸ್ಥೆ ಕಲ್ಪಿಸುವ ದ್ರಷ್ಟಿಯಿಂದ ಆರ್ ಬಿಐ (Reserve Bank Of India) ಇದೀಗ ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ. ಸರಕು ಮತ್ತು ಸೇವೆಗಳ ಪಾವತಿಗೆ ಅನುಕೂಲವಾಗುವ ಅಂಶವನ್ನು ಸೇರಿಸಲು ಆರ್ ಬಿಐ ಮುಂದಾಗಿದೆ.

ಯೂಪಿಐ (UPI) ಆಪ್ ಗಳಲ್ಲಿ ಸರಕು ಮತ್ತು ಸೇವೆಗಳ ಪಾವತಿಗೆ ಅನುಕೂಲ
ಯೂಪಿಐ ಆಪ್ ನಲ್ಲಿ ಸರಕು ಮತ್ತು ಸೇವೆಗಳ ಪಾವತಿಗೆ ಅನುಕೂಲವಾಗಲು ಯೂಪಿಐ ನಲ್ಲಿ ಸಿಂಗಲ್- ಬ್ಲಾಕ್ -ಮತ್ತು-ಮಲ್ಟಿಪಲ್ -ಡೆಬಿಟ್- ಪಂಕ್ಷನ್ (Single-Block-And-Multiple-Debit-Function)  ಅನ್ನು ಪರಿಚಯಿಸಿದೆ.

ಇದರಿಂದ ಇ- ಕಾಮರ್ಸ್ ಪ್ಲಾಟಫಾರ್ಮ್ ಗಳಲ್ಲಿ ಮತ್ತು ಸೆಕ್ಯುರಿಟಿಗಳಲ್ಲಿ ಹೂಡಿಕೆ ಪಾವತಿ ಮಾಡುವುದಕ್ಕೆ ಸುಲಭ ಅವಕಾಶ ನೀಡಲಿದೆ ಎಂದು ಆರ್ ಬಿಐ ಗವರ್ನರ್ ಹೇಳಿದ್ದಾರೆ.

Join Nadunudi News WhatsApp Group

New rules for people using Google Pay and Phone Pe from RBI
Image Credit: entrackr

ಆರ್ ಬಿಐ ಪರಿಚಯಿಸಿದ ಹೊಸ ಫೀಚರ್ಸ್ ನ ವಿಶೇಷತೆ
ನೀವು ಮಾಡಲೇಬೇಕಾದ ಹಣದ ಪಾವತಿಗಳಿಗೆ ಒಂದಿಷ್ಟು ಹಣವನ್ನು ತೆಗೆದಿರಿಸಲು ಇದು ಸಹಾಯ ಮಾಡಲಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಆರ್ ಬಿಐ ಪರಿಚಯಿಸಿದ ಹೊಸ ಫೀಚರ್ಸ್ ಹೇಗೆ ಕಾರ್ಯವಿರ್ವಹಿಸುತ್ತದೆ
ಆರ್ ಬಿ ಐ ಹೇಳಿರುವಂತೆ ನೀವು ಯೂಪಿಐ ಆಪ್ ಗಳ ಮೂಲಕ ಇ- ಕಾಮರ್ಸ್. ಹೋಟೆಲ್ ಬುಕಿಂಗ್, ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ, ಇದಕ್ಕಾಗಿ ಒಂದಿಷ್ಟು ಹಣವನ್ನು ಪೂರ್ವ ನಿರ್ಧರಿತವಾಗಿ ಒಂದೆಡೆ ಇಡಲಿದೆ. ಇದರಿಂದ ನೀವು ಸಕಾಲಿಕ ಪಾವತಿಗಳನ್ನು ಮಾಡಬಹುದಾಗಿದೆ.

ಆದರೆ ಸರಕುಗಳು ಅಥವಾ ಸೇವೆಗಳು ನಿಜವಾದ ವಿತರಣೆಯವರೆಗೆ ಹಣವು ಗ್ರಾಹಕರ ಖಾತೆಯಲ್ಲಿಯೇ ಇರಲಿದೆ ಅನ್ನೋದು ಆರ್ ಬಿಐ ಗವರ್ನರ್ ಅವರ ವಾದವಾಗಿದೆ.

UPI has introduced Single-Block-And-Multiple-Debit-Function in UPI to facilitate payment of goods and services in UPI app.
Image Credit: etactics

ಸಿಂಗಲ್ ಬ್ಲಾಕ್ ಮತ್ತು ಮಲ್ಟಿಪಲ್ ಡೆಬಿಟ್ ಪಂಕ್ಷನ್ ಅನ್ನು ಇ- ಕಾಮರ್ಸ್ (E- Commers). ಹೋಟೆಲ್ ಬುಕಿಂಗ್ (Hotel booking), ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಸಹಾಯವಾಗಲು ಇದನ್ನು ಪರಿಚಯಿಸಲಾಗಿದೆ.

ಇದರ ಜೊತೆಗೆ ಆರ್ ಬಿಐ ರಿಟೇಲ್ ಡೈರೆಕ್ಟ್ (Retail Direct) ಯೋಜನೆಯನ್ನು ಬಳಸಿಕೊಂಡು ಸರ್ಕಾರೀ ಭದ್ರತೆಗಳನ್ನು ಖರೀದಿಸಲು ಈ ಫೀಚರ್ಸ್ ಸಹಾಯವಾಗಲಿದೆ ಎಂದು ಗ್ವರಾನಾರ್ ಹೇಳಿದ್ದಾರೆ.

ಇನ್ನು Enhancement ಅನ್ನು ಜಾರಿಗೆ ತರಲು ಭಾರತೀಯ ರಾಷ್ಟ್ರಿಯ ಪಾವತಿ ನಿಗಮಕ್ಕೆ ಪ್ರತ್ಯೇಕ ಸೂಚನೆ ನೀಡುವುದಾಗಿ ಆರ್ ಬಿಐ ಹೇಳಿದೆ. ಇದಲ್ಲದೆ ಎಲ್ಲ ಪಾವತಿಗಳು ಮತ್ತು ಸಂಭಾವನೆಗಳನ್ನು ಸೇರಿಸಲು ಭಾರತ್ ಬಿಲ್ ಪಾವತಿ ವ್ಯಾಪ್ತಿಯಲ್ಲಿ ವಿಸ್ತರಣೆಯನ್ನು ಸಹ ಘೋಷಿಸಲಾಗಿದೆ.

Join Nadunudi News WhatsApp Group