Money Withdrawal Rule: ಕ್ಯಾಶ್ ವಿಥ್ಡ್ರಾ ಮಾಡುವ ಎಲ್ಲರಿಗೂ RBI ನಿಂದ ಹೊಸ ರೂಲ್ಸ್, ನಿಯಮ ಬದಲಿಸಿದ RBI
ಕ್ಯಾಶ್ ವಿಥ್ ಡ್ರಾ ಮಾಡಲು RBI ಹೊಸ ನಿಯಮ
RBI Money Withdrawal Rule: ದೇಶದಲ್ಲಿ ವಂಚನೆಯ ಪ್ರಕರಣಗಳು ಒಂದೊಂದೇ ಬೆಳಕಿಗೆ ಬರುತ್ತಿವೆ. ಆನ್ಲೈನ್ ವಂಚಕರು ನಾನಾ ರೀತಿಯಲ್ಲಿ ವಂಚನೆಯನ್ನು ಮಾಡುತ್ತಿದ್ದಾರೆ. ಈಗಂತೂ ಬ್ಯಾಂಕ್ ನಲ್ಲಿನ ನಗದು ವಹಿವಾಟಿನಲ್ಲಿ ವಂಚನೆ ಹೆಚ್ಚು ನಡೆಯುತ್ತಿದೆ.
ಸದ್ಯ RBI ಆನ್ಲೈನ್ ವಂಚಕರು ಬ್ಯಾಂಕುಗಳಲ್ಲಿ ನಗದು ವಹಿವಾಟು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದೆ. ಇದನ್ನು ತಡೆಯಲು ಸದ್ಯ RBI ನಿಯಮಗಳನ್ನು ಬಿಗಿಗೊಳಿಸಿದೆ. ಹೌದು, RBI ಬ್ಯಾಂಕ್ ನ ಕ್ಯಾಶ್ ವಿಥ್ಡ್ರಾವಲ್ ನಿಯಮವನ್ನು ಬದಲಿಸಿದೆ. ನೀವು ಬ್ಯಾಂಕ್ ಗೆ ಹೋಗಿ ಹಣ ವಿಥ್ಡ್ರಾ ಮಾಡುವ ಮುನ್ನ ಈ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
ಕ್ಯಾಶ್ ವಿಥ್ ಡ್ರಾ ಮಾಡಲು RBI ಹೊಸ ನಿಯಮ
ಬ್ಯಾಂಕ್ಗೆ ಹೋಗಿ ನಗದು ಪಾವತಿ ಅಥವಾ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡುವ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಬ್ಯಾಂಕ್ ಗಳು ನಗದು ಸ್ವೀಕರಿಸುವ ವ್ಯಕ್ತಿಯ KYC ದಾಖಲೆಗಳನ್ನು ಪಡೆಯಬೇಕು. ಬ್ಯಾಂಕ್ ಗಳು ನಗದು ಠೇವಣಿದಾರರ ವಿವರಗಳನ್ನು ಪಡೆಯಬೇಕು.
ಬ್ಯಾಂಕುಗಳು ತಮ್ಮ ವಿವರಗಳನ್ನು ಪ್ರತ್ಯೇಕ ದಾಖಲೆಯಲ್ಲಿ ಇಡಬೇಕು.ಬ್ಯಾಂಕ್ ಗಳಲ್ಲಿ ಕ್ಯಾಶ್ ಪೆ ಇನ್ ಮತ್ತು ಕ್ಯಾಶ್ ಪೆ ಔಟ್ ಪಾವತಿ ವಿಧಾನಗಳನ್ನು ಮಾರ್ಪಡಿಸಿದ ನಂತರ ಬ್ಯಾಂಕ್ ಗಳು ಹಣ ಸ್ವೀಕರಿಸುವವರು ಮತ್ತು ಹಣ ಠೇವಣಿದಾರರ ದಾಖಲೆಗಳನ್ನು ಪ್ರತ್ಯೇಕ ಫೈಲ್ನಲ್ಲಿ ಇಡಬೇಕು ಎಂದು ಆರ್ಬಿಐ ನಿರ್ದೇಶಿಸಿದೆ. ನವೆಂಬರ್ 1 ರಿಂದ ಹೊಸ ಕಾನೂನು ಜಾರಿಗೆ ಬರಲಿದೆ.
RBI ಹೊಸ ನಿಯಮ ಯಾವಾಗ ಜಾರಿ…?
ನಗದು ಪಾವತಿಗಳನ್ನು ನೀಡುವ ಬ್ಯಾಂಕ್ ಗಳು ಸ್ವೀಕರಿಸುವವರ ಹೆಸರು ಮತ್ತು ವಿಳಾಸವನ್ನು ಪಡೆಯುವ ಅಗತ್ಯವಿದೆ. ಅಲ್ಲದೆ, ನಗದು ಪಾವತಿಯ ಸಂದರ್ಭದಲ್ಲಿ, ನಗದು ಠೇವಣಿ ಮಾಡುವ ವ್ಯಕ್ತಿಯ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನೋಂದಣಿ ಅಗತ್ಯವಿದೆ.
ಇನ್ನು 2016 ರಲ್ಲಿ ರೂಪಿಸಲಾದ KYC ಮಾರ್ಗಸೂಚಿಗಳ ಪ್ರಕಾರ, ಈ ರಿಜಿಸ್ಟರ್ ನಲ್ಲಿ ಸ್ವಯಂ ಘೋಷಿತ OVD ಅಥವಾ ಅಧಿಕೃತ ದಾಖಲೆಯನ್ನು ಸಹ ಬಳಸಬೇಕು. ಹೆಚ್ಚುವರಿಯಾಗಿ, ಬ್ಯಾಂಕ್ ಖಾತೆಗೆ ಹಣವನ್ನು ಠೇವಣಿ ಮಾಡುವ ವ್ಯಕ್ತಿಯಿಂದ ಹೆಚ್ಚುವರಿ ಪರಿಶೀಲನೆ ಅಗತ್ಯವಿದೆ. ಈ ಎಲ್ಲಾ ಪರಿಷ್ಕೃತ ನಿಯಮಗಳು ನವೆಂಬರ್ ನಿಂದ ಜಾರಿಗೆ ಬರಲಿವೆ ಎನ್ನಲಾಗಿದೆ.