RBI Monetary Policy: ದೇಶದಲ್ಲಿ ಇನ್ನೊಂದು ಹೊಸ ಹಣಕಾಸು ನೀತಿ ಜಾರಿಗೆ ತಂದ RBI, ಗ್ರಾಹಕರಿಗೆ ದಸರಾ ಉಡುಗೊರೆ.

RBI ಸಹಕಾರಿ ಬ್ಯಾಂಕ್ ಗಳಿಗೆ ಪರಿಚಯಿಸಿರುವ ಈ ಹೊಸ ನಿಯಮ ಬ್ಯಾಂಕ್ ನ ಗ್ರಾಹಕರಿಗೆ ಹೆಚ್ಚಿನ ಲಾಭ ನೀಡಲಿದೆ.

RBI Monetary Policy For Co- operative Bank: ಸದ್ಯ RBI ದೇಶದಲ್ಲಿ ಬ್ಯಾಂಕುಗಳಿಗೆ ಹೊಸ ಹೊಸ ನಿಯಮವನ್ನು ಪರಿಚಯಿಸುತ್ತಿದೆ. ಇನ್ನು ದೇಶದ ಸಹಕಾರಿ ಬಂಕ್ ಗಳ ವಿರುದ್ಧ ಈಗಾಗಲೇ RBI ಕ್ರಮ ಕೈಗೊಂಡಿದೆ. Septembar 20 ರಿಂದ October 4 ರವರೆಗೆ ದೇಶದ ಒಟ್ಟು 9 ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಗೊಳಿಸಿದೆ.

ಮಹಾರಾಷ್ಟ್ರ, ಲಕ್ನೋ, ಉತ್ತರ ಪ್ರದೇಶ್, ಗುಜರಾತ್ ಸೇರಿದಂತೆ ಕರ್ನಾಟಕದ ಒಂದು ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು RBI ರದ್ದು ಮಾಡಿದೆ. ಪರವಾನಗಿ ರದ್ದುಗೊಳಿಸುವುದರ ಜೊತೆಗೆ ಕೇಂದ್ರ ಬ್ಯಾಂಕ್ ನಗದು ಹಿಂಪಡೆಯುವಿಕೆಯ ಮಿತಿಯನ್ನು ಕೂಡ ವಿಧಿಸಿದೆ. ಸದ್ಯ RBI ಸಹಕಾರಿ ಬ್ಯಾಂಕುಗಳಿಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಬ್ಯಾಂಕುಗಳು ಕೇಂದ್ರ ಬ್ಯಾಂಕ್ ನ ಈ ಹೊಸ ನಿಯಮವನ್ನು ಪಾಲಿಸುವುದು ಅಗತ್ಯವಾಗಿದೆ.

RBI Monetary Policy
Image Credit: Thehindubusinessline

ದೇಶದಲ್ಲಿ ಇನ್ನೊಂದು ಹೊಸ ಹಣಕಾಸು ನೀತಿ ಜಾರಿಗೆ ತಂದ RBI
RBI ನಗರ ಸಹಕಾರಿ ಬ್ಯಾಂಕ್‌ ಗಳಿಗೆ ಬುಲೆಟ್ ಮರುಪಾವತಿ ಯೋಜನೆಯಡಿ ಚಿನ್ನದ ಮೇಲಿನ ಸಾಲವನ್ನು 4 ಲಕ್ಷ ರೂ. ಗೆ ದ್ವಿಗುಣಗೊಳಿಸಿದೆ. ಮಾರ್ಚ್ 31, 2023 ರೊಳಗೆ ಆದ್ಯತಾ ವಲಯದ ಸಾಲದ ಅಡಿಯಲ್ಲಿ ಎಲ್ಲಾ ಗುರಿಗಳನ್ನು ಪೂರೈಸಿದ ನಗರ ಸಹಕಾರಿ ಬ್ಯಾಂಕ್‌ ಗಳಿಗೆ ಈ ಮಿತಿಯನ್ನು ವಿಸ್ತರಿಸಲಾಗಿದೆ. RBI ಬ್ಯಾಂಕ್‌ಗಳಿಗೆ ನೀಡಿದ ಈ ಪರಿಹಾರದ ಪ್ರಯೋಜನವು ನಗರದಲ್ಲಿ ಸಹಕಾರಿ ಬ್ಯಾಂಕ್ ಗಳ ಖಾತೆಗಳನ್ನು ಹೊಂದಿರುವ ಗ್ರಾಹಕರಿಗೆ ಲಭ್ಯವಿರುತ್ತದೆ.

ಬುಲೆಟ್ ಮರುಪಾವತಿ ಯೋಜನೆ
ನಗರ ಸಹಕಾರ ಬ್ಯಾಂಕ್‌ ಗಳು ಬುಲೆಟ್ ಮರುಪಾವತಿ ಯೋಜನೆಯಡಿಯಲ್ಲಿ ಚಿನ್ನದ ಸಾಲದ ಅಸ್ತಿತ್ವದಲ್ಲಿರುವ ಮಿತಿಯನ್ನು 2 ಲಕ್ಷದಿಂದ 4 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಬುಲೆಟ್ ಮರುಪಾವತಿ ಯೋಜನೆ ಅಡಿಯಲ್ಲಿ, ಸಾಲಗಾರನು ಸಾಲದ ಅವಧಿಯ ಕೊನೆಯಲ್ಲಿ ಅಸಲು ಮೊತ್ತ ಮತ್ತು ಬಡ್ಡಿಯನ್ನು ಒಟ್ಟಿಗೆ ಪಾವತಿಸಲಾಗುತ್ತದೆ ಎಂದು RBI ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿಕೆ ನೀಡಿದ್ದಾರೆ.

RBI Monetary Policy For Co- operative Bank
Image Credit: Goodreturns

ಬುಲೆಟ್ ಮರುಪಾವತಿ ಯೋಜನೆ ಎಂದರೇನು..?
ಚಿನ್ನದ ಮೇಲಿನ ಸಾಲದ ಮೇಲಿನ ಬಡ್ಡಿಯನ್ನು ಅಧಿಕಾರಾವಧಿಯಲ್ಲಿ ಪ್ರತಿ ತಿಂಗಳು ಲೆಕ್ಕಹಾಕಲಾಗುತ್ತದೆ. ಆದರೆ ಅಸಲು ಮೊತ್ತ ಮತ್ತು ಬಡ್ಡಿಯನ್ನು ಒಮ್ಮೆ ಪಾವತಿಸಬೇಕು. ಅದಕ್ಕಾಗಿಯೇ ಇದನ್ನು ಬುಲೆಟ್ ಮರುಪಾವತಿ ಎಂದು ಕರೆಯಲಾಗುತ್ತದೆ. ಸದ್ಯ RBI ಸಹಕಾರಿ ಬ್ಯಾಂಕ್ ಗಳಿಗೆ ಪರಿಚಯಿಸಿರುವ ಹೊಸ ನಿಯಮ ಬ್ಯಾಂಕ್ ನ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ ಎನ್ನಬಹುದು.

Join Nadunudi News WhatsApp Group

Join Nadunudi News WhatsApp Group